ಮಡಿಕೇರಿ, ನ. ೩: ಮಡಿಕೇರಿ ರಿಲಯನ್ಸ್ ಸ್ಮಾರ್ಟ್ ಬಜಾರ್ ಎದುರಿನ ಕಿರಿದಾದ ರಸ್ತೆಯು ತೀರಾ ಹದಗೆಟ್ಟಿದ್ದು, ಇಲ್ಲಿ ತೆರಳುತ್ತಿದ್ದ ಪಾದಚಾರಿ ಬಿದ್ದು ಗಾಯಗೊಂಡ ಘಟನೆ ಇಂದು ಸಂಭವಿಸಿದೆ.
ಗುAಡಿಮಯವಾಗಿರುವ ರಸ್ತೆಯಿಂದ ಕಬ್ಬಿಣದ ರಾಡ್ಗಳು ಹೊರಕ್ಕೆ ಬಂದಿದ್ದು, ವ್ಯಕ್ತಿಯೊಬ್ಬರು ಇಂದು ಇಲ್ಲಿ ನಡೆಯುತ್ತಿದ್ದಾಗ ಬಿದ್ದು ತಲೆಗೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ನಂತರ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಮರ್ಪಕ ಫುಟ್ಪಾತ್ ಇಲ್ಲದ ಈ ರಸ್ತೆಯ ಬದಿಯಲ್ಲಿ ಚರಂಡಿಯ ಮೇಲೆ ಕಾಡು ಗಿಡಗಳು ಸಹ ಬೆಳೆದು ನಿಂತಿದ್ದು, ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ಕಷ್ಟಸಾಧ್ಯವಾಗಿದೆ.
ರಸ್ತೆ ದುರಸ್ತಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.