ಭಾಗಮಂಡಲ, ನ. ೨: ೧೭ ವರ್ಷಗಳ ಬಳಿಕ ಭಾಗಮಂಡಲ ಭಗಂಡೇಶ್ವರ ಕ್ಷೇತ್ರದ ಅಷ್ಟ ಬಂಧ ಬ್ರಹ್ಮಕಲಶೋತ್ಸವಕ್ಕೆ ಇಂದು ಭಾಗಮಂಡಲದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಐದು ವರ್ಷಗಳ ಬಳಿಕ ಭಾಗಮಂಡಲ ತಲಕಾವೇರಿ ದೇವಾಲಯ ನೂತನ ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರಥ್ಯು ಅಧ್ಯಕ್ಷತೆಯಲ್ಲಿ ಇಂದು ನಡೆದು ದೀಪಾವಳಿ ಬಳಿಕ ಬ್ರಹ್ಮ ಕಲಶೋತ್ಸವ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ನೀಲೇಶ್ವರ ಪದ್ಮನಾಭ ತಂತ್ರಿಗಳ ಮೂಲಕ ಸ್ವರ್ಣಪ್ರಶ್ನೆ ಇರಿಸಿ ಅದರಂತೆ ನಿರ್ಧರಿಸಲಾಗುವುದು. ಭಗಂಡೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ನಿತ್ಯ ಪೂಜೆಗಳನ್ನು ನೆರವೇರಿಸಿದ ಬಳಿಕ ಭಕ್ತರ ಪೂಜಾ ಕಾರ್ಯಗಳಿಗೆ ಅನುವು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾಡಿಕೊಡಲಾಗುವುದು ಎಂದರು. ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ವಸ್ತç ಸಂಹಿತೆಯನ್ನು ಈ ಹಿಂದೆ ಅಳವಡಿಸಲಾಗಿದ್ದು, ಅದು ಸಮರ್ಪಕವಾಗಿ ನಡೆಯುತ್ತಿಲ್ಲ. ವಸ್ತç ಸಂಹಿತೆ ಕಟ್ಟುನಿಟ್ಟಿನ ಪಾಲನೆ ಮಾಡುವಂತಾಗಬೇಕು. ಧಾರ್ಮಿಕ ಕಾರ್ಯಗಳಿಗೆ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುವಂತಾಗಬೇಕು. ಈ ಹಿನ್ನೆಲೆಯಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ತಮ್ಮಲ್ಲಿಗೆ ಬರುವ ಪ್ರವಾಸಿಗರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಕಡ್ಡಾಯವಾಗಿ ವಸ್ತç ಸಂಹಿತೆ ಪಾಲನೆ ಆಗಎಬೇಕು ಎಂದರು.

ಕ್ಷೇತ್ರಗಳಲ್ಲಿ ಭದ್ರತಾ ದೃಷ್ಟಿಯಿಂದ ತಲಾ ಎರಡು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪಿಡಬ್ಲ್ಯೂಡಿ ವತಿಯಿಂದ ಒಂದು ಕೋಟಿ, ನಿರ್ಮಿತಿ ಕೇಂದ್ರದ ವತಿಯಿಂದ ಒಂದು ಕೋಟಿ ಹಾಗೂ ಕಾವೇರಿ ನಿಗಮದ ವತಿಯಿಂದ ಎರಡು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರಿಗೆ ವಸತಿ ಗೃಹಕ್ಕೆ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಆನೆ ಹಾವಳಿಯಿಂದ ಸುತ್ತಮುತ್ತಲಿನ ಬೇಲಿ ಹಾಳಾಗಿದ್ದು, ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಕಲ್ಲಿನ ಹಾಸಿಗೆಗೆ ಬಿಳಿ ಬಣ್ಣ ಬಳಿದು ಭಕ್ತರಿಗೆ ನಡೆಯಲು ಅನುಕೂಲ ಕಲ್ಪಿಸಲಾಗುವುದು. ಭಾಗಮಂಡಲ ತಲಕಾವೇರಿಯಲ್ಲಿ ಮೂವರು ಕಾವಲುಗಾರರನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳಲು ಇಂದಿನ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬAದAತೆ ಕಿಣುಮಾಣಿ ಹಾಗೂ ಪೂಮಾಣಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಭಾಗಮಂಡಲ ದೇವಾಲಯಕ್ಕೆ ಸಂಬAಧಿಸಿದAತೆ ನವೆಂಬರ್ ೬ರಂದು ಚಾಮುಂಡಿ ಕೋಲ/ ವಿಷ್ಣು ಕೋಲ ನಡೆಯಲಿದೆ ಎಂದರು.

ಕಾವೇರಿ ಕುಂಡಿಕೆ ಬಳಿ ಕುಂಕುಮಾರ್ಚನೆ

ತಲಕಾವೇರಿ ಕ್ಷೇತ್ರದ ಗಣಪತಿ ಗುಡಿಯ ಬಳಿ ಕುಂಕುಮಾರ್ಚನೆ ಕೈಗೊಳ್ಳಲಾಗುತ್ತಿತ್ತು, ಅದನ್ನು ಬದಲಾಯಿಸಲು ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹಳೆ ಪದ್ದತಿಯಂತೆ ಕಾವೇರಿ ಕುಂಡಿಕೆ ಬಳಿ ಕುಂಕುಮಾರ್ಚನೆ ಕೈಗೊಳ್ಳಲಾಗುವುದು. ಭಕ್ತರ ಸಂಖ್ಯೆ ಹೆಚ್ಚಾದಲ್ಲಿ ಎರಡು ಕಡೆ ಕುಂಕುಮಾರ್ಚನೆ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಥ್ಯು ಈ ಸಂದರ್ಭ ತಿಳಿಸಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚೋಡುಮಾಡ ಎ. ರಾಜ ಅಯ್ಯಣ್ಣ, ಕೆದಂಬಾಡಿ ಕಾಂಚನ, ದೇವಂಗೋಡಿ ಎನ್. ಹರ್ಷ, ಕೆ.ಎ. ತಿಮ್ಮಯ್ಯ, ಕೆದಂಬಾಡಿ ಜಿ ರಘುನಾಥ್, ಎಂ.ಸಿ ಲಕ್ಷö್ಮಣ, ಶಿವಶಂಕರ , ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಪಾರುಪತ್ತೆಗಾರ ಪೊನ್ನಣ್ಣ, ಕೋಡಿ ಮಹೇಶ್ ಪಾಲ್ಗೊಂಡಿದ್ದರು. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಭಾಗಮಂಡಲದಿAದ ಬೆಂಗಳೂರಿಗೆ ನೂತನ ರಾಜಹಂಸ ಬಸು ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು.

- ಸುನಿಲ್ ಕುಯ್ಯಮುಡಿ