ಆತ್ಮೀಯ ಭಾರತೀಯ ಬಂಧುಗಳೇ, ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ನಿರ್ಧಾರಗಳು ಮೇಲ್ನೋಟಕ್ಕೆ ದಿಟ್ಟ ಹಾಗೂ ಜನಸ್ನೇಹಿ ಮತ್ತು ಜನಪರ ಕಾಳಜಿ ಹೊಂದಿರುವ ನಿರ್ಧಾರಗಳೆಂದು ವ್ಯಾಖ್ಯಾನಿಸಲ್ಪಡುತ್ತಿವೆ. ಆದರೆ ಅವುಗಳ ಪರಿಣಾಮ ಸಮಾಜದ ಮೇಲೆ ಮತ್ತು ಶ್ರೀಸಾಮಾನ್ಯರ ಮೇಲೆ ವ್ಯತಿರಿಕ್ತವಾಗಿ ಬೀರುತ್ತಿದ್ದು ಅದನ್ನು ಸೂಕ್ಷö್ಮವಾಗಿ ಗಮನಿಸಿ ಸೂಕ್ತ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕಿದೆ, ಇಲ್ಲವಾದರೆ ಸಮಾಜದ ಆರೋಗ್ಯ ಡೋಲಾಯಮಾನವಾಗುವ ಸಂಭವವೇ ಹೆಚ್ಚಿದೆ.

ವೈದ್ಯನಾಗಿ ವೈದ್ಯರನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆ, ಖಾಸಗಿ ಆಸ್ಪತ್ರೆಗಳ ಪರವಾಗಿ ವಕಾಲತ್ತು ಹಾಕುತ್ತಿದ್ದೇನೆ ಎಂದು ಭಾವಿಸದೆ ಸಂಪೂರ್ಣವಾಗಿ ಓದಿ ವಿಮರ್ಶೆ ಮಾಡಲು ಮೊದಲೇ ಕೋರುತ್ತೇನೆ.

ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಎಲ್ಲಾ ಸ್ತರದ ಜನರಿಗೆ ಕೈಗೆಟುಕುವ ದರದಲ್ಲಿ ಇಲ್ಲ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಇದರ ಜೊತೆಗೆ ಬಂಡವಾಳಶಾಹಿ ಮನಸ್ಥಿತಿಗಳು ಆಸ್ಪತ್ರೆಗಳ ಆಡಳಿತ ಮಂಡಳಿಯೊಳಗೆ ನುಸುಳಿರುವುದನ್ನೂ ಕೂಡ ಒಪ್ಪಲೇ ಬೇಕು. ಇವುಗಳು ಮತ್ತು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿನ ಸಂಪನ್ಮೂಲ ಕೊರತೆ, ವೈದ್ಯಕೀಯ ಸಿಬ್ಬಂದಿಗಳ ಕೊರತೆ ಹಾಗು ಸಕಾರಾತ್ಮಕ ನಿರ್ವಹಣೆಯ ಕೊರತೆ ಮುಂತಾದವುಗಳು ಜೊತೆಗೂಡಿ ರೋಗಿಗಳ ಸಮಸ್ಯೆಗಳನ್ನು(ಸೂಕ್ತ ಮತ್ತು ತ್ವರಿತ ಚಿಕಿತ್ಸಾ ಲಭ್ಯತೆ) ಘಾತೀಯವಾಗಿ (ಇxಠಿoಟಿeಟಿಣiಚಿಟಟಥಿ) ಹೆಚ್ಚಿಸುತ್ತಿವೆ.

ಮುಂದುವರಿದ ದೇಶಗಳಲ್ಲಿ (ಆeveಟoಠಿeಜ ಅouಟಿಣಡಿies) ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಸರ್ಕಾರಿ ಸ್ವಾಮ್ಯದಲ್ಲಿ ಮತ್ತು ನಿಯಂತ್ರಣದಲ್ಲಿ ಇರುವುದನ್ನು ನಾವು ಗಮನಿಸಲೇಬೇಕು.

ಆ ಮಾದರಿ ವ್ಯವಸ್ಥೆ ಏಕಸ್ವಾಮ್ಯ ಸಾಧಿಸುವುದರಿಂದ ಜನಸಾಮಾನ್ಯರಿಗೆ ಉತ್ತಮ, ಉತ್ಕೃಷ್ಟ ಚಿಕಿತ್ಸೆ ನೀಡುವುದರಲ್ಲಿ ತೊಂದರೆಯಾಗುವ ಸಂಭವಗಳು ಹೆಚ್ಚೆನಿಸಿದರಿಂದ ನಿಯಮಿತವಾಗಿ, ನಿಯಮಾನುಸಾರ ಮತ್ತು ನಿಯಮಗಳ ಪರಿಮಿತಿಯೊಳಗೆ ಖಾಸಗಿ ಆಸ್ಪತ್ರೆಗಳ ಸ್ಥಾಪನೆಗೆ ಸಂವಿಧಾನಾತ್ಮಕವಾಗಿ ಅನುಮತಿ ಕೊಡಲಾಗಿದೆ. [ಸಂವಿಧಾನದ ಆರ್ಟಿಕಲ್ ೧೯(೧)(g), ಆರ್ಟಿಕಲ್ ೧೯(೬), ಆರ್ಟಿಕಲ್ ೨೧ ಮತ್ತು ಓಚಿಣioಟಿಚಿಟ ಊeಚಿಟಣh ಠಿoಟiಛಿಥಿ ೧೯೫೨,೧೯೮೩ & ೧೯೮೬].

ಇದರಿಂದ ಆರೋಗ್ಯಕರ ಸ್ಪರ್ಧೆ ಸೃಷ್ಟಿಯಾಗುವುದಲ್ಲದೆ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಕೈಗೆಟುಕುವ ದರಗಳಲ್ಲಿ ಸಿಗುತ್ತವೆ ಎಂಬ ಸದುದ್ದೇಶದಿಂದ ಈ ನಿಯಮವನ್ನು ಘನ ಸರ್ಕಾರಗಳು ಮನಗಂಡು ಕ್ರಮೇಣವಾಗಿ ಜಾರಿಗೆ ತಂದಿವೆ.

೧.ಪರವಾನಗಿ ನೀಡುವಾಗ ವಿಧಿಸುವ ಷರತ್ತುಗಳು ಹಾಗೂ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ? ೨.ಸ್ವಜನ ಪಕ್ಷಪಾತ ಅಥವಾ ಭ್ರಷ್ಟಾಚಾರಗಳಿಂದ ದೂರ ಇಟ್ಟು ಕಟ್ಟುನಿಟ್ಟಾಗಿ ನಿಯಮಗಳ ಪರಿಶೀಲನೆ ಮಾಡಲಾಗಿದೆಯೇ? ೩.ನಿಯಮಿತವಾಗಿ ಅವುಗಳ(ಸೌಲಭ್ಯಗಳ,ಸುರಕ್ಷತಾ ಕ್ರಮಗಳ)ಲಭ್ಯತೆ ಹಾಗು ನಿಯಮಗಳ ಪಾಲನೆಯಾಗುತ್ತಿವೆಯೇ?? ಎಂಬುದರ ಪರಿಶೀಲನೆಗಳು ನಡೆಯುತ್ತಿವೆಯೇ ಎಂಬುದನ್ನು ಸಹ ಬಹಳ ಸೂಕ್ಷö್ಮವಾಗಿ ಗಮನಿಸಬೇಕು ಇಲ್ಲವಾದರೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ನಿರೀಕ್ಷಿಸುವುದು ಕಷ್ಟ ಹಾಗೂ ವಂಚನೆ ಮತ್ತು ಹಗರಣಗಳನ್ನು ಹತ್ತಿಕ್ಕಲು ಕ್ಲಿಷ್ಟಕರವಾಗುವುದರಲ್ಲಿ ಅನುಮಾನಗಳೇ ಬೇಡ.

ಇವುಗಳಲ್ಲಿ(೧,೨&೩) ಲೋಪವಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಗುಣಮಟ್ಟ, ಚಿಕಿತ್ಸಾ ವೆಚ್ಚದ ಮೇಲಿನ ನಿಯಂತ್ರಣ ಸಾಧಿಸುವುದು ಕಷ್ಟ ಸಾದ್ಯ.

ಇದರೊಂದಿಗೆ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಆಧುನಿಕ ಚಿಕಿತ್ಸಾ ವ್ಯವಸ್ಥೆ ಮತ್ತು ಸಂಬAಧ ಪಟ್ಟ ನುರಿತ ವೈದ್ಯಕೀಯ ತಂಡವನ್ನು ಚಿಕಿತ್ಸೆಗಳಿಗನುಗುಣವಾಗಿ ಅತ್ಯವಶ್ಯಕ ಪರಿಕರಗಳೊಂದಿಗೆ ಸನ್ನದ್ಧಗೊಳಿಸಿದೆಯೇ ಎಂಬ ಅವಲೋಕನವನ್ನು ಸಹ ಸರ್ಕಾರದ ವಿವಿಧÀ ಇಲಾಖೆಗಳು ಮತ್ತು ಇಲಾಖಾ ಮುಖ್ಯಸ್ಥರುಗಳು ನಡೆಸಿ ಜನರಿಗೆ ಎಲ್ಲ ರೀತಿಯಲ್ಲಿ ಪ್ರಚುರಪಡಿಸಿ ಮಾಹಿತಿ ಮತ್ತು ಸೇವೆ ನೀಡಬೇಕು. ಇಲ್ಲವಾದಲ್ಲಿ ಜನರಲ್ಲಿ ಗೊಂದಲ ಮೂಡುವುದಲ್ಲದೆ ನಿರ್ದಿಷ್ಟ, ಉತ್ತಮ, ಉತ್ಕೃಷ್ಟ ಆರೋಗ್ಯ ಸೇವೆ ಜನಸಾಮಾನ್ಯರಿಗೆ ಮರೀಚಿಕೆಯಾಗುವುದಂತೂ ಶತಸಿದ್ಧ.

ಹೊಸ ನಿಯಮಗಳ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಇದ್ದಲ್ಲಿ ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯ(ನೋಂದಾಯಿತ ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಸ್ವಾಮ್ಯದ ಬಹುತೇಕ ಆಸ್ಪತ್ರೆಗಳಲ್ಲಿ), ಆದರೂ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ಕೆಲವೊಂದಿಷ್ಟು ಚಿಕಿತ್ಸೆಗಳಿಗೆ ಹಾಗು ಪರೀಕ್ಷೆಗಳಿಗೆ ಹಣ ಪಾವತಿಸಬೇಕಾಗಿದೆ. ಇದನ್ನು ಬೇರೆಡೆ ಪಡೆಯಲು ಸಹ ಅಷ್ಟೇ ಹಣವನ್ನು ಪಾವತಿಸಬೇಕು, ಹೀಗಿದ್ದಾಗ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಲು ಸಾಮಾನ್ಯವಾಗಿ ಜನರು ಒಲವು ತೋರುತ್ತಾರೆ.

ವಿವಿಧ ಸರ್ಕಾರಿ ಯೋಜನೆ, ನಿಯಮ ಮತ್ತು ನೀತಿಗಳು ಅನುಷ್ಠಾನಗೊಳ್ಳುವ ವೇಳೆಗಾಗಲೇ ಚಿಕಿತ್ಸಾ ವಿಧಾನಗಳು ಹಳೆಯದಾಗಿಬಿಡುತ್ತವೆ/ ಆಗಿಬಿಟ್ಟಿರುತ್ತವೆ.

ಆಗಿಂದಾಗೆ ಉನ್ನತೀಕರಣ ಮಾಡಿಕೊಳ್ಳುವ ವ್ಯವಸ್ಥೆ ಖಾಸಗಿ ವಲಯದಲ್ಲಿ ಇರುವಂತೆ ಸರ್ಕಾರಿ ವ್ಯವಸ್ಥೆಯಲ್ಲೂ ತ್ವರಿತವಾಗಿ ನಡೆದರೆ ಎರಡೂ ಕ್ಷೇತ್ರಗಳಲ್ಲಿನ ಚಿಕಿತ್ಸಾ ವಿಧಾನ ಹಾಗೂ ಗುಣಮಟ್ಟ ಒಂದೇ ಇರುತ್ತದೆ. ಆದರೆ ದುರದೃಷ್ಟವಶಾತ್ ಇದು ಮೇಲೆ ಉಲ್ಲೇಖಿಸಿದಂತೆ ನಡೆಯುತ್ತಿಲ್ಲ, ಇದನ್ನು ಪರಿಗಣನೆಗೆ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದು ಕೊಂಡರೆ ಜನರಿಗೆ ಗುಣಮಟ್ಟದ ಚಿಕಿತ್ಸೆಗಳು ಮತ್ತು ಸೇವೆಗಳು ಕೈಗೆಟುಕುವ ದರದಲ್ಲಿ ಎಲ್ಲೆಡೆ ದೊರೆಯುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬರುವುದು ಸರಕುಗಳ ಕೊರತೆ ಮತ್ತೆ ಸೇವೆಗಳಲ್ಲಿನ ನ್ಯೂನತೆಗಳಿಂದ. ಇದೆ ಕಾರಣಕ್ಕೆ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ದರಗಳು ಗಣನೀಯವಾಗಿ ಏರಿಕೆ ಕಂಡಿವೆ ಹಾಗು ಏರುತ್ತಲೇ ಇವೆ.

ಗುಣಮಟ್ಟದ ಸೇವೆಯನ್ನು ಸರಕಾರದ ಯಾವುದೇ ಸಬ್ಸಿಡಿ ಹಾಗು ನೆರವನ್ನು ಪಡೆಯದೆ, ಬ್ಯಾಂಕ್‌ಗಳಿAದ ಎರವಲು ಪಡೆದ ಹಣದಿಂದ ಆಸ್ಪತ್ರೆಯನ್ನು ನಡೆಸುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಬಿಲ್‌ಗಳನ್ನು ಪಾವತಿಸುವುದರ ಮೇಲೆ ನಿರ್ಬಂಧ ಅಥವಾ ನಿಯಂತ್ರಣ ಅಥವಾ ನಿಯಮಗಳನ್ನು ಹೇರಿದರೆ ಬಹುತೇಕ ಖಾಸಗಿ ಆಸ್ಪತ್ರೆಗಳು ಕ್ಲಿಷ್ಟಕರ ಮತ್ತು ಹೆಚ್ಚು ಅಪಾಯ/ರಿಸ್ಕ್ ಇರುವ ರೋಗಿಗಳಿಗೆ/ರೋಗಗಳಿಗೆ ಸೇವೆಯನ್ನು ಕೊಡಲು ಖಂಡಿತ ಹಿಂದೇಟು ಹಾಕುವುದಂತೂ ಸತ್ಯ. ಇದರಿಂದ ಜನಸಾಮಾನ್ಯರು ತೀವ್ರ ತೊಂದರೆಗೆ ಮುಂದಿನ ದಿನಗಳಲ್ಲಿ ಸಿಲುಕಬಹುದು. ಈಗಾಗಲೇ ಪಶ್ಚಿಮ ಬಂಗಾಳ ಸರ್ಕಾರದ ಕೆಲವು ನಿರ್ಧಾರಗಳಿಂದ (Wesಣ ಃeಟಿgಚಿಟ ಅಟiಟಿiಛಿಚಿಟ ಇsಣಚಿbಟishmeಟಿಣ,ಖegisಣಡಿಚಿಣioಟಿ,ಖeguಟಚಿಣioಟಿ ಚಿಟಿಜ ಖಿಡಿಚಿಟಿsಠಿಚಿಡಿeಟಿಛಿಥಿ ಂಛಿಣ ೨೦೧೭, ಆಚಿಣeಜ ೧೭ಣh ಒಚಿಡಿಛಿh ೨೦೧೭ Wಃ ಉಚಿzeಣಣe) ಖಾಸಗಿ ಆಸ್ಪತ್ರೆಗಳು ಕ್ಲಿಷ್ಟಕರ ಮತ್ತು ಹೆಚ್ಚು ರಿಸ್ಕ್ ಇರುವ ರೋಗಿಗಳನ್ನು ದಾಖಲುಮಾಡಿಕೊಳ್ಳಲು ಹಿಂದೇಟು ಹಾಕುತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ ದೂರದ ಚೆನ್ನೆöÊ, ಹೈದರಾಬಾದ್ ಹಾಗು ಬೆಂಗಳೂರಿನAತಹ ನಗರಗಳಿಗೆ ಹೋಗುತ್ತಿರುವುದು (ಚಿಕಿತ್ಸಾ ವಲಸೆ)ಕಾಣಸಿಗುತ್ತಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ನಿಗದಿಪಡಿಸುವುದು, ಇಲ್ಲಸಲ್ಲದ ಚಾರ್ಜ್ಗಳನ್ನು ಹೇರುವುದು, ಔಷಧಗಳಿಗೆÀ ಎಂ.ಆರ್.ಪಿ ಗಿಂತ ಹೆಚ್ಚಿನ ದರ ನಿಗದಿಪಡಿಸುವುದು, ಬೇಡದ ಶಸ್ತç ಚಿಕಿತ್ಸೆ ಮಾಡುವುದು, ಅವಶ್ಯಕತೆ ಇಲ್ಲದಿದ್ದರೂ IಅUನಲ್ಲಿ ದಾಖಲು ಮಾಡುವುದು ಅಥವಾ ನಿಖರವಲ್ಲದ ಚಿಕಿತ್ಸೆ ಕೊಡುವುದು ಕಂಡುಬAದಲ್ಲಿ/ಮಾಡುತ್ತಿದ್ದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಂಡು, ದಂಡ ಹಾಕುವುದು, ರೋಗಿಗೆ/ ರೋಗಿಗಳಿಗೆ ಹಣ ಮರುಪಾವತಿಮಾಡಿಸುವುದು ಆಗಿಯೇ ಇನ್ನೂ ಹೆಚ್ಚಿನ ಅಕ್ರಮಗಳು ಬೆಳಕಿಗೆ ಬಂದರೆ ಪರವಾನಿಗೆ ರದ್ದುಗೊಳಿಸುವುದು ಮುಂತಾದ ಕಠಿಣ ಕ್ರಮಗಳನ್ನು ನಿಯಮಬದ್ಧವಾಗಿ, ಯಾರಿಗೂ ಶೋಷಣೆಯಾಗದಂತೆ ಹಾಗೂ ತೊಂದರೆಯಾಗದAತೆ ಕಟ್ಟುನಿಟ್ಟಾಗಿ ಖಾಸಗಿ ವಲಯದಲ್ಲಿನ ಅಂತಹ ಆಸ್ಪತ್ರೆಗಳ,(ನಿಯಮಬಾಹಿರ/ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ)ವಿರುದ್ಧ ಕ್ರಮ ತೆಗೆದುಕೊಂಡರೆ ಈ ರೀತಿಯ ಗೊಂದಲಗಳು, ಮೋಸ ಮತ್ತು ವಂಚನೆ ಗಣನೀಯವಾಗಿ ಇಳಿಕೆಯಾಗುವುದರಲ್ಲಿ ಸಂಶಯವೇ ಬೇಡ.

ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ದಾಖಲಾದರೂ ಮಾನವ ಸಂಪನ್ಮೂಲ ಕೊರತೆಯಿಂದ ಕಾಯುವ ಅವಧಿ (ತಿಚಿiಣiಟಿg ಠಿeಡಿioಜ) ಹೆಚ್ಚಾಗಿರುತ್ತದೆ. ಇದರಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುವುದು ಕಷ್ಟಕರ, ಬಹುತೇಕ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಖಿಡಿiಚಿge (ಚಿಕಿತ್ಸೆಯ ಸರದಿ ನಿರ್ಧಾರ) ಮೂಲಕ ತುರ್ತು ಸೇವೆಗಳನ್ನು ಅತೀ ಶೀಘ್ರದಲ್ಲಿ ಕೊಡಲಾಗುತ್ತಿದೆ, ಮಾನವ ಸಂಪನ್ಮೂಲಗಳ ಕೊರತೆಯ ನಡುವೆಯು ಸಹ ಇದು ಅಭಿನಂದನಾರ್ಹ.

ಯಾವುದೇ ಒತ್ತಡಗಳಿಗೆ ಮಣಿಯದೆ, ನಿಗದಿತ ಸ್ಥಳಗಳಲ್ಲಿ (ಭೌಗೋಳಿಕವಾಗಿ ಸೂಕ್ತವಾದ,ಸಾರಿಗೆ ವ್ಯವಸ್ಥೆಗಳನ್ನು ಮತ್ತು ರಸ್ತೆ ಸಂಪರ್ಕವನ್ನು ಸುತ್ತಮುತ್ತಲಿನ ಊರುಗಳಿಗೆ ಹೊಂದಿರುವ ಛಿಚಿಣಛಿhmeಟಿಣ/ರೋಗಿಗಳ ವ್ಯಾಪ್ತಿ ಪ್ರದೇಶ/ಸೇವೆ ಒದಗಿಸುವ ಭೌಗೋಳಿಕ ವ್ಯಾಪ್ತಿ, ಪ್ರದೇಶಗಳು) ನಿಯಮಿತವಾಗಿ ಎಲ್ಲಾ ವ್ಯವಸ್ಥೆಗಳಿರುವ, ಸಂಪೂರ್ಣ ಮಾನವ ಸಂಪನ್ಮೂಲಗಳೊAದಿಗೆ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ, ಆಯಕಟ್ಟಿನ ಸ್ಥಳಗಳಲ್ಲಿ(ರೋಗಿಗಳ ವ್ಯಾಪ್ತಿ ಪ್ರದೇಶ/ಸೇವೆ ಒದಗಿಸಬೇಕೆಂದಿರುವ ಭೌಗೋಳಿಕ ವ್ಯಾಪ್ತಿ ಪ್ರದೇಶಗಳಲ್ಲಿ) ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಕಲ್ಪಿಸಿ, (ಎಲ್ಲ ರೀತಿಯ ರೋಗಗಳಿಗೆ) ಬೇಗನೆ ಉoಟಜeಟಿ ಠಿeಡಿioಜ (ರೋಗಿಗಳನ್ನು ಉಳಿಸುವ ಅಮೂಲ್ಯ ಅವಧಿ)ನ ಪರಿಮಿತಿಯಲ್ಲಿ ಹತ್ತಿರದ ಸೂಪರ್ sಠಿeಛಿiಚಿಟiಣಥಿ ಆಸ್ಪತ್ರೆಗಳಿಗೆ ಕಳುಹಿಸಲು ಸೂಕ್ತ, ಸುಸಜ್ಜಿತ ತ್ವರಿತ ಆಂಬುಲೆನ್ಸ್ ಸೇವೆಗಳನ್ನು ಕಲ್ಪಿಸಿ ಸ್ಟಿçÃಮ್ ಲೈನ್ (ಸುಗಮಗೊಳಿಸಿದರೆ)ಮಾಡಿದರೆ ಅಮೂಲ್ಯ ಜೀವಗಳನ್ನು ಹೆಚ್ಚು ಹೆಚ್ಚಾಗಿ ಉಳಿಸಬಹುದು.

ಉದಾಹರಣೆಗೆ ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸೂಕ್ತ ಹಾಗೂ ತ್ವರಿತ ರೆಫರಲ್ ಕೇಂದ್ರಗಳನ್ನು ಸನ್ನದ್ಧಗೊಳಿಸಿ, ಮಂಗಳೂರು ಮತ್ತು ಮೈಸೂರಿನಲ್ಲಿ ಸುಸಜ್ಜಿತ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ ಸಂಪೂರ್ಣ ಮಾನವ ಸಂಪನ್ಮೂಲವನ್ನು ನೀಡಿದರೆ ಸರ್ಕಾರದ ಬೊಕ್ಕಸದ ಮೇಲೆ ಅನಗತ್ಯ ಹೊರೆ ಕಡಿಮೆ ಯಾಗುವುದಲ್ಲದೆ ಅಲ್ಲಲ್ಲಿ ಹೆಸರಿಗೆ suಠಿeಡಿ sಠಿeಛಿiಚಿಟiಣಥಿ ಆಸ್ಪತ್ರೆಗಳನ್ನು ತೆರೆದು ಸೂಕ್ತ ಮಾನವ ಸಂಪನ್ಮೂಲ ಮತ್ತು ಬೇಕಾಗಿರುವ ಪರಿಕರಗಳನ್ನು ಪೂರೈಸದೆ ಕೊರತೆಗಳು ಎದುರಾದರೆ ಅಂತಹ ಆಸ್ಪತ್ರೆಗಳನ್ನು ಸ್ಥಾಪಿಸಿದ ಉದ್ದೇಶ ಈಡೇರುವುದಿಲ್ಲ. ಒಮ್ಮೊಮ್ಮೆ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದರೂ ರೋಗಿಗಳ ಸಂಖ್ಯೆ ಗಣನೀಯವಾಗಿ ಇಲ್ಲವಾದರೆ ಅಂತಹ ವ್ಯವಸ್ಥೆಯ ಸ್ಥಾಪನೆ ಸರ್ಕಾರದ ಬೊಕ್ಕಸಕ್ಕೆ ದುಂದು ವೆಚ್ಚವಾಗುತ್ತದೆ.

ರಾಜಕೀಯ, ಪ್ರಾದೇಶಿಕ ಹಾಗೂ ವೈಯಕ್ತಿಕ ಲಾಬಿ ಮತ್ತು ಪ್ರತಿಷ್ಠೆಗಳನ್ನು ಬದಿಗಿಟ್ಟು, ಸೂಕ್ತ ಅಧ್ಯಯನವನ್ನು ಕೈಗೊಂಡು, ಭೌಗೋಳಿಕವಾಗಿ ಸೂಕ್ತವಾದ, ಸುತ್ತಮುತ್ತಲಿನ ಪ್ರದೇಶಗಳಿಗೆ ಸೂಕ್ತವಾದ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಎಲ್ಲಾ ಸಂಪನ್ಮೂಲಗಳು ಇರುವಂತಹ ಆಸ್ಪತ್ರೆಗಳನ್ನು ನಿರ್ಮಿಸಿದರೆ ಸಾರ್ವಜನಿಕವಾಗಿ ಹೆಚ್ಚು ಉಪಯುಕ್ತವಾಗುತ್ತದೆ.

ಈ ರೀತಿ ಕ್ರಮ ಕೈಗೊಳ್ಳುವುದರಿಂದ ಸರ್ಕಾರದ ಬೊಕ್ಕಸದ ಸದುಪಯೋಗವಾಗುವುದಲ್ಲದೆ ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆಯನ್ನು ಸಮೀಪದಲ್ಲೇ ಹಾಗೂ ಸೂಕ್ತ ಸಮಯದಲ್ಲೇ ದೊರೆಯುವಂತ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಬಹುದು.

- ಡಾ. ಸತೀಶ್ ಶಿವಮಲ್ಲಯ್ಯ,

ಎಸ್‌ಎಸ್ ಆಸ್ಪತ್ರೆ, ಮಡಿಕೇರಿ.