ವೀರಾಜಪೇಟೆ, ನ. ೧: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಡಿಕೇರಿಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾಮಟ್ಟದ ಶಾಲಾ ಕ್ರೀಡಾ ಸ್ಪರ್ಧೆಯಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಆರ್ಯನ್ ಕುನ್ವರ್ ಸ್ಪರ್ಧಿಸಿ ಉದ್ದ ಜಿಗಿತದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ರಾಜ್ಯಮಟ್ಟದಲ್ಲಿ ಜರುಗುವ ಮುಂದಿನ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಸಂತ ಅನ್ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶಿನಿ ಆ್ಯನ್ಸಿ ಅವರು ವಿದ್ಯಾರ್ಥಿಗೆ ತರಬೇತಿ ನೀಡಿದ್ದಾರೆ. ಆರ್ಯನ್ ಕುನ್ವರ್, ವೀರಾಜಪೇಟೆಯ ತಿಮ್ಮಯ್ಯ ಲೇಔಟ್ನ ಚಂದ್ರ ಬಹದ್ದೂರ್ ಕುನ್ವರ್ ಹಾಗೂ ಶರದಾ ಕುನ್ವರ್ ದಂಪತಿ ಪುತ್ರ.