ಕರಿಕೆ, ನ. ೧: ಇಲ್ಲಿಗೆ ಸಮೀಪದ ಚೆತ್ತುಕಾಯದಿಂದ ಕರಿಬಳಪು ಪರಿಶಿಷ್ಟ ಜಾತಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸರಕಾರದ ಅನುದಾನದ ಕೊರತೆಯಿಂದ ಕಾಡುಕಡಿದು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯ ಹಾಡಿ ನಿವಾಸಿಗಳು ಮೂರು ದಿನಗಳ ಕಾಲ ಸ್ವಯಂ ಶ್ರಮದಾನ ಮಾಡಿದ್ದಾರೆ.
ಕಾಡು ಕಡಿದು ರಸ್ತೆ ದುರಸ್ತಿ ಮಾಡಿ ಮಾದರಿಯಾಗಿದ್ದಾರೆ. ಈ ಸಂದರ್ಭ ಕಾಲೋನಿಯ ಪ್ರಮುಖರು ಹಾಗೂ ನಿವಾಸಿಗಳು ಪಾಲ್ಗೊಂಡಿದ್ದರು.