ಚೆಯ್ಯಂಡಾಣೆ, ಅ. ೩೦: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ ಆಚರಣೆಯ ಅಂಗವಾಗಿ ಸಮಸ್ತ ಸೆಂಟಿನರಿ ಪ್ರಚಾರ ಸಮ್ಮೇಳನ ಹಾಗೂ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಕಾರ್ಯಕ್ರಮ ಸಂಘ ಕುಟುಂಬದ ವತಿಯಿಂದ ತಾ. ೩೧ ರಂದು (ಇಂದು) ಸಂಜೆ ೬.೩೦ ಕ್ಕೆ ಕುಂಜಿಲದಲ್ಲಿ ಆಯೋಜಿಸಲಾಗಿದೆ. ಕುಂಜಿಲ ಪೈನರಿ ಆಡಿಟೋರಿಯಂನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ಸಫÀ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಹಲ್ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಳ್ ಆಟೀರಿ ಮುಖ್ಯ ಭಾಷಣ ಮಾಡಲಿದ್ದಾರೆ.