ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಅ. ೨೮: ವೃದ್ಧಾಪ್ಯದ ಸಂದರ್ಭದಲ್ಲಿ ಆಸ್ತಿಯನ್ನು ವರ್ಗಾಯಿಸುವ, ಹಕ್ಕು ಬಿಡುಗಡೆ ಮಾಡುವ ಸಂದರ್ಭದಲ್ಲಿ ಪೋಷಕರನ್ನು ಪೋಷಣೆ ಮಾಡುವ ಷರತ್ತು ವಿಧಿಸದಿದ್ದರೂ ಪೋಷಣೆ ಕಡ್ಡಾಯ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ವೃದ್ಧಾಪ್ಯದಲ್ಲಿ ಹೆತ್ತವರನ್ನು ನೋಡಿಕೊಳ್ಳುವ ಲಿಖಿತ ಷರತ್ತು ಹಕ್ಕು ಬಿಡುಗಡೆ ಪತ್ರದಲ್ಲಿ ಇಲ್ಲದಿದ್ದರೂ, ಹಿರಿಯ ನಾಗರಿಕರ ಹಿತರಕ್ಷಣೆ ಮತ್ತು ಪೋಷಣೆ ಕಾಯ್ದೆಯಡಿ ಆಸ್ತಿ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರ ಉಪವಿಭಾಗಾಧಿಕಾರಿಗಳಿಗೆ ಇರಲಿದೆ ಎಂದು ತಿಳಿಸಿದ್ದು, ಉಪವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದಿದೆ.

ತಂದೆಯಿAದ ಖರೀದಿ ಮಾಡಿದ್ದ ಜಮೀನಿನ ಬಿಡುಗಡೆ ಪತ್ರವನ್ನು ರದ್ದುಪಡಿಸಿದ್ದ ಉಪವಿಭಾಗಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಮಗಳು ಮತ್ತು ಅಳಿಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಿಸಲು ಪ್ರಸ್ತುತ ಕಾನೂನಿನಲ್ಲಿರುವ ಸುರಕ್ಷತಾ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ತಿಳಿಸಿದೆ.

ಆಸ್ತಿ ವರ್ಗಾವಣೆ ಅಥವಾ ಹಕ್ಕು ಬಿಡುಗಡೆಗೆ ಸಂಬAಧಿಸಿದ ದಾಖಲೆಗಳಿಗೆ ಸಹಿ ಹಾಕುವ ಮೊದಲು ಅವುಗಳ ಸ್ವರೂಪ ಮತ್ತು ಕಾನೂನು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಮಹತ್ವದ ಕುರಿತು ಹಿರಿಯರಿಗೆ ಅರಿವು ಮೂಡಿಸಬೇಕು. ಆಸ್ತಿ ಪಡೆದವರು ನಿರ್ವಹಣೆ. ಪೋಷಣೆ ಒದಗಿಸಬೇಕು ಎಂಬ ಉದ್ದೇಶವಿದ್ದರೆ, ಅದನ್ನು ದಾಖಲೆಯಲ್ಲಿ ಸ್ಪಷ್ಟವಾಗಿ ನಮೂದಿಸುವುದು ಸೂಕ್ತ. ಜೀವನೋಪಾಯ ಅಥವಾ ಭದ್ರತೆಯ ಪ್ರಮುಖ ಮೂಲವಾಗಿರುವ ಆಸ್ತಿಯನ್ನು ವರ್ಗಾಯಿಸುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿಸಬೇಕು ಎಂದು ಪೀಠ ಹೇಳಿದೆ.

ದಾಖಲೆಗೆ ಸಹಿ ಹಾಕುವ ವ್ಯಕ್ತಿಗೆ ಅದರ ಸ್ವರೂಪ ಮತ್ತು ಕಾನೂನು ಪರಿಣಾಮಗಳು ಅರ್ಥವಾಗಿವೆಯೇ ಎಂಬುದನ್ನು ನೋಂದಣಿ ಅಧಿಕಾರಿಗಳು ಸೂಕ್ತವಾಗಿ ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ನೋಂದಣಿಗೆ ಸಂಬAಧಿಸಿದ ಕಾನೂನುಬದ್ಧ ಅವಶ್ಯಕತೆಗಳು ಪಾಲನೆಯಾಗಿರುವುದನ್ನೂ ಪರಿಶೀಲಿಸಬೇಕು. ನೋಂದಣಿ ಕಾಯ್ದೆ, ೧೯೦೮ ಮತ್ತು ಅನ್ವಯಿಸುವ ನಿಯಮಗಳಿಗೆ ಅನುಗುಣವಾಗಿ, ವಿಶೇಷವಾಗಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ನಿಕಟ ಸಂಬAಧಿಕರಿಗೆ ವರ್ಗಾಯಿಸುವ ಅಥವಾ ಹಕ್ಕುಬಿಡುಗಡೆ ಮಾಡುವ ಸಂದರ್ಭಗಳಲ್ಲಿ ನೋಂದಣಿ ಅಧಿಕಾರಿಗಳಿಗೆ ನೆರವಾಗುವ ಆಡಳಿತಾತ್ಮಕ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸಬಹುದು ಎಂದು ಪೀಠ ಸಲಹೆ ನೀಡಿದೆ.

ಹಿರಿಯ ನಾಗರಿಕರ ಆಸ್ತಿ ವರ್ಗಾವಣೆಯಿಂದ ನಿರ್ವಹಣೆ ಅಥವಾ ಆರೈಕೆ ವಿಚಾರದಲ್ಲಿ ಸಮಸ್ಯೆಗಳು ಎದುರಾದಲ್ಲಿ ಕಾನೂನಿನಡಿ ಲಭ್ಯವಿರುವ ಪರಿಹಾರಗಳ ಕುರಿತು ಅರಿವು ಮೂಡಿಸುವುದೂ ಅಗತ್ಯವಿದೆ. ಈ ಕುರಿತಂತೆ ಕಾನೂನು ಮತ್ತು ತನ್ನ ನೀತಿ ರೂಪಿಸುವ ಸಂಬAಧ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಷ್ಟೇ ಅಲ್ಲದೆ, ಲಕ್ಷಾಂತರ ರೂಪಾಯಿ ನಗದು ವ್ಯವಹಾರದ ಆರೋಪ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಆದಾಯ ತೆರಿಗೆ (ಐಟಿ) ಇಲಾಖೆಯ ತನಿಖೆಗೆ ವಹಿಸಿ ಆದೇಶಿಸಿದೆ. ಅರ್ಜಿದಾರರು ತಮ್ಮ ತಂದೆಗೆ ರೂ. ೧೭.೨೫ ಲಕ್ಷ ನಗದು ನೀಡಿದ್ದೇವೆ ಎಂದು ತೋರಿಸಲು ನೀಡಿದ ರಶೀದಿಗಳು ಗೊಂದಲಕ್ಕೆ ಕಾರಣವಾಗಿವೆ. ಅಲ್ಲದೆ, ನಗದು ಪಾವತಿಸಲು ಅವರ ಬಳಿ ಹಣಕಾಸಿನ ಮೂಲಗಳಿದ್ದವು ಎಂಬುದಕ್ಕೆ ಸೂಕ್ತ ಸಾಕ್ಷö್ಯಗಳನ್ನು ಒದಗಿಸಿಲ್ಲ. ಆದ್ದರಿಂದ ಈ ಪ್ರಕರಣದ ಸಂಪೂರ್ಣ ಕಡತಗಳನ್ನು ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಿಗೆ ರವಾನಿಸಿ, ಈ ಸಂಬAಧ ತನಿಖೆ ನಡೆಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಸೂರಿನ ಹಿರಿಯ ನಾಗರಿಕ ಜಿ. ಬೈರಪ್ಪ ಎಂಬುವವರು ತಮ್ಮ ಹೆಸರಿನಲ್ಲಿದ್ದ ಹುಣಸೇಕಟ್ಟೆ ಗ್ರಾಮದಲ್ಲಿದ್ದ ೧ ಎಕರೆ ೩೦ ಗಂಟೆ ಜಮೀನನ್ನು ಮಗಳಾದ ದ್ರಾಕ್ಷಾಯಣಿ ಅಲಿಯಾಸ್ ಗಿರಿಜಾ ಮತ್ತು ಅಳಿಯ ಚಂದ್ರು ಅವರಿಗೆ ಬಿಟ್ಟುಕೊಟ್ಟು ನೋಂದಣಿ ಮಾಡಿಕೊಟ್ಟಿದ್ದರು.

ಆದರೆ, ಆಸ್ತಿ ಕೈಸೇರಿದ ನಂತರ ಮಗಳು ಮತ್ತು ಅಳಿಯ ತಮ್ಮನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಮತ್ತು ವಂಚಿಸಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿ ಬೈರಪ್ಪ ಅವರು ಶಿವಮೊಗ್ಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿಗಳು ಬೈರಪ್ಪ ಅವರ ಪರವಾಗಿ ತೀರ್ಪು ನೀಡಿ, ಮಗಳ ಹೆಸರಿಗೆ ಮಾಡಲಾಗಿದ್ದ ಹಕ್ಕು ಬಿಡುಗಡೆ ಪತ್ರವನ್ನು ರದ್ದುಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಮಗಳು ಮತ್ತು ಅಳಿಯ ಚಂದ್ರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಸ್ತಾವಿತ ಜಮೀನಿಗೆ ನಾವು ರೂ. ೧೭.೨೫ ಲಕ್ಷ ಹಣ ನೀಡಿ ಆಸ್ತಿಯನ್ನು ಪಡೆದುಕೊಂಡಿದ್ದೇವೆ. ಹಕ್ಕು ಬಿಡುಗಡೆ ಪತ್ರದಲ್ಲಿ ತಂದೆಯನ್ನು ಪೋಷಿಸಬೇಕು ಎಂಬ ಯಾವುದೇ ಷರತ್ತು ವಿಧಿಸಿಲ್ಲ. ಹೀಗಾಗಿ ಹಿರಿಯ ನಾಗರಿಕರ ಕಾಯ್ದೆ ಸೆಕ್ಷನ್ ೨೩ರ ಅಡಿಯಲ್ಲಿ ಈ ಆಸ್ತಿ ನೋಂದಣಿ ರದ್ದು ಮಾಡಲು ಉಪವಿಭಾಗಾಧಿಕಾರಿಗಳಿಗೆ ಅಧಿಕಾರವಿಲ್ಲ ಎಂದು ವಾದಿಸಿದ್ದರು. ಆದರೆ ಪೀಠ ಈ ವಾದವನ್ನು ತಳ್ಳಿ ಹಾಕಿ ತೀರ್ಪು ನೀಡಿದೆ.