ಐಗೂರು, ಅ. ೨೬: ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಪ್ರಥಮ ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿ ಸೋಮವಾರಪೇಟೆಯ ಚೆನ್ನಬಸಪ್ಪ ಸಭಾಂಗಣದಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ದೀಪ ಬೆಳಗಿಸಿದ ನಂತರ ಪಂದ್ಯಾಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕ್ರೀಡೆಯು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ನೀಡುವುದರ ಜೊತೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ನನ್ನ ಊರಿನವರೇ ಆದ ತರಬೇತಿ ಶಿಕ್ಷಕ ಎನ್.ಸಿ. ಸುದರ್ಶನ್ ರಾಜ್ಯಮಟ್ಟದ ಪಂದ್ಯಾವಳಿಯನ್ನು ಸೋಮವಾರಪೇಟೆಯಲ್ಲಿ ಆಯೋಜಿಸಿರುವುದು ಸಂತಸದ ವಿಷಯ ಎಂದರು.

ಎಂಟು ಜಿಲ್ಲೆಗಳ ಒಟ್ಟು ೨೧೦ ಸ್ಪರ್ಧಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಬೆಂಗಳೂರು ಜಿಲ್ಲೆ ಸಮಗ್ರ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿದರೆ, ಚಾಮರಾಜನಗರ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು. ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಡಾಕ್ಟರ್ ಮಂತರ್ ಗೌಡ ಕಾರ್ಯಕ್ರಮದ ಆಯೋಜಕರಾದ ದಿನೇಶ್, ನಾಗೇಶ್, ಸುಜಾತ, ಸಾವಿತ್ರಿ , ಪ್ರೇಮ ಮತ್ತು ಆರತಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಶಾಸಕರು, ಗ್ರಾಮೀಣ ಪ್ರದೇಶದಲ್ಲಿ ಬಾಕ್ಸಿಂಗ್ ಕ್ರೀಡೆಯು ಬೆಳೆಯಲು ಮಕ್ಕಳ ಪೋಷಕರ ಸಹಕಾರ ಅಗತ್ಯವಾಗಿದೆ. ಕ್ರೀಡಾಪಟುಗಳು ಶಿಕ್ಷಕರಿಗೆ ಗೌರವ ಕೊಡಬೇಕಾಗಿದೆ. ಕಳೆದ ಬಾರಿ ನೇಪಾಳಕ್ಕೆ ಅಂತರರಾಷ್ಟಿçÃಯ ಮತ್ತು ವಿಶ್ವ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ತೆರಳಿದ ವಿದ್ಯಾರ್ಥಿಗಳಿಗೆ ತಾನು ಸಹಾಯಧನ ನೀಡಿದ್ದು ಆ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿಯ ಪದಕ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಮಿಕ್ಸ್ ಬಾಕ್ಸಿಂಗ್ ಕ್ರೀಡೆಗೆ ಅದರಲ್ಲೂ ವಿಶೇಷವಾಗಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳಿಗೆ ವಿಶೇಷ ಸವಲತ್ತುಗಳನ್ನು ವೈಯಕ್ತಿಕ ಮತ್ತು ಸರಕಾರದ ಕಡೆಯಿಂದ ನೀಡುವುದಾಗಿ ಭರವಸೆ ನೀಡಿದರು.

ಪ್ರಾರಂಭದಲ್ಲಿ ಎಂ.ಕೆ ಮೋಹನ್ ಸ್ವಾಗತಿಸಿ ಕೊನೆಗೆ ವಂದಿಸಿದರು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಕೆಡಿಪಿ ಸದಸ್ಯೆ ಸಬಿತಾ ಚೆನ್ನಕೇಶವ, ಕೆಪಿಸಿಸಿ ಓಬಿಸಿ ಕಾರ್ಯದರ್ಶಿ ಬಿ.ಎಸ್ ಆನಂದ್, ಕಾಫಿ ಬೆಳೆಗಾರರಾದ ಕೆ.ಪಿ. ಕುಮಾರ್ (ಉಲ್ಲಾಸ್), ಕುಂಬಗೌಡನ ಜಗದೀಪ್ ಕೆ.ಪಿ ರೋಷನ್, ಪತ್ರಕರ್ತ ಸುಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್, ಮಿಕ್ಸ್ ಬಾಕ್ಸಿಂಗ್ ಅಧ್ಯಕ್ಷ ಡಿ ಚಂದ್ರು, ಕಾರ್ಯದರ್ಶಿ ಎನ್. ಸಿ ಸುದರ್ಶನ್ ಮತ್ತು ಕಾಂಪಿಟೇಶನ್ ನಿರ್ದೇಶಕ ಹೊನ್ನ ಗಂಗಪ್ಪ ಉಪಸ್ಥಿತರಿದ್ದರು.