ಮಡಿಕೇರಿ, ಅ. ೨೬: ೬ ದಶಕಗಳ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಡೈಮಂಡ್ ಜುಬಿಲಿಯ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಆಂದೋಲನ ಮಾಸಾಚರಣೆಯ ಅಂಗವಾಗಿ ವಿವಿಧ ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತೆ, ವಿದ್ಯಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉಪನ್ಯಾಸ, ಮನೆಮನೆಗಳಿಗೆ ಕರಪತ್ರ ಹಂಚಿಕೆ, ಗಲೀಜು ಮಾಡುವ ಕಾರ್ನರ್ಗಳಲ್ಲಿ ಭಿತ್ತಿಪತ್ರ ಅಳವಡಿಕೆ, ಆಯ್ದ ಸ್ಥಳಗಳಲ್ಲಿ ಬಾಟಲ್ ಬೂತ್ ಸ್ಥಾಪನೆ, ಮೊದಲಾದ ಕಾರ್ಯಕ್ರಮಗಳನ್ನು ತಿಂಗಳು ಪೂರ್ತಿ ಆಚರಿಸಲು ತೀರ್ಮಾನಿಸಿದ್ದು, ಈ ಸರಣಿ ಕಾರ್ಯಕ್ರಮದ ಅಂಗವಾಗಿ ಪ್ರಥಮ ಉಪನ್ಯಾಸ ಮತ್ತು ಪೋಸ್ಟರ್ ಬಿಡುಗಡೆ ಸುಳ್ಯ ಗಾಂಧಿನಗರ ಮದರಸ ವಠಾರದಲ್ಲಿ ಚಾಲನೆ ನೀಡಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ವಹಿಸಿದ್ದರು, ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಉಸ್ತಾದ್ ವಿಶೇಷ ಉಪನ್ಯಾಸ ನೀಡಿ ಸ್ವಚ್ಛತೆಗೆ ಇಸ್ಲಾಂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ, ಶುದ್ದಿ ಇಲ್ಲದೆ ಮಾಡುವ ಎಲ್ಲಾ ಸತ್ಕರ್ಮಗಳು ನಿಷ್ಪçಯೋಜಕ ಎಂದರು.
ಎAಜೆಎA ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್ ಭಿತ್ತಿ ಪತ್ರ ಬಿಡುಗಡೆ ಗೊಳಿಸಿದರು ವೇದಿಕೆಯಲ್ಲಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ಆಂದೋಲನದ ಸಂಚಾಲಕ ಯಾಕೂಬ್ ಹಾಜಿ ಎಸ್ಟಿ, ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಜನತಾ ನಿಕಟಪೂರ್ವ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ಲ ಕಟ್ಟೆಕ್ಕಾರ್, ಗಾಂಧಿನಗರ ಮುದರ್ರಿಸ್ ಮುಬಶಿರ್ ಅಹ್ಸನಿ ಉಸ್ತಾದ್ ಹಾಜರಿದ್ದರು. ಮದ್ರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ನಿರ್ದೇಶಕ ಶಾಫಿ ಕುತ್ತಾಮೊಟ್ಟೆ ವಂದಿಸಿದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ, ಹನೀಫ್ ಜನತಾ, ಹನೀಫ್ ಬುಶ್ರಾ, ನಿರ್ದೇಶಕರುಗಳಾದ ಅಬ್ದುಲ್ ಗಫ್ಫಾರ್, ಮಜೀದ್ ಕೆ.ಪಿ, ಸಿರಾಜ್ ಫ್ಯಾನ್ಸಿ, ಮುಹಿಯ್ಯದ್ದೀನ್ ಫ್ಯಾನ್ಸಿ, ಮದರಸ ಉಸ್ತಾದ್ ಕುಂಜಿಲ ಮದನಿ, ಮುನೀರ್ ಅನ್ಸಾರ್ ಮೊದಲಾದವರು ಭಾಗವಹಿಸಿದ್ದರು.