ಸೋಮವಾರಪೇಟೆ, ಅ. ೨೬: ಹೊಲದಲ್ಲಿ ಮೇಯಲು ಕಟ್ಟಿಹಾಕಿದ್ದ ಹಸುವೊಂದನ್ನು ಹುಲಿ ಕೊಂದು, ಅರಣ್ಯದೊಳಗೆ ಎಳೆದೊಯ್ದು ತಿಂದಿರುವ ಘಟನೆ ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಹರೀಶ್ ಅವರಿಗೆ ಸೇರಿದ ಹಸುವನ್ನು ಎಂದಿನAತೆ ತಮ್ಮ ಹೊಲದಲ್ಲಿ ಮೇಯಲು ಕಟ್ಟಿಹಾಕಲಾಗಿತ್ತು. ಇಂದು ಮಧ್ಯಾಹ್ನದ ವೇಳೆ ಪಕ್ಕದ ಯಡವನಾಡು ಮೀಸಲು ಅರಣ್ಯದಿಂದ ಆಗಮಿಸಿರುವ ಹುಲಿಯು ಹಸುವಿನ ಮೇಲೆ ಧಾಳಿ ನಡೆಸಿ, ಅರಣ್ಯದೊಳಗೆ ಎಳೆದೊಯ್ದಿದೆ.
ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಹಸುವಿನ ಮಾಲೀಕ ಹರೀಶ್ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಹುಲಿ, ಅರಣ್ಯದೊಳಗೆ ತೆರಳಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.