ಮಡಿಕೇರಿ, ಅ. ೨೬: ನಗರದ ರಾಜಾಸೀಟ್ ರಸ್ತೆಯಲ್ಲಿರುವ ಗಾಂಧಿಮೈದಾನದ ರಂಗಮAದಿರ ನೆಲಸಮಗೊಳಿಸಿ ನೂತನ ರಂಗಮAದಿರ ನಿರ್ಮಾಣ ಕಾರ್ಯಕ್ಕೆ ಅಡಿ ಇಡಲಾಗುತ್ತಿದೆ. ರೂ. ೨.೧೦ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಹಳೆಯ ರಂಗಮAದಿರವನ್ನು ಸೋಮವಾರ ಕೆಡವಲಾಗಿದ್ದು, ವ್ಯವಸ್ಥಿತವಾಗಿ ನೂತನ ರಂಗಮAದಿರ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ.
ನಗರದಲ್ಲಿ ಹಲವು ವರ್ಷಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು, ಪ್ರತಿಭಟನೆಗಳು ಸೇರಿದಂತೆ ಸಾರ್ವಜನಿಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಹಳೆಯ ರಂಗಮAದಿರವನ್ನು ಇದೀಗ ಯಂತ್ರಗಳ ಮೂಲಕ ನೆಲಸಮಗೊಳಿಸಲಾಗಿದ್ದು, ಅದರ ಜಾಗದಲ್ಲೇ ನೂತನ ಹಾಗೂ ಸುಸಜ್ಜಿತ ರಂಗಮAದಿರ ನಿರ್ಮಾಣಗೊಳ್ಳಲಿದೆ.
ನೂತನ ರಂಗಮAದಿರದಲ್ಲಿ ಬೃಹತ್ ವೇದಿಕೆ, ಕಲಾವಿದರಿಗಾಗಿ ಗ್ರೀನ್ ರೂಂ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆಯನ್ನೂ ನಿರ್ಮಾಣದ ಭಾಗವಾಗಿ ಕೈಗೊಳ್ಳಲಾಗುತ್ತಿದೆ.
ರಂಗಮAದಿರ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರು ಮೂಲದ ರಫಿ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಳೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಹಳೆಯ ರಂಗಮAದಿರವು ಮಡಿಕೇರಿ ನಗರದ ಸಾಂಸ್ಕೃತಿಕ ಇತಿಹಾಸದೊಂದಿಗೆ ನಿಕಟ ಸಂಬAಧ ಹೊಂದಿದ್ದು, ಹಲವು ವರ್ಷಗಳಿಂದ ಇಲ್ಲಿ ನಾಟಕ, ಸಂಗೀತ, ನೃತ್ಯ, ಸಾಹಿತ್ಯಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು ನಡೆದಿವೆ. ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೂ ಈ ಸ್ಥಳ ಸಾಕ್ಷಿಯಾಗಿತ್ತು. ಇದೀಗ ಐತಿಹಾಸಿಕ ಕಟ್ಟಡ ನೆಲಸಮಗೊಂಡಿರುವುದು ನಗರದ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ.
ಹಲವು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಹಾಗೂ ಪ್ರತಿಭಟನೆಗಳಿಗೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವೇದಿಕೆಯಾಗಿದ್ದ ಹಳೆಯ ರಂಗಮAದಿರ ಕಾಲಕ್ರಮೇಣ ಶಿಥಿಲಗೊಂಡಿತ್ತು. ವೇದಿಕೆ ಬಳಕೆಗೆ ಯೋಗ್ಯವಾಗಿರದ ಕಾರಣ ಕಾರ್ಯಕ್ರಮಗಳ ಆಯೋಜನೆಗೂ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಕಟ್ಟಡವನ್ನು ಯಂತ್ರಗಳ ಮೂಲಕ ನೆಲಸಮಗೊಳಿಸಿ, ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಹಾಗೂ ಶಾಶ್ವತ ರಂಗಮAದಿರ ನಿರ್ಮಿಸಲು ಕಳೆದ ವರ್ಷವೇ ಚರ್ಚೆಯಾಗಿ ಈ ಬಾರಿಯ ದಸರಾ ವೇಳೆಗೆ ಲೋಕಾರ್ಪಣೆಗೆ ಚಿಂತಿಸಲಾಗಿತ್ತು. ಆದರೆ, ಇದ್ಯಾವುದು ನಡೆಯದೆ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಪ್ರತಿವರ್ಷ ದಸರಾ ಕಾರ್ಯಕ್ರಮಕ್ಕೆ ೬೦ ರಿಂದ ೭೦ ಲಕ್ಷ ವ್ಯಯಿಸಿ ವೇದಿಕೆ ನಿರ್ಮಿಸಲಾಗುತ್ತಿತ್ತು. ಈ ದುಂದು ವೆಚ್ಚ ತಡೆಯುವ ಉದ್ದೇಶದಿಂದ ಅಧುನಿಕ ಶೈಲಿಯಲ್ಲಿ, ಸುಸಜ್ಜಿತ ವೇದಿಕೆ ನಿರ್ಮಿಸಲು ಯೋಜನೆ ರೂಪಿಸಲಾಯಿತು. ಇದೀಗ ಟೆಂಡರ್ದಾರರು ಹಳೆಯ ರಂಗಮAದಿರ ನೆಲಸಮ ಮಾಡಿ ಹೊಸ ರಂಗಮAದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆಧುನಿಕ ಸೌಲಭ್ಯಗಳೊಂದಿಗೆ ಶಾಶ್ವತ ರಂಗ ವೇದಿಕೆಯನ್ನು ನಿರ್ಮಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.