ಸೋಮವಾರಪೇಟೆ, ಅ. ೨೬: ರಾಜ್ಯಮಟ್ಟದ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ನ್ ಶಿಪ್ ಸೋಮವಾರಪೇಟೆಯ ಪಿ. ಎಂ.ಶ್ರೀ.ವಿ.ಎA.ಪಿ ಶಾಲೆಯಲ್ಲಿ ನಡೆಯಿತು. ಸೋಮವಾರಪೇಟೆ ಪಿ.ಎಂ. ಶ್ರೀ.ವಿ.ಎಂ.ಪಿ. ಶಾಲೆಯ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ರಿತನ್ ಡಿ.ಎಸ್. ಹಾಗೂ ೩ನೇ ತರಗತಿ ವಿದ್ಯಾರ್ಥಿ ರಿಷಿ ಡಿ.ಎಸ್ ಬೆಳ್ಳಿ ಪದಕ ಗಳಿಸಿದ್ದಾರೆ.

ರಿತನ್ ಡಿ.ಎಸ್ ಈ ಬಾರಿ ನೇಪಾಳದ ಕಟ್ಮಂಡುವಿನಲ್ಲಿ ನಡೆದ ಮೂರನೇ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗು ಜಿಲ್ಲೆಯಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಪಡೆದು ಶಾಸಕರಿಂದ ಸನ್ಮಾನವನ್ನೂ ಸ್ವೀಕರಿಸಿದ್ದ ಈ ಇಬ್ಬರು ಸಹೋದರರು ಸೋಮವಾರಪೇಟೆಯ ಎಡವನಾಡು ಗ್ರಾಮದ ಆಶಾ ಹಾಗೂ ಚೇತನ್ ದಂಪತಿಯ ಪುತ್ರರಾಗಿದ್ದಾರೆ.