ಮಡಿಕೇರಿ, ಅ. ೨೬: ಹೆಚ್ಚಾಗುತ್ತಿರುವ ಡ್ರಗ್ಸ್ ಚಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೋಟರಿಯಂಥಹ ಸೇವಾ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಕಾರ್ಯಗತಗೊಳಿಸಬೇಕೆಂದು ರೋಟರಿ ನಿರ್ದೇಶಕ ಅನಿಲ್ ಹೆಚ್.ಟಿ ಕರೆ ನೀಡಿದರು.
ಕುಶಾಲನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕೊಡಗಿನ ೧೦ ರೋಟರಿ ಸಂಸ್ಥೆಗಳೂ ಸೇರಿದಂತೆ ವಲಯ ೬ ರ ೧೪ ರೋಟರಿ ಸಂಸ್ಥೆಗಳ ಕಾರ್ಯಯೋಜನೆ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅನಿಲ್, ಪೊಲೀಸ್ ಇಲಾಖೆ ಈಗಾಗಲೇ ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಆದರೆ ರೋಟರಿಯಂತಹ ಸೇವಾ ಸಂಸ್ಥೆಗಳು ಕೂಡ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವ್ಯಸನದಿಂದ ದೈಹಿಕ ಮತ್ತು ಮಾನಸಿಕವಾಗಿ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡವರನ್ನು ಹೊರತರುವ ಕೆಲಸಕ್ಕೆ ರೋಟರಿ ಸಂಸ್ಥೆಗಳ ಸದಸ್ಯರು ಮುಂದಾಗುವAತೆ ಕರೆ ನೀಡಿದರು.
ರೋಟರಿ ಈ ವರ್ಷ ಪ್ರಾರಂಭವಾಗಿರುವ ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆಯನ್ನು ರೋಟರಿ ಸಂಸ್ಥೆಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಆಯಾ ಗ್ರಾಮ ವ್ಯಾಪ್ತಿಯ ಉತ್ಸವಗಳಿಗೆ ಅಗತ್ಯ ಸೇವಾ ಕಾರ್ಯದ ಮೂಲಕ ನೆರವು ನೀಡಿ ಎಂದೂ ಅನಿಲ್ ಹೇಳಿದರು.
ರೋಟರಿ ವಲಯ ೬ ರ ಸಹಾಯಕ ಗವರ್ನರ್ ಎಂ.ಡಿ. ರಂಗಸ್ವಾಮಿ ಮಾತನಾಡಿ, ರೋಟರಿಯಂತಹ ಸೇವಾ ಸಂಸ್ಥೆಗಳ ಸದಸ್ಯರಾಗುವುದೇ ಸಮಾಜಸೇವೆಗೆ ಲಭಿಸಿರುವ ಅತ್ಯುತ್ತಮ ಅವಕಾಶವಾಗಿದೆ. ಹೀಗಿರುವಾಗ ರೋಟರಿ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ಸೇವೆಗೆ ದೊರಕುವ ಅವಕಾಶಗಳನ್ನು ಕೈಚೆಲ್ಲದಿರಿ ಎಂದು ಸಲಹೆ ನೀಡಿದರು.
ರೋಟರಿ ವಲಯ ೬ ರ ಸಹಾಯಕ ಗವರ್ನರ್ಗಳಾದ ಎಚ್.ಎಸ್. ವಸಂತ್ ಕುಮಾರ್, ಸಿ.ಎನ್. ವಿಜಯ್, ರಾಘವೇಂದ್ರ, ವಲಯ ಸೇನಾನಿಗಳಾದ ವಸಂತ್ ಕುಮಾರ್, ಜೆ.ಕೆ.ಸುಭಾಷಿಣಿ, ಲಲಿತಾ ರಾಘವನ್, ಮಾಜಿ ಸಹಾಯಕ ಗವರ್ನರ್ಗಳಾದ ಲಿಖಿತ್, ಮನೋಹರ್ ಕಾಮತ್ ಹಾಜರಿದ್ದರು. ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ರುದ್ರೇಶ್ ಪಟೇಲ್ ಸ್ವಾಗತಿಸಿ, ವಂದಿಸಿದರು.
ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ರೋಟರಿ ವುಡ್ಸ್, ಮಿಸ್ಟಿ ಹಿಲ್ಸ್, ಕುಶಾಲನಗರ, ಗೋಣಿಕೊಪ್ಪ, ವೀರಾಜಪೇಟೆ, ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಆಲೂರು ಸಿದ್ದಾಪುರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಿಡ್ ಟೌನ್, ಪಿರಿಯಾಪಟ್ಟಣ ಐಕಾನ್, ಹುಣಸೂರು, ಕೆ.ಆರ್. ನಗರ ರೋಟರಿ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.