ಮಡಿಕೇರಿ, ಅ. ೨೬: ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾAಡ್ ಕೊಡವ ಸಮಾಜದ ವತಿಯಿಂದ ಕಾವೇರಿ ಚಂಗ್ರಾAದಿ ಅಂಗವಾಗಿ ನಡೆಯುತ್ತಿರುವ ಪತ್ತಾಲೋದಿ ನಮ್ಮೆ - ೧೦ ದಿನಗಳ ಕಾರ್ಯಕ್ರಮಕ್ಕೆ ತಾ. ೨೭ ರಂದು (ಇಂದು) ವೈಭವದ ತೆರೆ ಬೀಳಲಿದೆ.

ಮಡಿಕೇರಿ - ಗೋಣಿಕೊಪ್ಪಲುವಿನಲ್ಲಿ ಆಚರಿಸಲ್ಪಡುವ ದಸರಾ ಕಾರ್ಯಕ್ರಮಕ್ಕೆ ಸರಿಸಾಟಿಯಾಗಿ ಕಳೆದ ೧೦ ವರ್ಷಗಳಿಂದ ಕಾವೇರಿ ತೀರ್ಥೋದ್ಭವದ ಬಳಿಕ ೧೦ ದಿನಗಳ ಕಾಲ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡ ಸಾಂಸ್ಕೃತಿಕ ವೈಭವದೊಂದಿಗೆ ಈ ಪತ್ತಾಲೋದಿ ಆಚರಣೆ ನಡೆದುಕೊಂಡು ಬರುತ್ತಿದೆ.

೨೦೧೭ರಲ್ಲಿ ಕೋಟ್ರಮಾಡ ದಿ. ಅರುಣ್ ಅಪ್ಪಣ್ಣ ಅವರು ಸಮಾಜದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸ್ಥಳೀಯರಾದ ಚೆಟ್ಟಂಗಡ ರವಿ ಸುಬ್ಬಯ್ಯ ಸೇರಿದಂತೆ ನಾಡಿನ ಇನ್ನಿತರ ಪ್ರಮುಖರ ಚಿಂತನೆಯೊAದಿಗೆ ಸರಳ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿತ್ತು. ಇದಾದ ನಂತರದ ವರ್ಷದಿಂದಲೇ ಈ ವ್ಯಾಪ್ತಿಯ ಊರಿನವರು, ದಾನಿಗಳು ಈ ಕಾರ್ಯಕ್ರಮಕ್ಕೆ ಉತ್ಸಾಹಭರಿತರಾಗಿ ತನು - ಮನ - ಧನ ಸಹಾಯ ನೀಡಲು ಮುಂದಾದರೂ, ಸಾರ್ವಜನಿಕರೂ, ಸಂಘ - ಸಂಸ್ಥೆಗಳು ಕೈ ಜೋಡಿಸಿದ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಇದು ಯಶಸ್ಸು ಕಾಣುವುದರೊಂದಿಗೆ ಈ ಬಾರಿ ೧೦ನೇ ವರ್ಷದ ಕಾರ್ಯಕ್ರಮ (ಪೈತಾಂಡ್ ನಮ್ಮೆ) ತಾ. ೧೮ ರಿಂದ ಈ ತನಕ ಸಂಭ್ರಮದಿAದ ಜರುಗಿದೆ.

ತೀರ್ಥೋದ್ಭವದಂದು ತಲಕಾವೇರಿಯಿಂದ ತೀರ್ಥ ಸಂಗ್ರಹಿಸಿ ತಂದು ಮರುದಿನ ತೀರ್ಥಪೂಜೆ, ಕಣಿಪೂಜೆ, ತೀರ್ಥ ವಿತರಣೆ ಬಳಿಕ ಸಂಜೆಯಿAದ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತದೆ. ಟಿ. ಶೆಟ್ಟಿಗೇರಿ, ಶ್ರೀಮಂಗಲ ವ್ಯಾಪ್ತಿಯ ಗ್ರಾಮಸ್ಥರು, ಸಂಘ ಸಂಸ್ಥೆಯವರು ಮಾತ್ರವಲ್ಲದೆ, ಮರೆನಾಡ್, ಕುಟ್ಟ, ಗೋಣಿಕೊಪ್ಪಲು, ಪೊನ್ನಂಪೇಟೆ, ಬೆಕ್ಕೆಸೊಡ್ಲೂರು ವಿಭಾಗದ ಜನರಿಂದಲೂ ೧೦ ದಿನಗಳ ಸಾಂಸ್ಕೃತಿಕ ವೈವಿಧ್ಯತೆ ನಡೆದುಕೊಂಡು ಬಂದಿರುವುದು ಈ ವರ್ಷದ ವಿಶೇಷ. ಎಲ್ಲೂ ಖರ್ಚು ವೆಚ್ಚಗಳನ್ನೂ ದಾನಿಗಳೇ ಭರಿಸಿ ಸಹಕಾರ ನೀಡುತ್ತಿರುವುದು ಮತ್ತೊಂದು ವಿಶೇಷ. ಪ್ರತಿದಿನ ಸಂಜೆ ೬ ಕ್ಕೆ ಕಾರ್ಯಕ್ರಮ ಪ್ರಾರಂಭಗೊAಡು ರಾತ್ರಿ ೯ರ ತನಕ ಜರುಗುತ್ತದೆ. ಬಂದ ಎಲ್ಲಾ ಜನರಿಗೂ ಕಾಫಿ, ತಿಂಡಿಯ ವ್ಯವಸ್ಥೆ, ರಾತ್ರಿ ಊಟೋಪಚಾರದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ.

ಪ್ರಸಕ್ತ ವರ್ಷ

ಈ ಬಾರಿ ತಾ. ೧೮ ರಿಂದ ವಿವಿಧ ಸಮಾಜ ಸಂಘ - ಸಂಸ್ಥೆಗಳಿAದ ಧಾರ್ಮಿಕ, ಐತಿಹಾಸಿಕ ಹಿನ್ನೆಲೆ, ಆರೋಗ್ಯ, ತಿಂಡಿ - ಅಡುಗೆ, ಗುರುಕಾರೋಣರ, ಚಂಗ್ರಾAದಿಯ ಮಹತ್ವ, ಕೊಡವ ನಮ್ಮೆ - ನಾಳ್, ಪ್ರಕೃತಿ - ಪರಿಸರ, ಕೊಡವ ಪೊರಪಾಡ್ ಇತ್ಯಾದಿಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಜನಮನ ರಂಜಿಸಿವೆ. ಪ್ರತಿದಿನ ಸಭಾ ಕಾರ್ಯಕ್ರಮ, ಸನ್ಮಾನಗಳು ನಡೆದಿವೆ.

ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೈಬಿಲೀರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಮಚ್ಚಾಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಸಮಾಜದ ಕಾರ್ಯದರ್ಶಿ ತಡಿಯಂಗಡ ಶಮ್ಮಿ, ಪೆರುಮಾಳೇಶ್ವರ ಆಟೋ ಮಾಲೀಕ - ಚಾಲಕರ ಸಂಘದ ಚೊಟ್ಟೆಯಂಡಮಾಡ ಎಂ. ಪ್ರವೀಣ್, ಸಂಭ್ರಮ ಪೊಮ್ಮಕ್ಕ ಕ್ರೀಡೆ - ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಉಪಾಧ್ಯಕ್ಷೆ ಚಂಗುಲAಡ ಅಶ್ವಿನಿ ಸತೀಶ್, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ತಂಡದ ಉಸ್ತುವಾರಿಯಲ್ಲಿ ಈ ಬಾರಿಯ ಕಾರ್ಯಕ್ರಮ ಯಶಸ್ಸು ಕಂಡಿದ್ದು, ತಾ. ೨೭ ರಂದು (ಇಂದು) ಅಂತಿಮ ದಿನದ ವೈಭವ ಜರುಗಲಿದೆ.

-ಶಶಿ ಸೋಮಯ್ಯ