ಸೋಮವಾರಪೇಟೆ, ಅ.೨೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯದಲ್ಲಿ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಮಕ್ಕಳ ಹಕ್ಕುಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಡ್ ಸಂಸ್ಥೆಯ ಕುಸುಮ ಅವರು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿದಿನ ಕನಿಷ್ಟ ಒಂದು ಗಂಟೆಯನ್ನು ಗ್ರಂಥಾಲಯದಲ್ಲಿ ಓದಿಗಾಗಿ ಮೀಸಲಿಡುವಂತೆ ಅವರು ಸಲಹೆ ನೀಡಿದರು.
ಆಶಾ ಕಾರ್ಯಕರ್ತೆ ಮುತ್ತಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆ ಸ್ವಾತಿ ಅವರು ಮಕ್ಕಳ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ರೋಷನ್ ಡೇವಿಡ್, ಗ್ರಂಥಾಲಯ ಮೇಲ್ವಿಚಾರಕಿ ಪದ್ಮಾವತಿ, ವಿಕ್ಟೋರಿಯ, ದರ್ಶಿನಿ ಹಾಗೂ ವಿದ್ಯಾರ್ಥಿಗಳಾದ ಛಾಯಾ, ರಂಜಿತಾ, ಧನ್ಯ, ಪೂಜಾ, ದೀಕ್ಷಿತಾ, ಜೀವಿಕಾ, ವೀಣಾ, ನಿಶ್ಮಿತಾ, ವಿನಿತಾ, ಹಿಮಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಪ್ರಮುಖರಾದ ಮಾರಿಯಮ್ಮ, ಹೇಮಲತಾ, ದೇಚಮ್ಮ, ಶ್ರುತಿ, ಲತಾ, ಬಾಲಕ್ಕ ಮತ್ತಿತರರು ಉಪಸ್ಥಿತರಿದ್ದರು.