ನಾಪೋಕ್ಲು, ಅ. ೨೫: ವಿಜಯದಶಮಿಯ ಪವಿತ್ರ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ, ರಾಷ್ಟಿçÃಯ ಸ್ವಯಂಸೇವಕ ಸಂಘದ ಗ್ರಾಮಾಂತರ ಶಾಖೆಯ ವತಿಯಿಂದ ಭಾನುವಾರ ಸ್ಥಳೀಯ ಪಟ್ಟಣದಲ್ಲಿ ಅದ್ದೂರಿಯಾಗಿ ಪಥಸಂಚಲನ ಜರುಗಿತು.
ಹಳೆ ತಾಲೂಕಿನಿಂದ ಆರಂಭಗೊAಡ ಈ ಪಥಸಂಚಲನವು ಪ್ರಮುಖ ಬೀದಿಯ ಮೂಲಕ ಸಾಗಿ ಮಾರುಕಟ್ಟೆ ಆವರಣದವರೆಗೆ ಸಾಗಿ ಸಮಾಪನಗೊಂಡಿತು. ಸಂಘಟನೆಯ ಶಿಸ್ತು ಹಾಗೂ ಬದ್ಧತೆಯನ್ನು ಸಾರುವ ಗಣವೇಷಧಾರಿ ಸ್ವಯಂಸೇವಕರ ಹೆಜ್ಜೆಗಳಿಗೆ ಸ್ಥಳೀಯರು ಹರ್ಷೋದ್ಘಾರದಿಂದ ಸಾಕ್ಷಿಯಾದರು.
ಮಂಡಲ ವ್ಯಾಪ್ತಿಯ ವಿವಿಧ ಶಾಖೆಗಳಿಂದ ಆಗಮಿಸಿದ್ದ ನೂರಾರು ಸ್ವಯಂಸೇವಕರು ಈ ಪಥಸಂಚಲನದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಾರತೀಯ ಸಂಸ್ಕೃತಿ ಮತ್ತು ರಾಷ್ಟಿçÃಯತೆಯ ಸಂದೇಶವನ್ನು ಸಾರುತ್ತಾ ಸಾಗಿದ ಸ್ವಯಂಸೇವಕರ ಶಿಸ್ತುಬದ್ಧ ಮೆರವಣಿಗೆಯು ಪಟ್ಟಣದ ಜನಮನ ಸೆಳೆಯಿತು.
ಮಡಿಕೇರಿ ಗ್ರಾಮಾಂತರ ಶಾಖೆ ಹಾಗೂ ವಿವಿಧ ಮಂಡಲಗಳ ನೂರಾರು ಸ್ವಯಂಸೇವಕರು ಗಣವೇಷದಲ್ಲಿ ಹೆಜ್ಜೆ ಹಾಕಿದರು.
ಅನುಮತಿಯ ವಿಳಂಬ: ಈ ಕುರಿತು ಮಾತನಾಡಿದ ಹಿರಿಯ ಸ್ವಯಂಸೇವಕ ಪಳಂಗAಡ ಅಪ್ಪಣ್ಣ, "ಪ್ರತಿವರ್ಷ ವಿಜಯದಶಮಿಯ ಪ್ರಯುಕ್ತ ನಾಡಿನಾದ್ಯಂತ ಆರ್ಎಸ್ಎಸ್ ವತಿಯಿಂದ ಪಥಸಂಚಲನ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ಸರ್ಕಾರದ ಅನುಮತಿ ದೊರಕಲು ಕೊಂಚ ವಿಳಂಬವಾದ ಹಿನ್ನೆಲೆಯಲ್ಲಿ, ವಿಜಯದಶಮಿ ಹಬ್ಬ ಮುಗಿದ ಬಳಿಕ ಇಂದಿನ ದಿನ ಈ ಸತ್ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ" ಎಂದು ತಿಳಿಸಿದರು. ದೇಶಪ್ರೇಮ ಹಾಗೂ ಸಮಾನತೆಯ ಸಂದೇಶ ಸಾರಿದ ಈ ಕಾರ್ಯಕ್ರಮವು ನಾಪೋಕ್ಲು ಪಟ್ಟಣದಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನೆರವೇರಿತು.