ಚೆಯ್ಯAಡಾಣೆ, ಅ. ೨೫: ಸುನ್ನಿ ಯುವಜನ ಸಂಘ (ಎಸ್ವೈಎಸ್) ಮಡಿಕೇರಿ ಝೋನ್ ಸಮಿತಿಯ ವತಿಯಿಂದ ಸಾಂತ್ವನ ಕಾರ್ಯಕ್ರಮದ ಅಂಗವಾಗಿ ಔಲಿಯಾಗಳ ನಾಯಕ ಶೈಖ್ ಅಹ್ಮದ್ ರಿಫಾಈ ಅವರ ಸ್ಮರಣಾರ್ಥ ಮಡಿಕೇರಿಯ ವಿಕಾಸ ಜನತಾ ಸೇವಾ ಟ್ರಸ್ಟ್ ಆಶ್ರಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಎಸ್ವೈಎಸ್ ಮಡಿಕೇರಿ ಝೋನ್ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ನಿವಾಸಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಸೇವಾ ಕಾರ್ಯ ಶ್ಲಾಘನೀಯ: ಅಬ್ದುಲ್ ಹಫೀಲ್ ಸಅದಿ ಎಸ್ವೈಎಸ್ನ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಮಾತನಾಡಿ, ಔಲಿಯಾಗಳ ನಾಯಕ ಶೈಖ್ ಅಹ್ಮದ್ ಅಲ್ ಕಬೀರ್ ರಿಫಾಈ ಅವರ ಸ್ಮರಣಾರ್ಥ ಎಸ್ವೈಎಸ್ ಮಡಿಕೇರಿ ಝೋನ್ ವತಿಯಿಂದ ಅನ್ನಸಂತರ್ಪಣೆ ಆಯೋಜಿಸ ಲಾಗಿದೆ. ಎಸ್ವೈಎಸ್ ಹಾಗೂ ಸುನ್ನಿ ಸಂಘ ಕುಟುಂಬಗಳು ಸದಾ ಆಶ್ರಮದ ನಿವಾಸಿಗಳೊಂದಿಗೆ ಇರಲಿವೆ. ಆಶ್ರಮದಲ್ಲಿರುವವರು ನಮ್ಮ ತಂದೆ-ತಾಯಿಯರಿಗೆ ಸಮಾನರು. ಅವರಿಗೆ ಯಾವುದೇ ರೀತಿಯ ಸಹಾಯ-ಸಹಕಾರದ ಅಗತ್ಯವಿದ್ದರೂ ನಾವು ಸದಾ ಜೊತೆಯಾಗಿರುತ್ತೇವೆ ಎಂದು ಭರವಸೆ ನೀಡಿದರು.
ಆಶ್ರಮದ ಉಸ್ತುವಾರಿಯವರು ಮಾತನಾಡಿ, ಎಸ್ವೈಎಸ್ ವತಿಯಿಂದ ನೀಡಿದ ಸಹಕಾರ ನಿಜಕ್ಕೂ ಶ್ಲಾಘನೀಯವಾಗಿದೆ. ಇಂತಹ ಮಾನವೀಯ ಸೇವಾ ಕಾರ್ಯಗಳು ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿ ಕೃತಜ್ಞತೆ ಸಲ್ಲಿಸಿದರು.
ಸಮಾಜದಲ್ಲಿ ಸೇವಾ ಮನೋಭಾವ, ಮಾನವೀಯತೆ ಹಾಗೂ ಪರಸ್ಪರ ಸಹಕಾರವನ್ನು ಬೆಳೆಸುವ ಉದ್ದೇಶದಿಂದ ಎಸ್ವೈಎಸ್ ವತಿಯಿಂದ ಸಾಂತ್ವನ ಕಾರ್ಯಕ್ರಮದ ಭಾಗವಾಗಿ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಎಸ್ವೈಎಸ್ ಜಿಲ್ಲಾ ಸಮಿತಿಯ ಇಸಾಬ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ, ಜಿಲ್ಲಾ ಸಮಿತಿ ಸದಸ್ಯರಾದ ಮಜೀದ್ ಆಝಾದ್ನಗರ, ರಫೀಕ್ ಮೇಕೇರಿ, ಹನೀಫ್ ರಹ್ಮಾನಿ, ಮಡಿಕೇರಿ ಝೋನ್ ಕಾರ್ಯದರ್ಶಿ ಉನೈಸ್, ಇಸಾಬ ಅಧ್ಯಕ್ಷ ಶಾದುಲಿ ಹಾಜಿ, ಕಾರ್ಯದರ್ಶಿ ಶಿಹಾಬ್, ಕಬೀರ್ ಝುಹ್ರಿ, ಝಕರಿಯ ಜೌಹರಿ, ಶಮೀರ್ ಬೇತ್ರಿ, ಹಸ್ಸನ್ ಸಅದಿ ಸೇರಿದಂತೆ ಝೋನ್ ಹಾಗೂ ಸರ್ಕಲ್ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.