ಕುಶಾಲನಗರ, ಅ. ೨೫: ಪಟ್ಟಣದಲ್ಲಿ ಕನ್ನಡಭಾಷೆ ಬಳಸದೆ ಸಂಪೂರ್ಣ ಆಂಗ್ಲಮಯ ನಾಮಫಲಕ ಅಳವಡಿಕೆ ಖಂಡಿಸಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಕೊಡಗು-ಮೈಸೂರು ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಸಮೀಪದಲ್ಲಿ ಟ್ರೆಂಡ್ಸ್ಗೆ ಸಂಬAಧಿಸಿದ ನಾಮಫಲಕ ಸಂಪೂರ್ಣ ಆಂಗ್ಲಮಯವಾಗಿದೆ ಎಂದು ಆರೋಪಿಸಿ ಜಿಲ್ಲಾಧ್ಯಕ್ಷ ಡಾ. ಬಿ.ಎ. ದಿನೇಶ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಹಲವು ಬಾರಿ ಹೋರಾಟ ನಡೆಸಿ ಪುರಸಭೆಗೆ ಮನವಿ ಸಲ್ಲಿಸಿದ್ದೇವೆ. ಸರಕಾರದ ಆದೇಶದ ಪ್ರಕಾರ ಪ್ರತಿಯೊಂದು ಅಂಗಡಿ-ಮಳಿಗೆಯ ನಾಮಫಲಕದಲ್ಲಿ ಶೇ. ೬೦ ರಷ್ಟು ಕನ್ನಡ ಇರಲೇಬೇಕು. ಆದರೆ ಮೇಲಿಂದ ಮೇಲೆ ಇದು ಉಲ್ಲಂಘನೆ ಆಗುತ್ತಿದೆ. ಉದ್ಯಮ ನಡೆಸುವವರು ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕಿದೆ ಎಂದು ಆಗ್ರಹಿಸಿದರು.
ಸಂಘದ ಪ್ರಮುಖರಾದ ಚಂದ್ರು ಮತ್ತು ವಿ.ಹೆಚ್. ಪುಟ್ಟಮ್ಮ ಮಾತನಾಡಿ, ನಮ್ಮ ನಾಡಿನಲ್ಲಿ ದುಡಿಯುವುದಾದರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲೇಬೇಕು. ತಪ್ಪಿದಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಸದರಿ ಆಂಗ್ಲ ನಾಮಫಲಕವನ್ನು ತೆರವುಗೊಳಿಸಿ ಸಂಬAಧಿಸಿದವರಿಗೆ ಬೃಹತ್ ಮೊತ್ತದ ದಂಡ ವಿಧಿಸಬೇಕು ಎಂದು ಸ್ಥಳಕ್ಕೆ ಆಗಮಿಸಿದ ಪುರಸಭೆಯ ಸ್ಯಾನಿಟರಿ ಸೂಪರ್ವೈಸರ್ ಮೋಹನ್ ಕುಮಾರ್ ಅವರನ್ನು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಎಂ.ಎಸ್, ತಾಲೂಕು ಉಪಾಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಮಹಿಳಾ ಜಂಟಿ ಕಾರ್ಯದರ್ಶಿ ಪ್ರೇಮ, ಸಾಮಾಜಿಕ ಜಾಲತಾಣದ ಭರತ್, ತಾಲೂಕು ಕಾರ್ಯದರ್ಶಿ ಕಮಲ್, ವೆಂಕಟೇಶ್, ಕಾರ್ತಿಕ್ ಗಣಪತಿ, ರಾಜೇಗೌಡರು ಭಾಗವಹಿಸಿದ್ದರು.