ಪಾಲಿಬೆಟ್ಟ, ಅ. ೨೪: ಚೆಷೈರ್ ಹೋಮ್ಸ್ ಇಂಡಿಯಾ ಕೂರ್ಗ್ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳಾದ ಎಸ್.ವಿ. ಮಂಜುನಾಥ್, ಸುಮೇಶ್, ವಿಕಾಸ್ ಮತ್ತು ಎಂ. ಕೆ. ಮಂಜುನಾಥ್ ಅವರು ಅ.೬ ರಿಂದ ೧೧ ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕ್ರೀಡಾ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶಿವರಾಜ್, ಸಿಬ್ಬಂದಿ ಧರ್ನೇಶ್ ಹಾಗೂ ಅಧ್ಯಕ್ಷರಾದ ಗೀತಾ ಚೆಂಗಪ್ಪ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಚೆಷೈರ್ ಹೋಮ್ಸ್, ಅಮೋಘ್ ಮತ್ತು ಬೆಂಗಳೂರಿನ ಸೇವಾ ಇನ್ ಆಕ್ಷನ್ ಸಂಸ್ಥೆಗಳಿಗೆ ಸೇರಿದ ಒಟ್ಟು ೧೭ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನರ ವೈವಿಧ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರಿನ ದಿ ರಿಮಾರ್ಕಬಲ್ಸ್ ಫೌಂಡೇಶನ್ನ ಶಿಲ್ಪಾ ಚೆಂಗಪ್ಪ ಮತ್ತು ವಿನೋದ್ ಚಂದ್ರ ಅವರು, ರಾಹುಲ್ ದ್ರಾವಿಡ್ ಅವರ SIಘಿ ಕ್ರಿಕೆಟ್ ಅಕಾಡೆಮಿ ಹಾಗೂ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಮತ್ತು ಟೆನಿಸ್ ಕ್ರೀಡೆಗಳಲ್ಲಿ ಭಾಗವಹಿಸಿ ಹೊಸ ಕೌಶಲ್ಯಗಳನ್ನು ಕಲಿಯಲು ಹಾಗೂ ಕ್ರೀಡಾ ಕ್ಷೇತ್ರದ ಅಮೂಲ್ಯ ಅನುಭವವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಟೆನಿಸ್ ಆಟಗಾರ ಶ್ರೀ ರೋಹನ್ ಬೋಪಣ್ಣ ಅವರೊಂದಿಗೆ ಸಂವಾದ ನಡೆಸುವ ಅವಕಾಶವೂ ದೊರೆಯಿತು.
ಪ್ರತಿಯೊಬ್ಬ ವಿದ್ಯಾರ್ಥಿಗೂ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ, ಮೂರು ಟಿ-ಶರ್ಟ್ಗಳು, ಶೂಗಳು, ಟೋಪಿ, ಮುಖ ಒರೆಸುವ ಟವೆಲ್, ಸನ್ಸ್ಕಿçÃನ್ ಲೋಷನ್, ನೀರಿನ ಬಾಟಲಿ ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಒಳಗೊಂಡ ಕ್ರೀಡಾ ಪರಿಕರಗಳ ಕಿಟ್ಗಳನ್ನು ವಿತರಿಸಲಾಯಿತು.
ಚೆಷೈರ್ ಹೋಮ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಯೋಗಾಭ್ಯಾಸದ ಕೌಶಲ್ಯಗಳನ್ನು ಇತರ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿ ಗಮನ ಸೆಳೆದರು.