ಮಡಿಕೇರಿ, ಅ. ೨೪: ಸಿದ್ದಾಪುರ ಲಯನ್ಸ್ ಕ್ಲಬ್ ಹಾಗೂ ಅಮ್ಮತ್ತಿ ಲಯನ್ಸ್ ಕ್ಲಬ್ಗಳ ಜಂಟಿ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಭೆಗೆ ಲಯನ್ಸ್ ಪ್ರಾದೇಶಿಕ ಅಧ್ಯಕ್ಷ ಎಂ. ಎ. ಬಾಲಕೃಷ್ಣ ಅವರು ಅಧಿಕೃತ ಭೇಟಿ ನೀಡಿದ್ದರು. ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ಶ್ಯಾಮ್ ಅಯ್ಯಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಗಣ್ಯರು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ವಿಪಿನ್ ಸುಬ್ಬಯ್ಯ ಅವರು ಧ್ವಜ ವಂದನೆ ನೆರವೇರಿಸುವುದರೊಂದಿಗೆ ಸಭೆಯ ಕಾರ್ಯಕಲಾಪಗಳು ವಿಧ್ಯುಕ್ತವಾಗಿ ಆರಂಭಗೊAಡವು. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾದೇಶಿಕ ಅಧ್ಯಕ್ಷ ಎಂ. ಎ. ಬಾಲಕೃಷ್ಣ ಅವರು, ಲಯನ್ಸ್ ತತ್ವ ಮತ್ತು ವಿಶ್ವಸಂಸ್ಥೆ ನಡುವಿನ ಅವಿನಾಭಾವ ಸಂಬAಧವನ್ನು ವಿವರಿಸಿದರು. ೧೯೪೫ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್ ಸಿದ್ಧಪಡಿಸುವಲ್ಲಿ ಸಲಹೆ ನೀಡಲು ಲಯನ್ಸ್ ಕ್ಲಬ್ ಅಂತಾರಾಷ್ಟಿçÃಯ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ಸ್ಮರಿಸಿದ ಅವರು, ವಿಶ್ವ ಶಾಂತಿ, ಹಸಿವು ಮುಕ್ತ ಸಮಾಜ ಹಾಗೂ ಆರೋಗ್ಯ ಸೇವೆಗಳಲ್ಲಿ ಲಯನ್ಸ್ ಸಂಸ್ಥೆ ಜಾಗತಿಕವಾಗಿ ವಿಶ್ವಸಂಸ್ಥೆಯೊAದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಬಳಿಕ, ಇದೇ ಡಿಸೆಂಬರ್ ೨೨ ರಂದು ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆಯಲಿರುವ ಲಯನ್ಸ್ ಪ್ರಾದೇಶಿಕ ಸಮ್ಮೇಳನದ ಕುರಿತು ಮಾಹಿತಿ ನೀಡಿ, ಸಮ್ಮೇಳನದ ಯಶಸ್ವಿಗೆ ಜಿಲ್ಲೆಯ ಎಲ್ಲಾ ಲಯನ್ಸ್ ಬಾಂಧವರು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಇದೇ ವೇದಿಕೆಯಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ಗೆ ನೂತನವಾಗಿ ಸೇರ್ಪಡೆಗೊಂಡ ಚಂಬAಡ ರೇಷ್ಮ ಭೀಮಯ್ಯ, ಚೇಂದAಡ ಉತ್ತಪ್ಪ ಮತ್ತು ಚೇಂದAಡ ರಕ್ಷಿತ್ ಅವರುಗಳಿಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಲಯನ್ಸ್ ಸದಸ್ಯತ್ವದ ಪ್ರತಿಜ್ನಾವಿಧಿ ನೀಡಲಾಯಿತು. ಕಾರ್ಯದರ್ಶಿಗಳಾದ ವಿಶಾಲ್ ದೇವಯ್ಯ ಹಾಗೂ ನೆಲ್ಲಮಕ್ಕಡ ತಿಮ್ಮಯ್ಯ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು. ವೇದಿಕೆಯಲ್ಲಿ ಲಯನ್ ಸೌಮ್ಯ ಎಂ. ಬಿ, ಖಜಾಂಚಿಗಳಾದ ನಮಿತಾ ಅಯ್ಯಪ್ಪ ಹಾಗೂ ಕೋಡಿರ ದಿನೇಶ್ ಉಪಸ್ಥಿತರಿದ್ದರು. ಕೊಡಗು ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಮ್ಮತ್ತಿ ಕ್ಲಬ್ ಅಧ್ಯಕ್ಷ ಪೊರ್ಕೊಂಡ ಬೋಪಣ್ಣ ವಂದನಾರ್ಪಣೆ ಮಾಡಿದರು.