ಸುಂಟಿಕೊಪ್ಪ, ಅ. ೨೪: ಕೇವಲ ನವರಾತ್ರಿ ಸಂದರ್ಭದಲ್ಲಿ ಮಾತ್ರ ಎಲ್ಲರಿಗೂ ಒಳಿತಾಗಲಿ ಎಂದು ಬಯಸದೆ ಎಲ್ಲಾ ದಿನಗಳಲ್ಲೂ ಸರ್ವರಿಗೆ ಒಳಿತು ಮಾಡಿದರೆ ಪ್ರತಿಯೊಬ್ಬರು ಆನಂದ, ಆರೋಗ್ಯ ಮತ್ತು ಶಾಂತಿ ಸಮಾಧಾನಗಳಿಂದ ಬದುಕನ್ನು ಸಾಗಿಸಬಹುದೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಮಾದಾಪುರ ಬಸ್ ನಿಲ್ದಾಣದಲ್ಲಿ ಆಯೋಜಿತವಾಗಿದ್ದ ಸಾರ್ವಜನಿಕ ಆಯುಧಪೂಜೆ ಆಚರಣಾ ಸಮಿತಿಯ ೬ನೇ ವರ್ಷದ ಅದ್ದೂರಿ ಆಯುಧಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತ್ತೋರ್ವ ಉದ್ಘಾಟಕರಾದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕಳೆದ ಬಾರಿ ಇದೇ ಆಯುಧಪೂಜಾ ಸಮಿತಿ ವತಿಯಿಂದ ಮತ್ತು ದಾನಿಗಳ ಸಹಕಾರದಿಂದ ಮಾದಾಪುರಕ್ಕೆ ಉಚಿತ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರಿಗೆ ಉಪಯೋಗವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧಪೂಜೆ ಆಚರಣಾ ಸಮಿತಿಯ ಅಧ್ಯಕ್ಷ ವಿ. ಕುಮಾರ್ ವಹಿಸಿದ್ದರು. ಶಾಸಕ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತರರಾಷ್ಟಿçÃಯ ಮಟ್ಟದ ಮಂಗಳೂರಿನ ವಿಶ್ವಾಸ್ ಮ್ಯೂಸಿಕ್ ಗಾಯಕ - ಗಾಯಕಿಯರಿಂದ ಸಂಗೀತ ರಸಸಂಜೆ ಮತ್ತು ಕಲಾತಂಡಗಳಿAದ ನಡೆದ ನೃತ್ಯ ಕಾರ್ಯಕ್ರಮ ಜನಮನಸೂರೆಗೊಂಡಿತು. ಸಮಾರಂಭದ ವೇದಿಕೆಯಲ್ಲಿ ದಾನಿಗಳಾದ ಹರಪಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ, ರಮೇಶ್ ಸುವರ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಪಂಡ ಉಮೇಶ್ ಉತ್ತಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೊಪ್ಪ ತಂಡ ಗಣೇಶ್, ಮಕ್ಕಂದೂರು ಕೆ. ರವಿ ನಾಯರ್, ಮನು ಮೇದಪ್ಪ, ಜಾನ್ಸನ್ ಪಿಂಟೋ, ಸಂಜು ಪೊನ್ನಪ್ಪ, ಕೊಕ್ಕಲೆರ ಸುಜು ತಿಮ್ಮಯ್ಯ, ಮನು ಮುದ್ದಪ್ಪ, ವಿಶ್ವ ಕುಂಬೂರು, ನಾಗಂಡ ಭವೀನ್, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಶೀಲಾ ಶಶಿ, ಮನು ಬಿದ್ದಪ್ಪ, ಉಪಾಧ್ಯಕ್ಷ ಸುರೇಶ್ ವಿ.ಆರ್., ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ನಾಗಂಡ ಭವೀನ್, ಕುಟ್ಟಂಡ ಕೆ. ಕುಟ್ಟಪ್ಪ, ತಿಲಕ್ ಕುಮಾರ್, ದೇಚಮ್ಮ ಎಂ.ಕೆ., ಲತೀಫ್ ಕೆ.ಎ., ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿ ಅಶೋಕ ಎಂ.ಬಿ., ವಿಜು ನಂಜಪ್ಪ ಮತ್ತು ಮಾದಾಪುರ ಸಾರ್ವಜನಿಕ ಆಯುಧಪೂಜಾ ಸಮಿತಿ ಸದಸ್ಯರು ಭಾಗಿಯಾಗಿದ್ದರು.