ವೀರಾಜಪೇಟೆ, ಅ. ೨೪: ವೀರಾಜಪೆಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಕಾವೇರಿ ಆಶ್ರಮದಲ್ಲಿ ಶ್ರೀ ಕಾವೇರಿ ಭಕ್ತಜನ ಸಂಘದ ಆಡಳಿತ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ನವರಾತ್ರಿ ಉತ್ಸವ ಹಾಗೂ ಶ್ರೀ ಕಾವೇರಿ ತೀರ್ಥಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಸದ್ಗುರು ಶ್ರೀ ಅಪ್ಪಯ್ಯ ಸ್ವಾಮಿಯವರ ದಿವ್ಯ ಆದೇಶ ಹಾಗೂ ಬ್ರಹ್ಮವಿದ್ಯಾ ಸಂಪ್ರದಾಯ ಕರ್ತÈಗಳ ಪರಂಪರೆಯAತೆ ಆಯೋಜಿತಗೊಂಡಿದ್ದ ಈ ಧಾರ್ಮಿಕ ಮಹೋತ್ಸವದಲ್ಲಿ ದೇವೀ ಪೂಜಾ, ಭಜನೆ, ಶ್ರೀ ಲಲಿತಾ ಸಹಸ್ರನಾಮಾರ್ಚನೆ ಹಾಗೂ ದೇವೀ ಪಾರಾಯಣಗಳು ಭಕ್ತಿಪೂರ್ವಕವಾಗಿ ಜರುಗಿದವು.

ವೀರಾಜಪೇಟೆಯ ಶ್ರೀ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಮೋದ್ ಭಟ್ ಅವರು ದಿನಂಪ್ರತಿ ಬೆಳಿಗ್ಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ವಿಶೇಷವಾಗಿ, ಶ್ರೀ ಕಾವೇರಿ ತೀರ್ಥಪೂಜೆಯ ಅಂಗವಾಗಿ ಬೆಳಿಗ್ಗೆ ವಿಶೇಷ ಪೂಜಾ ಕೈಂಕಯಗಳು ನಡೆದವು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ “ನಿನಾದ”ಸಂಸ್ಥೆಯ ಚೇಂದಿರ ನಿರ್ಮಲ ಬೋಪಣ್ಣ ಹಾಗೂ ತಂಡದವರಿAದ ಜರುಗಿದ “ಭಕ್ತಿ ಸಂಗೀತ” ಕಾರ್ಯಕ್ರಮವು ಭಕ್ತಾದಿಗಳ ಮನಸೂರೆಗೊಳಿಸಿತು.

ಧಾರ್ಮಿಕ ವಿಧಿವಿಧಾನಗಳ ನಂತರ ಮಹಾ ಮಂಗಳಾರತಿ ನೆರವೇರಿ, ನೆರೆದಿದ್ದ ನೂರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ಭಕ್ತಜನ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.