ಶ್ರೀಮಂಗಲ, ಅ. ೨೩: ನಮ್ಮ ನೆಲದಲ್ಲಿ ನಾವೇ ಯಜಮಾನರಂತೆ, ರಾಜರಂತೆ ಬದುಕುವುದು ಬಿಟ್ಟು ಹಣದಾಸೆಗೆ ಪಟ್ಟಣ ಸೇರಿ ಬೇರೆ ಯವರ ಕೈಕೆಳಗೆ ಕಷ್ಟಪಡಬೇಡಿ. ಆದಷ್ಟು ಕೊಡಗಿನ ಮಣ್ಣನ್ನು ಪ್ರೀತಿಸಿ, ಕೊಡವ ಸಂಸ್ಕೃತಿಯನ್ನು ಪಾಲನೆ ಮಾಡುವಂತೆ ನಿವೃತ್ತ ಕರ್ನಲ್ ವಾಟೇರಿರ ಸದಾಶಿವ ಕಿವಿಮಾತು ಹೇಳಿದರು.

ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ನಡೆಯುತ್ತಿ ರುವ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮದ ನಾಲ್ಕನೆ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ಕೊಡವ ಸಂಸ್ಕೃತಿ ಹಾಗೂ ಕೊಡಗಿನ ಮಣ್ಣಿನ ಶ್ರೇಷ್ಠತೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಅವರಿಗೆ ಕೊಡಗಿನ ಮಣ್ಣು, ಕೊಡವ ಭಾಷೆ, ಪದ್ದತಿ, ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನ ಹುಟ್ಟುವಂತೆ ಮಾಡಬೇಕು. ಮಕ್ಕಳನ್ನು ಹೆಚ್ಚು ಮುದ್ದು ಮಾಡಿ ದಾರಿ ತಪ್ಪುವಂತೆ ಮಾಡಬೇಡಿ. ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಸಂಸ್ಕಾರ ಕಲಿಸಿ, ಉತ್ತಮ ಶಿಕ್ಷಣ ನೀಡಿ ದೇಶದ ಒಳ್ಳೆಯ ಪ್ರಜೆಯಾಗುವಂತೆ ಬೆಳೆಸಿ. ದೇಶ ಸೇವೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಬೇಕು. ಸೇನೆಗೆ ಸೇರಬೇಕಾದರೆ ಅಗತ್ಯ ಅರ್ಹತೆ ಇರಬೇಕು. ಯಾರ ಶಿಫಾರಸ್ಸನ್ನೂ ಸೇನಾ ಆಯ್ಕೆಗೆ ಪರಿಗಣಿಸುವುದಿಲ್ಲ ಎಂದರು.

ಪುಣ್ಯಭೂಮಿ ಕೊಡಗನ್ನು ಬಿಟ್ಟು ಹೋಗಬೇಡಿ. ಹೊರ ಜಿಲ್ಲೆ, ರಾಜ್ಯದ ಜನರಿಗೆ ಕೊಡಗಿನ ಮಣ್ಣಿನ ಪಾವಿತ್ರ‍್ಯತೆ ತಿಳಿದಿರುವುದರಿಂದಲೇ ಇಲ್ಲಿ ಜಾಗ ಖರೀದಿಸಲು ಮುಂದಾಗುತ್ತಿದ್ದಾರೆ. ಇಂತಹ ಮಣ್ಣನ್ನು ನಾವು ಪರಬಾರೆ ಮಾಡಬಾರದೆಂದು ಅವರು ಸಲಹೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಕರ್ನಾಟಕ ಸರ್ಕಾರದ ವಿದ್ಯುತ್ ನಿಗಮದ ಮುಖ್ಯ ಅಧಿಕಾರಿ ತೀತೀರ ರೋಷನ್ ಅಪ್ಪಚ್ಚು ಮಾತನಾಡಿ, ಕೊಡವರಿಗೆ ಬುಡಕಟ್ಟು ಸ್ಥಾನಮಾನ ಅಥವಾ ಪ್ರತ್ಯೇಕ ರಾಜ್ಯವಿದ್ದಿದ್ದರೆ ಇತರ ಜನಾಂಗದAತೆ ಹೆಚ್ಚಿನ ಬೆಳವಣಿಗೆ ಸಾಧಿಸಲು ಸುಲಭ ಸಾಧ್ಯವಾಗುತ್ತಿತ್ತು. ಆದರೆ ಈಗ ಅಂತಹ ಸ್ಥಾನಮಾನಗಳಿಲ್ಲದಿರುವುದರಿಂದ ಆದಷ್ಟು ಬುದ್ದಿವಂತಿಕೆಯಿAದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು.

ಕೊಡವ ಜನಾಂಗದ ಪೋಷಕರು ತಮ್ಮ ಮಕ್ಕಳಿಗೆ ಕೊಡವ ಸಂಸ್ಕೃತಿಯನ್ನು ಕಲಿಸಿ, ಅದರ ಮೇಲೆ ಅಭಿಮಾನ ಹುಟ್ಟಿಸುವುದರೊಂದಿಗೆ ಉತ್ತಮ ಶಿಕ್ಷಣ ನೀಡಿ ಯು.ಪಿ.ಎಸ್.ಸಿ. ಅಥವಾ ಕೆ.ಪಿ.ಎಸ್.ಸಿ.ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅಧಿಕಾರಿ ಹುದ್ದೆಗಳನ್ನು ಅಲಂಕರಿಸುವAತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಈ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮವು ತಮ್ಮೆಲ್ಲರ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶ. ಈ ವೇದಿಕೆಯನ್ನು ಬಳಸಿಕೊಂಡು ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿ. ಹಾಗೇ ಎಷ್ಟೋ ದಿನಗಳಿಂದ ತಯಾರಿ ನಡೆಸಿ ಕಾರ್ಯಕ್ರಮ ನೀಡುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು. ವೇದಿಕೆಯಲ್ಲಿ ದಾನಿಗಳಾದ ಕಾಳಿಮಾಡ ದಿನೇಶ್ ಕುಂಞAಗಡ ಕೃಷ್ಣ ಭೀಮಯ್ಯ, ಮಂದತವ್ವ ಸಾಂಸ್ಕೃತಿಕ ತಂಡದ ಮುಖ್ಯಸ್ಥೆ ಸುಳ್ಳಿಮಾಡ ಭವಾನಿ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಕೋಟ್ರಮಾಡ ರಾಣಿ ದೇವಯ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಶ್ಮ ಕಾರ್ಯಪ್ಪ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕ ಮಾಣೀರ ದೀಪಕ್ ವಂದಿಸಿದರು. ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲAಡ ಸತೀಶ್, ನಿರ್ದೇಶಕರಾದ ತಡಿಯಂಗಡ ಶಮ್ಮಿ ಸುಬ್ಬಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.