ಸೋಮವಾರಪೇಟೆ, ಅ .೨೩: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸಿದ್ದ ೫೦ನೇ ವರ್ಷದ ಆಯುಧ ಪೂಜೋತ್ಸವ ಅಂಗವಾಗಿ ಪಟ್ಟಣದ ವರ್ಕ್ಶಾಪ್, ವಾಹನ, ಅಂಗಡಿ ಮಳಿಗೆಗಳ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಸ್ಪರ್ಧೆಯ ಬಹುಮಾನ ವಿಜೇತರಿಗೆ ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ಮಣಿ ಕುಶಾಲಪ್ಪ, ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ಡ್ಯಾನಿ ಡೊಮಿನಿಕ್, ಸಹಕಾರ್ಯದರ್ಶಿ ಎಂ.ಎA. ಕಿರಣ್, ಉಪ ಕಾರ್ಯದರ್ಶಿ ಎಸ್.ಎಂ. ಕೃಷ್ಣ ಸೇರಿದಂತೆ ಪದಾಧಿಕಾರಿಗಳು, ಅತಿಥಿ ಗಣ್ಯರು ಬಹುಮಾನ ವಿತರಿಸಿದರು.

ಸೂಪರ್ ತ್ರೀ ಬಹುಮಾನಕ್ಕೆ ಬೆಟ್ಟದಳ್ಳಿ ಗ್ರಾಮದ ದಿವ್ಯ ನವೀನ್, ಮನ್ವಿತಾ ಅವರುಗಳು ಭಜನರಾದರು. ಪ್ಯಾಸೆಂಜರ್ ವಾಹನಗಳ ಅಲಂಕಾರ ಸ್ಪರ್ಧೆಯಲ್ಲಿ ಕೆ.ಎ. ೩೬ ಎಂ. ೦೮೩೮ ವಾಹನ ಪ್ರಥಮ, ಕೆ.ಎ.೧೭ ಎಂ. ೧೮೩೧ ವಾಹನ ದ್ವಿತೀಯ ಸ್ಥಾನ ಪಡೆದವು. ವರ್ಕ್ಶಾಪ್ ಮತ್ತು ಅಂಗಡಿ ಮಳಿಗೆಗಳ ವಿಭಾಗದಲ್ಲಿ ನಗರೂರಿನ ಕೂರ್ಗ್ ಹಿಲ್ಸ್ ನ್ಯಾಚುರಲ್ ಕಾಫಿ ಮತ್ತು ಸ್ಪೆöÊಸಸ್ ಅಂಗಡಿ ಪ್ರಥಮ, ಆನೆಕೆರೆಯ ಚಾಮುಂಡೇಶ್ವರಿ ವರ್ಕ್ಶಾಪ್ ದ್ವಿತೀಯ, ಮಾರ್ಕೆಟ್ ಏರಿಯಾದ ಶ್ರೀರಾಮ ಬೈಕ್ ವರ್ಕ್ಶಾಪ್ ತೃತೀಯ ಬಹುಮಾನ ಪಡೆದವು.

ಗೂಡ್ಸ್ ವಾಹನ ವಿಭಾಗದಲ್ಲಿ ಎತ್ತಿನ ಗಾಡಿ ಪ್ರಥಮ ಬಹುಮಾನ ಪಡೆಯಿತು. ಬೈಕ್ ವಿಭಾಗದಲ್ಲಿ ಕೆ.ಎ. ೫೫ ಎಲ್. ೮೭೫೦ ಪ್ರಥಮ, ಕೆ.ಎ. ೦೩ ಪಿ. ೯೨೧೨ ದ್ವಿತೀಯ ಬಹುಮಾನ ಪಡೆಯಿತು.