ಸೋಮವಾರಪೇಟೆ, ಅ. ೨೩: ಸಮೀಪದ ಕಿಬ್ಬೆಟ್ಟ ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಕಳೆದ ೯ ದಿನಗಳ ಕಾಲ ಪೂಜಿಸಿದ್ದ ಉತ್ಸವ ಮೂರ್ತಿಯನ್ನು ಹಾರಂಗಿ ನದಿಯಲ್ಲಿ ವಿಸರ್ಜಿಸಲಾಯಿತು.

ಪ್ರಧಾನ ಅರ್ಚಕ ಮನೋಜ್ ಭಟ್ ಅವರ ಪೌರೋಹಿತ್ವದಲ್ಲಿ ನವದುರ್ಗಾ ಮಾತೆಗೆ ೯ ದಿನಗಳ ಕಾಲ ಅಲಂಕಾರದೊAದಿಗೆ, ವಿಶೇಷ ಪೂಜೆ, ಹೋಮ ನಡೆಯಿತು.

ಈ ಸಂದರ್ಭ ಪ್ರಮುಖರಾದ ಶಾಂಭವಿ, ರುಕ್ಮಿಣಿ, ಶಿವಪ್ಪ, ಮಧು, ಗಣಪತಿ, ರವಿ, ರಾಧಾ, ಕುಶಾಲಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.