(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೨೨: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನೋಟಿಸ್ ವಿಚಾರಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ೬೨೨ ಮಂದಿ ಅನರ್ಹರಾಗಿದ್ದಾರೆ. ನೋಟಿಸ್ ವಿಚಾರಣೆ ಸಂದರ್ಭ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದ ಹಿನ್ನಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿದ್ದ ೬೨೨ ಮತದಾರರು ಅಂತಿಮ ಮತದಾರರ ಹೆಸರು ಅಂತಿಮ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಆಗಸ್ಟ್ ೨೪ರಂದು ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿತ್ತು. ಈ ಸಂದರ್ಭ ಲಾಜಿಕಲ್ ಡಿಸ್ಕೆçಪೆನ್ಸಿ ಮತ್ತು ಅನ್ ಮ್ಯಾಪಿಂಗ್ ಎಂದು ಕೊಡಗು ಜಿಲ್ಲೆಯಲ್ಲಿ ೫೮,೮೮೩ ಮತದಾರರಿಗೆ ನೋಟಿಸ್ ಜನರೇಟ್ ಮಾಡಲಾಗಿತ್ತು. ಆಗಸ್ಟ್ ೨೪ ರಿಂದ ಅ.೧೨ರವರೆಗೆ ನೋಟಿಸ್ ಪಡೆದ ಮತದಾರರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು.

ಮಡಿಕೇರಿ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕೆçಪೆನ್ಸಿ ಅಡಿಯಲ್ಲಿ ೯,೨೫೨ ಹಾಗೂ ಅನ್ ಮ್ಯಾಪಿಂಗ್ ೯,೫೩೩ ಮತದಾರರು ಸೇರಿ ೧೮,೭೮೫ ಮತದಾರರಿಗೆ ನೋಟಿಸ್ ನೀಡಲಾಗಿತ್ತು.

ವೀರಾಜಪೇಟೆ ಕ್ಷೇತ್ರದಲ್ಲಿ ೨೬,೫೫೮ ಮತದಾರರು ಲಾಜಿಕಲ್ ಡಿಸ್ಕೆçಪೆನ್ಸಿ ಹಾಗೂ ೧೩,೫೫೦ ಮತದಾರರು ಅನ್ ಮ್ಯಾಪಿಂಗ್ ಮತದಾರರು ಸೇರಿ ೪೦,೧೦೮ ಮಂದಿಗೆ ನೋಟಿಸ್ ನೀಡಲಾಗಿತ್ತು. ಅ ೧೨ರವರೆಗೆ ನೋಟಿಸ್ ಪಡೆದ ಮತದಾರರ ವಿಚಾರಣೆ ಪೂರ್ಣಗೊಳಿಸಲಾಗಿತ್ತು. ಇದೀಗ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೮,೭೭೯ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ ೧೫೭ ಮತದಾರರು ಅಂತಿಮ ಪಟ್ಟಿಯಲ್ಲಿ ಅವಕಾಶ ಪಡೆಯಲು ಅನರ್ಹರಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ೪,೦೭೭ ನೋಟಿಸ್ ಪಡೆದ ಮತದಾರರ ಪೈಕಿ ೩೨ ಮಂದಿ ಅನರ್ಹರಾಗಿದ್ದಾರೆ.

ಕುಶಾಲನಗರ ತಾಲೂಕಿನಲ್ಲಿ ೫,೬೮೪ ನೋಟಿಸ್ ಪಡೆದ ಮತದಾರರಲ್ಲಿ ೨೭ ಮಂದಿ ಅನರ್ಹರಾಗಿದ್ದಾರೆ.ಮಡಿಕೇರಿ ತಾಲ್ಲೂಕಿನಲ್ಲಿ ೯,೦೧೮ ಮಂದಿ ಮತದಾರರಿಗೆ ನೋಟಿಸ್ ನೀಡಲಾಗಿತ್ತು, ಈ ಪೈಕಿ ೯೮ ಮತದಾರರು ಅನರ್ಹರಾಗಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕೆçಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ೪೦,೧೦೪ ಮಂದಿ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿತ್ತು. ಈ ಪೈಕಿ ೪೬೫ ಮಂದಿ ಮತದಾರರು ಅನರ್ಹರಾಗಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮಡಿಕೇರಿ ತಾಲೂಕಿನಲ್ಲಿ ೧೨,೨೬೧ ಮತದಾರರಿಗೆ ನೋಟಿಸ್ ನೀಡಲಾಗಿತ್ತು, ಈ ಪೈಕಿ ೧೨೩ ಅನರ್ಹ ಮತದಾರರನ್ನು ಗುರುತಿಸಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ೧೧,೨೦೦ ಮತದಾರರಿಗೆ ನೋಟಿಸ್ ನೀಡಲಾಗಿತ್ತು ಈ ಪೈಕಿ ೪೪ ಮಂದಿ ಅನರ್ಹರಾಗಿದ್ದಾರೆ.- ಪೊನ್ನಂಪೇಟೆ ತಾಲೂಕಿನಲ್ಲಿ ೧೬,೬೪೩ ಮತದಾರರಿಗೆ ನೋಟಿಸ್ ನೀಡಲಾಗಿತ್ತು, ಇದರಲ್ಲಿ ೨೯೮ ಮತದಾರರು ಅನರ್ಹರಾಗಿದ್ದಾರೆ.

ಜಿಲ್ಲೆಯಲ್ಲಿ ೬,೧೧೩ ಮತದಾರರು ಹೆಚ್ಚಳ

ಜಿಲ್ಲೆಯಲ್ಲಿ ಆಗಸ್ಟ್ ೨೪ ರಂದು ಪ್ರಕಟಗೊಂಡ ಕರಡು ಮತದಾರರು ಪಟ್ಟಿಯಲ್ಲಿ ಒಟ್ಟು ೪,೦೫,೮೦೩ ಮತದಾರರು ಇದ್ದರು.ಇದೀಗ ಅ.೧೫ರವರೆಗೆ ಜಿಲ್ಲೆಯಲ್ಲಿ ೪,೧೧,೯೧೬ ಮಂದಿ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮತದಾರರ ಪೈಕಿ ೩,೩೭೨ ಮಹಿಳಾ ಮತದಾರರು ಹಾಗೂ ೨,೭೪೧ಪುರುಷ ಮತದಾರರು ಇದ್ದಾರೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿಸಿ ೨,೦೧,೦೩೫ ಪುರುಷರು, ೨,೧೦,೮೭೭ ಮಹಿಳಾ ಮತದಾರರು ಹಾಗೂ ೦೪ ಇತರೆ ಮತದಾರರು ಸೇರಿಸಿ ೪,೧೧,೯೧೬ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ಹೆಸರು ತೆಗೆಯುವಿಕೆ,ತಿದ್ದುಪಡಿ ಸೇರಿ ಜೂನ್ ೧೬ರಿಂದ ಅ.೧೫ರವರೆಗೆ ಒಟ್ಟು ೨೯,೩೮೦ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.೨೩ರವರೆಗೆ ಅವಕಾಶ ನೀಡಲಾಗಿತ್ತು. ಸೆ ೨೪ ರಿಂದ ಅ. ೨೨ ವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಜಿಲ್ಲೆಯಲ್ಲಿ ಈoಡಿm-೬ (ಹೊಸ ಸೇರ್ಪಡೆ) ೬,೯೫೦, ಈoಡಿm-೬ಂ - ೨೨, ಈoಡಿm-೭ (ಹೆಸರು ತೆಗೆಯುವಿಕೆ) ೧,೮೮೪, ಈoಡಿm-೮ (ತಿದ್ದುಪಡಿ) ೨೦,೫೨೪ ಅರ್ಜಿಗಳು ಸಲ್ಲಿಕೆಯಾಗಿವೆ.