ಮಡಿಕೇರಿ,ಅ.೨೨; ಸರಿಗಮಪ ಖ್ಯಾತಿಯ ಕಲಾವಿದರನ್ನೊಳಗೊಂಡ ಬೆಂಗಳೂರಿನ ಮಹೇಂದ್ರ ಮತ್ತು ತಂಡದ ಗಾಯಕರುಗಳ ಹಾಡಿನ ಮೋಡಿನ ಪ್ರೇಕ್ಷಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ವಿಜಯದಶಮಿ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಒಂದರ ಮೇಲೊಂದರAತೆ ಹಾಡುಗಳನ್ನು ಹಾಡಿ ರಂಜಿಸಿದರು. ಇದರೊಂದಿಗೆ ಸಂಸ್ಕೃತಿ ಸಿರಿ ಟ್ರಸ್ಟ್ ಕೊಡಗು ತಂಡದ ವತಿಯಿಂದ ಅಯ್ಯಪ್ಪ ಸ್ವಾಮಿಯ ಚರಿತ್ರೆಯ ನೃತ್ಯರೂಪಕ ಗಮನ ಸೆಳೆಯಿತು. ಕುಶಾಲನಗರದ ಡಿ.ಸಿ.ಡ್ಯಾನ್ಸ್ ಸ್ಟುಡಿಯೋದವರಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು.
ಬಳಿಕ ಮಂಗಳೂರಿನ ಕಲಾಕಾರ್ ತಂಡದವರಿAದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.