ಸುಂಟಿಕೊಪ್ಪ, ಅ. ೨೨: ಕಂಬಿಬಾಣೆ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ೭೧ ನೇ ವರ್ಷದ ದಸರಾ ಮತ್ತು ವಿಜಯದಶಮಿ ಉತ್ಸವವು ವಿಜ್ರಂಭಣೆಯಿAದ ರಾತ್ರಿ ನಡೆಯಿತು.
ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದೊAದಿಗೆ ವಾದ್ಯಗೋಷ್ಠಿ, ನಾದಸ್ವರದೊಂದಿಗೆ ಭವ್ಯ ಶೋಭಯಾತ್ರೆ ನಡೆಯಿತು. ಈ ಮದ್ಯೆ ಚಿಕ್ಲಿಹೊಳೆ ಜಲಾಶಯದ ಬಳಿಯ ಚಾಮುಂಡೇಶ್ವರಿ ದೇವಾಲಯದ ಡಿಜೆಯೊಂದಿಗೆ ಅಲಂಕೃತ ಮಂಟಪ ಇದರೊಂದಿಗೆ ಸೇರಿಕೊಂಡು ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು. ದೇವಾಲಯದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಹಾಪೂಜೆಯನ್ನು ಅರ್ಚಕ ಪ್ರಭಾಕರ್ ಕುದ್ಧಣ್ಣಯ್ಯ ಅವರು ನೆರವೇರಿಸುವುದರ ಮೂಲಕ ೧೦ ದಿನಗಳ ನವರಾತ್ರಿ ಉತ್ಸವ ಸಂಪನ್ನಗೊAಡಿತು. ದೇವಾಲಯದ ಅಧ್ಯಕ್ಷ ಡಾ. ಶಶಿಕಾಂತ್ ರೈ, ಕಾರ್ಯದರ್ಶಿ ಗಣೇಶ, ಖಜಾಂಚಿ ಅಜಿತ್ ಕುಮಾರ್, ರವಿ ಹಾಗೂ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.