ಪೊನ್ನAಪೇಟೆ, ಅ. ೨೨: ಶ್ರೀ ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಗೋಣಿಕೊಪ್ಪಲು ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಹಯೋಗದಲ್ಲಿ ಆಯುಧ ಪೂಜೆ ದಿನ ಏರ್ಪಡಿಸಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ ಜಸ್ಕರಣ್ ಸಿಂಗ್ ಮತ್ತು ತಂಡ ಸಂಗೀತದ ರಸದೌತಣ ಉಣಬಡಿಸಿತು.

ಗಾಯಕ ಜಸ್ಕರಣ್ ಸಿಂಗ್ ಜೇನದನಿಯೋಳೆ ಹಾಡನ್ನು ಪ್ರೇಕ್ಷಕರ ನಡುವೆ ಹಾಡಿ ಸಂಭ್ರಮಿಸಿದರು.

ಅAಕಿತಾ ಖುಂಡು, ಸುಪ್ರೀತ್ ಸೇರಿದಂತೆ ಸರಿಗಮಪ ಖ್ಯಾತಿಯ ಯುವ ಗಾಯಕರ ತಂಡದ ಗಾನಸುಧೆಗೆ ಕಿಕ್ಕಿರಿದು ತುಂಬಿದ್ದ ಜನಸಾಗರ ಸಂಭ್ರಮಿಸಿತು

ಇದಕ್ಕೂ ಮುನ್ನ ನಂಜನಗೂಡಿನ ಟೀಂ ಅಶೋಕ ತಂಡ ಡೊಳ್ಳು ಕುಣಿತ, ತಮಟೆ ಹಾಗೂ ನಗಾರಿಯೊಂದಿಗೆ ಜನಪದ ಕಲೆ ಸಂಸ್ಕೃತಿಯ ಅನಾವರಣ ಮಾಡಿದರು.

ದಸರಾ ಹಬ್ಬದ ಕೊನೆ ದಿನ ವಿಜಯದಶಮಿಯಂದು ಎ ರಿಪ್ಲೆಕ್ಷನ್ ಮತ್ತು ನಾಟ್ಯಾಂಜಲಿ ತಂಡ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು. ಮೈಸೂರಿನ ಪಿವಿಆರ್ ಇವೆಂಟ್ಸ್ ಅವರ ರಸಮಂಜರಿ ಕಾರ್ಯಕ್ರಮ ಮುದನೀಡಿತು.