ನಾಪೋಕ್ಲು, ಅ. ೨೦: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ೩೧ನೇ ವರ್ಷದ ಕಾವೇರಿ ರಥಯಾತ್ರೆ ನಾಪೋಕ್ಲುವಿನಿಂದ ತಲಕಾವೇರಿಗೆ ತೆರಳಿತು.
ಇಲ್ಲಿಗೆ ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥವು ಶನಿವಾರ ತಲಕಾವೇರಿಗೆ ಬೆಟ್ಟಗೇರಿ - ಭಾಗಮಂಡಲ ಮೂಲಕ ತಲಕಾವೇರಿಗೆ ತೆರಳಿತು.
ಭಾನುವಾರ ಭಾಗಮಂಡಲದಿAದ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಅತ್ಯಾಕರ್ಷಕ ಶ್ರೀ ಕಾವೇರಿ ಮಾತೆಯ ಸ್ವರೂಪ ಇರಿಸಲಾದ ವಾಹನದ ರಥಯಾತ್ರೆ ಆರಂಭಗೊAಡು ಭಕ್ತರಿಗೆ ತೀರ್ಥ ವಿತರಣೆಯನ್ನು ಚೇರಂಗಾಲ, ಅಯ್ಯಂಗೇರಿ ಪುಲಿಕೋಟು, ಪೇರೂರು, ಬಲ್ಲಮಾವಟಿ, ಚೋನಕೆರೆ, ನಾಪೋಕ್ಲು ಗ್ರಾಮಗಳಲ್ಲಿ ನಡೆಸಲಾಯಿತು.
ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ, ಕಳೆದ ೩೦ ವರ್ಷಗಳಿಂದ ಯಶಸ್ವಿಯಾಗಿ ಭಕ್ತರಿಗೆ ತೀರ್ಥ ವಿತರಣೆ ಮಾಡಲಾಗುತ್ತಿದೆ. ತಲಕಾವೇರಿಗೆ ತೆರಳಲಾರದ ಭಕ್ತರಿಗೆ ತೀರ್ಥ ವಿತರಿಸುತ್ತಿರುವುದು ಸಂತಸ ತಂದಿದೆ. ಇದಕ್ಕೆ ಎಲ್ಲರ ಸಹಕಾರ ಲಭಿಸಿದೆ.
ಭಾಗಮಂಡಲದಿAದ ಅಯ್ಯಂಗೇರಿ, ಬಲ್ಲಮಾವಟಿ ಮಾರ್ಗವಾಗಿ ನಾಪೋಕ್ಲುವರೆಗೆ ತೀರ್ಥ ವಿತರಿಸಲಾಗುತ್ತದೆ ಎಂದರು. ಈ ಸಂದರ್ಭ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟಂಡ ಸುಮಿತ್ರ ದೇವಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.