ಮಡಿಕೇರಿ, ಅ. ೨೦: ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ಹಾಗೂ ಕೃಷಿ ಆಧಾರಿತ ಉದ್ಯಮಗಳನ್ನು ಬಲಪಡಿಸಲು ಮಾರುಕಟ್ಟೆ ಸೌಲಭ್ಯಗಳನ್ನು ವಿಸ್ತರಿಸುವುದು, ಮೌಲ್ಯವರ್ಧನೆಗೆ ಉತ್ತೇಜನ ನೀಡುವುದು ಮತ್ತು ರಫ್ತು ಅವಕಾಶಗಳನ್ನು ಅನ್ವೇಷಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಕೊಡಗು, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬೆಂಗಳೂರು ಪ್ರಾದೇಶಿಕ ಕಚೇರಿಗಳ ಸಹಯೋಗದೊಂದಿಗೆ “ಕೃಷಿ ಸಂಸ್ಕರಿತ ಉತ್ಪನ್ನಗಳ ರಫ್ತು ಮಾರುಕಟ್ಟೆಗಳು” ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಗೋಣಿಕೊಪ್ಪಲಿನ ಕೃಷಿ ವಿಜ್ಙಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.

ರೈತರು, ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು (ಈPಔs) ಹಾಗೂ ಗ್ರಾಮೀಣ ಉದ್ಯಮಿಗಳಿಗೆ ಕೃಷಿ ಮತ್ತು ಸಂಸ್ಕರಿತ ಉತ್ಪನ್ನಗಳ ರಫ್ತು ಅವಕಾಶಗಳು, ಗುಣಮಟ್ಟದ ಮಾನದಂಡಗಳು, ನಿಯಂತ್ರಣಾತ್ಮಕ ಅವಶ್ಯಕತೆಗಳು, ಅಗತ್ಯ ದಾಖಲೆಗಳು ಹಾಗೂ ಅನುಸರಣೆ ಪ್ರಕ್ರಿಯೆಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ರೈತರ ಆದಾಯವನ್ನು ಹೆಚ್ಚಿಸುವುದು ಹಾಗೂ ಕೃಷಿ ಆಧಾರಿತ ಉದ್ಯಮಗಳ ಆರ್ಥಿಕ ಸುಸ್ಥಿರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಫ್ತು ಮಾರುಕಟ್ಟೆಗಳ ಅನ್ವೇಷಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕಗಳ ಬಲವರ್ಧನೆಗೆ ವಿಶೇಷ ಒತ್ತು ನೀಡಲಾಯಿತು. ಕೃಷಿ ಮತ್ತು ಸಂಸ್ಕರಿತ ಉತ್ಪನ್ನಗಳ ರಫ್ತಿಗೆ ಇರುವ ಅವಕಾಶಗಳು ಹಾಗೂ ಅನುಸರಿಸಬೇಕಾದ ನಿಯಮಗಳು” ಎಂಬ ವಿಷಯದ ಕುರಿತು ನಡೆದ ತಾಂತ್ರಿಕ ಅಧಿವೇಶನದಲ್ಲಿ ರಫ್ತಿನ ವಿವಿಧ ಅವಕಾಶಗಳು, ಅಗತ್ಯ ಕಾರ್ಯವಿಧಾನಗಳು ಹಾಗೂ ದೇಶೀಯ ಮತ್ತು ಅಂತರರಾಷ್ಟಿçÃಯ ಮಾರುಕಟ್ಟೆಗಳನ್ನು ಪ್ರವೇಶಿಸಲು ಪಾಲಿಸಬೇಕಾದ ನಿಯಮಗಳು ಮತ್ತು ಮಾನದಂಡಗಳ ಕುರಿತು ಮಾಹಿತಿ ನೀಡಲಾಯಿತು. ಕೃಷಿ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಗುಣಮಟ್ಟದ ಭರವಸೆ, ಸೂಕ್ತ ಸಂಸ್ಕರಣಾ ವಿಧಾನಗಳು ಮತ್ತು ಮಾರುಕಟ್ಟೆ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸುವುದರ ಮಹತ್ವವನ್ನು ವಿವರಿಸಲಾಯಿತು. ತಂತ್ರಜ್ಞಾನಗಳ ಪ್ರಸಾರ, ಸಾಮರ್ಥ್ಯ ವೃದ್ಧಿ, ತಾಂತ್ರಿಕ ಮಾರ್ಗದರ್ಶನ ಮತ್ತು ವಿಸ್ತರಣಾ ಸೇವೆಗಳ ಮೂಲಕ ಮಾರುಕಟ್ಟೆ ಆಧಾರಿತ ಕೃಷಿಯನ್ನು ಉತ್ತೇಜಿಸುವಲ್ಲಿ ಐಸಿಎಆರ್-ಕೆವಿಕೆ, ಕೊಡಗಿನ ಪಾತ್ರವನ್ನು ಸಹ ವಿವರಿಸಲಾಯಿತು. ಸಂವಾದಾತ್ಮಕ ಪ್ರಶ್ನೋತ್ತರ ಅಧಿವೇಶನದಲ್ಲಿ ಭಾಗವಹಿಸಿ ದವರು ರಫ್ತು ಅವಕಾಶಗಳು ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಸಂಬAಧಿಸಿದ ತಮ್ಮ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ, ಮಾಹಿತಿ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮ ವನ್ನು ಐಸಿಎಆರ್-ಕೆವಿಕೆ, ಕೊಡಗಿನ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಸಂಗಪ್ಪ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಬೆಂಗಳೂರಿನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾದ ಕಾರಂತ್ ಹಾಗೂ ಮಡಿಕೇರಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಶಿವಕುಮಾರ್, ಪ್ರಭಾಕರ ಬಿ., ವಿಷಯ ತಜ್ಞರು (ತೋಟಗಾರಿಕೆ), ವೀರೇಂದ್ರ ಕುಮಾರ್ ಕೆ.ವಿ., ವಿಷಯ ತಜ್ಞರು (ಸಸ್ಯ ಸಂರಕ್ಷಣೆ) ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಕೆ.ಟಿ. ಮೋಹನ್ ಕುಮಾರ್, ವಿಷಯ ತಜ್ಞರು (ಮಣ್ಣು ವಿಜ್ಞಾನ); ಡಾ. ಮೃಣಾಲ್ ಬಾರ್ಭೈ, ವಿಷಯ ತಜ್ಞರು (ಗೃಹ ವಿಜ್ಞಾನ); ಹಾಗೂ ಶ್ರೀ ಬೆನೆಸಿಯೋ ಫರ್ನಾಂಡಿಸ್, ಕಾರ್ಯಕ್ರಮ ಸಹಾಯಕರು (ಕಂಪ್ಯೂಟರ್) ಉಪಸ್ಥಿತರಿದ್ದರು. ಇದರೊಂದಿಗೆ ನರ್ಬಾಡ್ ಪ್ರತಿನಿಧಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಐಸಿಎಆರ್-ಕೆವಿಕೆ, ಕೊಡಗಿನ ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿ, ರೈತರು, ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವು ಜ್ಞಾನ ವಿನಿಮಯಕ್ಕೆ ಉತ್ತಮ ವೇದಿಕೆಯನ್ನು ಒದಗಿಸುವುದರ ಜೊತೆಗೆ, ಕೊಡಗು ಜಿಲ್ಲೆಯಲ್ಲಿ ರಫ್ತು ಆಧಾರಿತ ಕೃಷಿ ಅಭಿವೃದ್ಧಿ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವೈವಿಧ್ಯೀಕರಣದ ಕುರಿತು ಅರಿವು ಮೂಡಿಸಲು ಸಹಕಾರಿಯಾಯಿತು. ಂPಇಆA, ಬೆಂಗಳೂರಿನ ಸಹಾಯಕ ಮಹಾ ಪ್ರಬಂಧಕರಾದ ಯು. ಧರ್ಮರಾವ್ ಅವರ ಮಾರ್ಗದರ್ಶನವು ಈ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸಹಕಾರಿಯಾಗಿತ್ತು. ಚಂದು ಅವರು ಐಸಿಎಆರ್-ಕೆವಿಕೆ, ಕೊಡಗಿನ ಎಲ್ಲಾ ವಿಷಯ ತಜ್ಞರ ಮಾರ್ಗದರ್ಶನದಲ್ಲಿ ಸಂಯೋಜಿಸಿದರು.