ಸಿದ್ದಾಪುರ, ಅ. ೨೦: ಕರಡಿಗೋಡು ಗ್ರಾಮದ ಹೊಳೆಕರೆ ನಿವಾಸಿ ಷಣ್ಮುಗಂ ಅವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಯಾದ ವಿಚಾರ ತಿಳಿದು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಷಣ್ಮುಗಂ ಅವರಿಗೆ ಧೈರ್ಯ ತುಂಬಿದರು.

ಅಲ್ಲದೇ ಕುಟುಂಬಕ್ಕೆ ಅಗತ್ಯ ಆಹಾರ ಮತ್ತು ಇನ್ನಿತರ ವಸ್ತುಗಳ ಕಿಟ್ ಗಳನ್ನು ವಿತರಣೆ ಮಾಡಿದರು. ಕಾನೂನಿನ ಚೌಕಟ್ಟಿನಲ್ಲಿ ಸಿಗುವ ಸೌಲಭ್ಯವನ್ನು ಮನೆ ಮಾಲೀಕರಿಗೆ ನೀಡುವಂತೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರಿಗೆ ಸೂಚಿಸಿದರು.

ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಕೆ.ಜಿ. ಕರ್ಪಯ್ಯ, ಕುಕ್ಕುನೂರು ಮಿಲನ್, ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿ ಸಚಿನ್ ಕುಲಕರ್ಣಿ ಇನ್ನಿತರರು ಹಾಜರಿದ್ದರು.