ಸೋಮವಾರಪೇಟೆ, ಅ. ೨೦: ಉತ್ತರ ಕೊಡಗಿನ ದಸರಾ ಜನೋತ್ಸವ ಎಂದೇ ಖ್ಯಾತಿ ಪಡೆದಿರುವ ಸೋಮವಾರಪೇಟೆ ಪಟ್ಟಣದಲ್ಲಿ ನಡೆಯುವ ಆಯುಧ ಪೂಜೋತ್ಸವ ಸಮಾರಂಭ ಸಾವಿರಾರು ಮಂದಿಯ ಭಾಗವಹಿಸುವಿಕೆಯಿಂದ ಅದ್ದೂರಿಯಾಗಿ ನಡೆಯಿತು.

ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿAದ ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿರುವ ಆಯುಧ ಪೂಜೋತ್ಸವ ಈ ಬಾರಿಯೂ ಸಂಭ್ರಮದಿAದ ನಡೆಯಿತು. ಸಂಘದ ವತಿಯಿಂದ ೫೦ನೇ ವರ್ಷದ ಕಾರ್ಯಕ್ರಮವಾದ್ದರಿಂದ ಸಹಜವಾಗಿ ಸದಸ್ಯರುಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಆಯುಧ ಪೂಜೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು, ಮೋಟಾರ್ ಯೂನಿಯನ್ ವತಿಯಿಂದ ಜನೋತ್ಸವ ಮಾದರಿಯಲ್ಲಿ ನಡೆಸುವ ಆಯುಧ ಪೂಜೋತ್ಸವಕ್ಕೆ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

ಮೋಟಾರ್ ಯೂನಿಯನ್ ಸದಸ್ಯರ ಬಾಡಿಗೆ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿದ್ದರೂ, ಮಳೆ, ಬಿಸಿಲಿನಿಂದ ರಕ್ಷಣೆ ಇರಲಿಲ್ಲ. ಇದನ್ನು ಮನಗಂಡು ಸರ್ಕಾರದಿಂದ ಮೇಲ್ಛಾವಣಿ ನಿರ್ಮಿಸಲು ಅನುದಾನ ಒದಗಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ಡಾ. ಮಂತರ್ ಗೌಡ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಬದುಕಿನ ಭಾಗವಾಗಿರುವ ಆಯುಧ, ವಾಹನಗಳನ್ನು ಪೂಜಿಸುವುದು ನಮ್ಮ ಸಂಪ್ರದಾಯ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದ ಸುಸ್ಥಿತಿಗೆ ಪ್ರತಿಯೋರ್ವರೂ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ವಹಿಸಿದ್ದರು. ಪ್ರಮುಖರಾದ ಕೆ.ಎ. ಯಾಕೂಬ್, ಚೇತನ್, ಬಿ.ಬಿ. ಸತೀಶ್, ಚಕ್ರವರ್ತಿ ಸುರೇಶ್, ಗಿರೀಶ್ ಮಲ್ಲಪ್ಪ, ವಿನಿ, ಡಿ.ಯು. ಕಿರಣ್, ಎನ್.ಎಸ್. ಜಯರಾಂ, ಕೆ.ಟಿ. ಸತೀಶ್, ಬಾಗೇರಿ ಮಧು, ನತೀಶ್ ಮಂದಣ್ಣ, ರತನ್ ಮಹೇಶ್, ಎನ್.ಎಸ್. ಶ್ರೀನಿವಾಸ್, ಲಿಖಿತ್ ದಾಮೋಧರ್ ಸೇರಿದಂತೆ ಇತರರು ಇದ್ದರು.

ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಸಂಘದ ಖಜಾಂಚಿ ಡ್ಯಾನಿ ಡೊಮಿನಿಕ್, ಅರೆಯೂರಿನ ಪ್ರಗತಿಪರ ಕೃಷಿಕ ಟಿ.ಕೆ. ಲೋಕಾನಂದ ಅವರುಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಇದರೊಂದಿಗೆ ಸೋಮವಾರಪೇಟೆ ಪಟ್ಟಣದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪಂಚಾಯಿತಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ರಾತ್ರಿ ಕಲಾವಿದ ವಾಸುಕಿ ವೈಭವ್ ತಂಡದಿAದ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮ ಮನಸೂರೆಗೊಳ್ಳುವಂತೆ ಮಾಡಿತು. ತಡರಾತ್ರಿಯವರೆಗೂ ಗಾನಸುಧೆ ಹರಿಸಿದ ಗಾಯಕರು, ಪ್ರೇಕ್ಷಕರನ್ನು ರಂಜಿಸಿದರು. ಯುವ ಸಮೂಹ ಚಲನಚಿತ್ರ ಗೀತೆಗಳ ಗಾಯನಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿತು. ತಡರಾತ್ರಿಯವರೆಗೂ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಎರಡನೇ ದಿನ ನಡೆದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಕೂಡ ಅದ್ಭುತವಾಗಿ ಮೂಡಿಬಂತು. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಕಲಾವಿದರ ತಂಡಗಳೂ ಭಾಗವಹಿಸಿ ಅದ್ಭುತ ಪ್ರದರ್ಶನ ನೀಡಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ಮೋಟಾರ್ ಯೂನಿಯನ್‌ನಿಂದ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ಚಾಲಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಉದ್ಯಮಿ ಎಡಿಕೇರಿ ಪ್ರಸನ್ನ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ, ಚೌಡ್ಲು ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಪ.ಪಂ. ಮಾಜಿ ಸದಸ್ಯರಾದ ಶೀಲಾ ಡಿಸೋಜ, ಬಿ.ಆರ್. ಮಹೇಶ್, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತಾ.ಪಂ. ಮಾಜಿ ಸದಸ್ಯೆ ತಂಗಮ್ಮ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಜೇಸೀ ಮಾಜಿ ಅಧ್ಯಕ್ಷೆ ಎಂ.ಎ. ರುಬೀನಾ, ನಿವೃತ್ತ ಶಿಕ್ಷಕ ಶಿವಕುಮಾರ್, ಕರವೇ ನಗರಾಧ್ಯಕ್ಷ ಮಂಜುನಾಥ್, ಆಟೋ ಯೂನಿಯನ್ ಅಧ್ಯಕ್ಷ ಸಂಪತ್‌ಕುಮಾರ್ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಿ.ಗ್ರೂಪ್ ನೌಕರ ಹೆಚ್.ಸಿ. ಮಂಜುನಾಥ್, ನೇಗಳ್ಳೆಯ ನಿವೃತ್ತ ಯೋಧ ಎನ್.ಆರ್. ಅಜಿತ್ ಕುಮಾರ್, ಪೌರ ಕಾರ್ಮಿಕ ಹೆಚ್.ಬಿ. ಮಂಜುನಾಥ್ ಅವರುಗಳನ್ನು ಅತಿಥಿಗಳು ಸನ್ಮಾನಿಸಿದರು. ವೇದಿಕೆಯಲ್ಲಿ ಜಗ್ಗಿ ಜಾದುಗಾರ್ ಅವರಿಂದ ಮೂಡಿಬಂದ ಜಾದೂ ಪ್ರದರ್ಶನ ಸಭಿಕರನ್ನು ರಂಜಿಸಿತು.

ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಇದರೊಂದಿಗೆ ವಾಹನಗಳ ಅಲಂಕಾರ, ವರ್ಕ್ಶಾಪ್‌ಗಳ ಅಲಂಕಾರ ಸ್ಪರ್ಧೆ, ಸಂಘದ ಸದಸ್ಯರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಗೌರವಿಸಲಾಯಿತು.