ಕೊಡ್ಲಿಪೇಟೆ, ಅ. ೧೮: ಕಾವೇರಿ ತೀರ್ಥೋದ್ಭವ ಪವಿತ್ರ ಸಂದರ್ಭ ಕೊಡ್ಲಿಪೇಟೆಯ ನಂದಿ ನೇಸರ ಉದ್ಯಾನವನದ ನಂದೀಪುರ ಕೆರೆಯಲ್ಲಿ ಕಾವೇರಿ ಬಾಗಿನ ಅರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಕೊಡ್ಲಿಪೇಟೆಯ ಗಣಪತಿ ದೇವಸ್ಥಾನದಿಂದ ನಂದಿಪುರ ಕೆರೆಯವರೆಗೆ ನಂದಿವೃAದ, ಕಲಶ ಹಾಗೂ ಪೂರ್ಣಕುಂಭದೊAದಿಗೆ ಮೆರವಣಿಗೆ ನಡೆಯಿತು.

ಚಿಕ್ಕಮಗಳೂರಿನ ಶ್ರೀ ದೇವಿ ಗುರುಕುಲದ ಮಾತೆಯರಿಂದ ರುದ್ರಪಠಣ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಯಧುವೀರರ ನೇತೃತ್ವದ ಶ್ರೀ ಶಂಕರ ಶಾಸ್ತಿçಗಳ ತಂಡದಿAದ ಕಾವೇರಿ ಆರತಿ ನೆರವೇರಿಸಲಾಯಿತು.

ರಾತ್ರಿ ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವ ಪವಿತ್ರ ಸಂದರ್ಭದೊAದಿಗೆ ಸಂಯೋಜಿಸಿ, ನಂದಿಪುರ ಕೆರೆಗೆ ಭಕ್ತಿಪೂರ್ವಕವಾಗಿ ಬಾಗಿನ ಅರ್ಪಣೆ ಮಾಡಲಾಯಿತು. ಪೂಜಾ ವಿಧಿವಿಧಾನಗಳನ್ನು ಸ್ಥಳೀಯ ವಿವಿಧ ಮಠಗಳ ಮಠಾಧೀಶರು ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಅರ್ಚಕರುಗಳು ಪಾಲ್ಗೊಂಡು ಧಾರ್ಮಿಕ ಕೈಂಕರ್ಯ ನೆರೆವೇರಿಸಿದರು.

ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.