ಕಡಂಗ, ಅ. ೧೭: ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದಿAದ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಮೆರಿಕದಲ್ಲಿ ವೈದ್ಯಕೀಯ ವ್ಯಾಸಂಗ ಪೂರ್ಣಗೊಳಿಸಿ ಈಗ ನಾಪೋಕ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿರುವ ಡಾ.ಆಯಿಷಾ ಶೌಕತ್ತಲಿ ಕುಂಜಿಲ ಅವರಿಗೆ ಮತ್ತು ಕನ್ನಡ ಮಾಧ್ಯಮದ ಶಾಲೆಯಲ್ಲಿ ಕಲಿತು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ವೈದ್ಯಕೀಯ ವ್ಯಾಸಂಗ ಮಾಡಲು ಸರ್ಕಾರಿ ಕೋಟಾದಲ್ಲಿ ಸೀಟ್ ಪಡೆದು ಸಾಧನೆ ಮಾಡಿದ ಎಮ್ಮೆಮಾಡು ಮೂಲದ ಫಾಸಿಲ ಅಬ್ದುಲ್ಲಾ ಅವರನ್ನು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಹೊದವಾಡದಲ್ಲಿರುವ ರಾಫೆಲ್ಸ್ ಶಾಲಾ ಕಾಲೇಜು ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು, ಫಾಸಿಲ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ೨೦,೦೦೦/- ರೂ ಗಳ ವಿದ್ಯಾರ್ಥಿ ವೇತನವನ್ನು ಸಹ ಸಂಘದ ವತಿಯಿಂದ ನೀಡಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಫೆಲ್ಸ್ ಕಾಲೇಜು ಪ್ರಾಂಶುಪಾಲರು, ನಾಪೋಕ್ಲು ಠಾಣಾ ಪೊಲೀಸ್ ಅಧಿಕಾರಿಗಳು, ಬಲ್ಲಮಾವಟಿ ಶಾಲೆಯ ಹಿರಿಯ ಉಪನ್ಯಾಸಕರಾದ ಮೆಹಬೂಬ್ ಮಾಸ್ಟರ್ ಮತ್ತು ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡAಡ ಕುಂಜಿಲ ಅವರು ಉಪಸ್ಥಿತರಿದ್ದರು.