ಮಡಿಕೇರಿ, ಅ. ೧೭: "ಕೊಡವಲ್ಯಾಂಡ್‌ನ ಭೌಗೋಳಿಕ ರಾಜಕೀಯ ಸ್ವಾಯತ್ತತೆಗಾಗಿ ಸಿಎನ್‌ಸಿಯ (ಅಓಅ) ಶಾಂತಿಯುತ ಮತ್ತು ಸಂವಿಧಾನಿಕ ಪ್ರಯಾಣವು ೧೦೦ ದಿನಗಳಲ್ಲಿ ಸಾಧಿಸಲ್ಪಡಬಹುದು, ಇದಕ್ಕೆ ೧೦೦ ತಿಂಗಳುಗಳು ಹಿಡಿಸಬಹುದು, ಅಥವಾ ೧೦೦ ವರ್ಷಗಳೇ ಬೇಕಾಗಬಹುದು. ಆದರೆ ನಾವು ಕೊಡವರು, ಕೊಡವ ನ್ಯಾಷನಲ್ ಕೌನ್ಸಿಲ್ (ಅಓಅ) ಬ್ಯಾನರ್ ಅಡಿಯಲ್ಲಿ, ಈ ಕಾರ್ಯಕ್ಕೆ ದೃಢಸಂಕಲ್ಪ ಮಾಡಿದ್ದೇವೆ ಮತ್ತು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು. ಮೂರ್ನಾಡಿನಲ್ಲಿ ನಡೆದ ೬ನೇ ಸಾರ್ವಜನಿಕ ಸಂಪರ್ಕ ಮಾನವ ಸರಪಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹುಸಂಖ್ಯಾತರ ಡೊಮೇನ್ ಅಡಿಯಲ್ಲಿ ಕಾಂಪ್ಯಾಕ್ಟ್ ಭೂಪ್ರದೇಶದಲ್ಲಿ ವಾಸಿಸುವ ಯಾವುದೇ ಸಣ್ಣ ದೇಶೀಯ ಸೂಕ್ಷ್ಮ ಸಮುದಾಯಕ್ಕೆ ಜಿಯೋ ಪೊಲಿಟಿಕಲ್ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವು ಭಾರತೀಯ ಸಂವಿಧಾನದಿAದ ಅಂಗೀಕರಿಸಲ್ಪಟ್ಟ, ಆದಿಮಸಂಜಾತರ ಹಕ್ಕುಗಳ ಮೇಲಿನ ಯುಎನ್ ಘೋಷಣೆಯಲ್ಲಿ ಪ್ರತಿಪಾದಿಸಲಾದ ಒಂದು ಸಹಜ ಹಕ್ಕಾಗಿದೆ ಎಂದರು. ಸಿಖ್ಖರ ಕೃಪಾನ್ ಮತ್ತು ಗೂರ್ಖಾಗಳ ಕುಕ್ರಿಯಂತೆ, ಕೊಡವರ ಅಧ್ಯಾತ್ಮಿಕ ತಾಯ್ತ/ಸಂಸ್ಕಾರ ವಾದ ಬಂದೂಕನ್ನು ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಅಧ್ಯಾತ್ಮಿಕ ಆಚರಣೆಯ ಅಡಿಯಲ್ಲಿ ಗುರುತಿಸ ಬೇಕು ಎಂದು ಆಗ್ರಹಿಸಿದರು. ಬಹುಸಂಖ್ಯಾತ ಸಮುದಾಯದಿಂದ ಯಾವುದೇ ದಯೆಯ ಭಿಕ್ಷೆಯನ್ನು ಕೇಳುತ್ತಿಲ್ಲ. ಕೊಡವಲ್ಯಾಂಡ್ ಸ್ವಾಯತ್ತತೆಯು ದೇಶೀಯ ಕೊಡವರ ನ್ಯಾಯಸಮ್ಮತ ಹಕ್ಕಾಗಿದೆ ಎಂದರು.

ಕೊಡವರ ಭೂಮಿ, ನೀರು, ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಜೀವವೈವಿಧ್ಯತೆ ಯನ್ನು ರಕ್ಷಿಸಲು ಸಾಧ್ಯವಾಗುವುದು ಸ್ವದೇಶಿ/ದೇಶೀಯ ಕೊಡವರನ್ನು ಸಂವಿಧಾನದ ಅಡಿಯಲ್ಲಿ ವಿಶಿಷ್ಟ ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ನಂಬಿಕೆಯ ಸಮುದಾಯವೆಂದು ಗುರುತಿಸಿದರೆ ಮತ್ತು ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ-ಆಡಳಿತದ ಮಾತೃಭೂಮಿ ಭದ್ರತೆಯ ರೂಪದಲ್ಲಿ ಭದ್ರತೆಯನ್ನು ನೀಡಿದರೆ ಮಾತ್ರ ಎಂದು ಪ್ರತಿಪಾದಿಸಿದರು. ಇದನ್ನು ಸಾಧಿಸಲು, ಕೊಡವರ ಅಧ್ಯಾತ್ಮಿಕ ವಾಸಸ್ಥಾನಗಳಾದ ಮಂದ್, ವಿಶಿಷ್ಟ ಕೊಡವ ವಂಶಾವಳಿ ಮತ್ತು ಸಾಂಪ್ರದಾಯಿಕ ಹೃದಯಭಾಗವನ್ನು ಅನಾವರಣಗೊಳಿಸಬೇಕು ಮತ್ತು ಮುಂಬರುವ ೨೦೨೭ರ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ, ಅಪರೂಪದ ಜನಾಂಗೀಯ ಸಮುದಾಯ ವೆಂದು ದಾಖಲಿಸಬೇಕು ಮತ್ತು ಎಣಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸರಪಳಿ ಕಾರ್ಯಕ್ರಮದಲ್ಲಿ ಬಿದ್ದಂಡ ಉಷಾ ದೇವಮ್ಮ, ಬೊಳ್ಳಚೆಟ್ಟಿರ ಜಯಂತಿ, ಪಳಂಗೇಟಿರ ದೇಚಮ್ಮ, ಚೌರಿರ ಪ್ರಿಯಾ, ಕೊಚ್ಚೇರ ನಿಧಿ, ಚೊಟ್ಟೇರ ಪವಿತ್ರ, ಪಳಂಗೇಟಿರ ರೀಟಾ, ಕುಂಜಿಲAಡ ಗ್ರೇಸಿ, ಬೊಳ್ಳಚೆಟ್ಟಿರ ಸುಂದರಿ, ಪಳಂಗAಡ ರೇಖಾ, ಪುದಿಯೊಕ್ಕಡ ರಮ್ಯ, ಬೊಳ್ಳಚೆಟ್ಟಿರ ಯಮುನಾ, ಬೋಳ್ತಂಡ ರೇಖಾ, ಚಂಗAಡ ಶಿವಾಂಶಿ ಮುತ್ತಮ್ಮ, ನಂದೇಟಿರ ರವಿ ಸುಬ್ಬಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಬಡುವಂಡ ವಿಜಯ, ಚಂಗAಡ ಸೂರಜ್, ಪುದಿಯೊಕ್ಕಡ ಕಾಶಿ, ಬಿದ್ದಂಡ ಸಂದೀಪ್, ಪುದಿಯೊಕ್ಕಡ ಪೃಥ್ವಿ, ಮಂಡೇಪAಡ ರಮೇಶ್, ಪುದಿಯೊಕ್ಕಡ ವಿಪನ್, ಪಳಂಗAಡ ಈಶಾ, ಬೊಳ್ಳಚೆಟ್ಟಿರ ಕುಟ್ಟಯ್ಯ, ಕೋಟೆರ ಮುತ್ತಣ್ಣ, ಪಳಂಗAಡ ಅಪ್ಪಯ್ಯ, ಬೊಳ್ಳಚೆಟ್ಟಿರ ಅಯ್ಯಪ್ಪ, ಬೊಳ್ಳಚೆಟ್ಟಿರ ಪ್ರೇಮ್, ಚಂಗಣಮಕ್ಕಡ ವಿನು, ಅಚ್ಚಕಾಳೆರ ನವೀನ್ ಮೊಣ್ಣಪ್ಪ , ಸಾದೆರ ರಮೇಶ್, ಮುಂಡAಡ ತಿಮ್ಮಯ್ಯ, ಕಂಡ್ರತAಡ ನಂದ, ಪಳಂಗAಡ ಗಣೇಶ್, ಮುಂಡAಡ ಕಾರ್ಯಪ್ಪ, ಬಡುವಂಡ ಸುಬ್ರಮಣಿ, ಮಂಡೇಟಿರ ಗಣೇಶ್, ಚಂಗAಡ ಮಾದಯ್ಯ, ಅಮ್ಮಾಟಂಡ ದೇವಯ್ಯ, ಅಮ್ಮಾಟ್ಟಂಡ ಗೋಪಾಲ್, ಮಂಡೇಪAಡ ಮುತ್ತಣ್ಣ, ಅಚ್ಚಕಾಳೆರ ಅಯ್ಯಪ್ಪ, ಮುಂಡAಡ ಪವಿ ಸೋಮಣ್ಣ, ತಿರುಟೆರ ಕಾಶಿ, ಮುಂಡAಡ ವಿಜು, ಕಾಶಿ ನುಚ್ಚಿಮಣಿಯಂಡ, ಮಾದೇಯಂಡ ಹರೀಶ, ಪಂದAಡ ಕಿರಣ್, ಕೋಟೆರ ಮೇದಪ್ಪ, ಅಮ್ಮಾಟ್ಟಂಡ ಮೇದಪ್ಪ, ಪಳಂಗAಡ ತಮ್ಮಯ್ಯ, ಪಳಂಗAಡ ಭೀಮಯ್ಯ, ವಂಚೀರ ಮುತ್ತಪ್ಪ, ಮಾದೇಯಂಡ ಮುತ್ತಪ್ಪ, ಮುಕ್ಕಾಟಿರ ಕಾವೇರಪ್ಪ, ಕೋಟೆರ ಪೆಮ್ಮಯ್ಯ, ದೇವಂಡಿರ ಧನು, ಬಾರಿಯಂಡ ಸಂಜನ್, ಪೋತಂಡ ರಾಜ, ಕಂಬಿರAಡ ರಾಖಿ ಗಣಪತಿ, ಬಾರಿಯಂಡ ಸುಬ್ರಮಣಿ, ಪಳಂಗಿಯAಡ ಕಾವೇರಪ್ಪ, ಚಿಂಡುಳಿರ ಬೊಳ್ಳಿಯಪ್ಪ, ತಿರುಟೆರ ಮುತ್ತಪ್ಪ, ಪಳಂಗಿಯAಡ ಸುರೇಶ್, ಪಳಂಗAಡ ಹರೀಶ್, ಪಚ್ಚಾರಂಡ ಸುರೇಶ್, ಬಡುವಂಡ ಬೋಪಣ್ಣ, ಚೆಂಗAಡ ಚಾಮಿ ಪಳಂಗಪ್ಪ , ಬಡುವಂಡ ಕುಂಜಪ್ಪ, ಕಂಬಿರAಡ ಯೋಗಿಶ್, ಬೇರೇರ ರಮೇಶ್, ಪಳಂಗAಡ ಪ್ರಕಾಶ್, ಪೊಂಜAಡ ಕಬೀರ್, ತೇಲಪಂಡ ಗುಲ್ಶನ್, ಅರೆಯಡ ಗಿರೀಶ್, ಕಿರಿಯಮಡ ಶೆರಿನ್, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ ಹಾಜರಿದ್ದರು. ಚಂಗAಡ ಸೂರಜ್ ಅವರು ನೆರೆದಿದ್ದ ಸಭಿಕರನ್ನು ಸ್ವಾಗತಿಸಿದರು ಮತ್ತು ಪೆಮ್ಮುಡಿಯಂಡ ವೇಣು ಅಪ್ಪಣ್ಣ ಅವರು ವಂದನಾರ್ಪಣೆ ಮಾಡಿದರು. ಮುಂದಿನ ಕಾರ್ಯಕ್ರಮವು ತಾ.೨೬ ರಂದು ನಾಪೋಕ್ಲುವಿನಲ್ಲಿ ನಡೆಯಲಿದೆ.