ಮಡಿಕೇರಿ, ಅ. ೧೭ - ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾದಲ್ಲಿನ ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಟೀಮ್ ಅಗ್ನಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಟೀಮ್ ಕಲಾನಗರ್ ಕಲಾವೇದಿಕೆ ದ್ವಿತೀಯ ಸ್ಥಾನ ಪಡೆದರೆ, ಟೀಮ್ ರುದ್ರ , ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು. ಟೀಮ್ ವಾರಿಯರ್ಸ್ ಚತುರ್ಥ ಬಹುಮಾನವನ್ನು ಮತ್ತು ಟೀಮ್ ಕರವಲೆ ಭಗವತಿ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು.
ಈ ಬಾರಿಯೂ ಪ್ರಥಮ ಸ್ಥಾನದ ಮೂಲಕ ಟೀಮ್ ಅಗ್ನಿ ತಂಡವು ಸತತ ಮೂರು ವರ್ಷಗಳೂ ಪ್ರಥಮ ಸ್ಥಾನವನ್ನು ಮಕ್ಕಳ ದಸರಾ ಮಂಟಪ ಸ್ಪರ್ಧೆಯಲ್ಲಿ ಪಡೆದುಕೊಂಡು ಹ್ಯಾಟ್ರಿಕ್ ಸಾಧನೆ ತೋರಿದೆ.
ಮಕ್ಕಳ ಮಂಟಪದ ಬಹುಮಾನಗಳನ್ನು ಸುವರ್ಣ ಸಂಭ್ರಮ ವರ್ಷಾಚರಣೆಯ ಪ್ರಯುಕ್ತ ಮಡಿಕೇರಿಯ ಶ್ರೀ ಕೋಟೆ ಗಣಪತಿ ದೇವಾಲಯ ದಸರಾ ಸಮಿತಿಯು ನೀಡಿತ್ತು. ಸಮಿತಿ ಅಧ್ಯಕ್ಷ ಶರಣ್ ಪೂಣಚ್ಚ ಮತ್ತು ಪದಾಧಿಕಾರಿಗಳು ಬಹುಮಾನ ವಿತರಿಸಿದರು.
ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತ ರೋಟರಿ ಮಿಸ್ಟಿ ಹಿಲ್ಸ್ನ ೧೩ ನೇ ವರ್ಷದ ಮಕ್ಕಳ ದಸರಾದ ವಿವಿಧ ಸ್ಪರ್ಧಾ ವಿಭಾಗಗಳ ಸ್ಪರ್ಧೆಗಳ ಬಹುಮಾನ ವಿಜೇತರ ಮಾಹಿತಿ ಇಂತಿದೆ.
ಮಕ್ಕಳ ಸಂತೆ - ಲವಿನ್, ಶೀತಲ್, ಜಾಹ್ನವಿ ಪ್ರಥಮ, ಚೋಂದಮ್ಮ, ಬೊಳ್ಳಮ್ಮ ಎ.ಎ., ಲೀಷ್ಮಾ ದೇಚಮ್ಮ, ಬೊಳ್ಳಮ್ಮ ಹೆಚ್.ಎನ್. ದ್ವಿತೀಯ ಮತ್ತು ತಸ್ವಿನ್ ತಂಗಮ್ಮ, ಶೈನ ಪೂವಮ್ಮ ಮತ್ತು ಜಸ್ವಿನ್ ಪೊನ್ನಮ್ಮ ತೃತೀಯ, ಕವಿನ್, ಬಿಪಿನ್ ಚತುರ್ಥ ಮತ್ತು ಜಸ್ವಿನ್ ಎಂ.ಜೆ,, ಲಿಪಿಕಾ ಎಂ.ಎಲ್., ಲಹರಿ ಎಂ.ಜೆ, ಚಿರಾಜ್ ಎಂ.ಎ. ಸಮಾಧಾನಕರ ಬಹುಮಾನ ಪಡೆದರು.
ಮಕ್ಕಳ ಅಂಗಡಿ - ಅಪೇಕ್ಷ ರೈ ಪ್ಥಥಮ, ಶಾರ್ವಿ, ಶ್ಲೋಕ ದ್ವಿತೀಯ, ಭೂಮಿಕಾ ಜೆ.ಕೆ. ಅನಘ.- ತೃತೀಯ, ತುಶಿಕಾ ಮತ್ತು ಗವಿಕಾ ಚತುರ್ಥ ಮತ್ತು ತ್ರಿಷ್ಯಾ ಲೋಹಿತ್ ಮತ್ತು ಲೀಕ್ಷಿತಾ ವಿನು ಸಮಾಧಾನಕರ ಬಹುಮಾನ ಪಡೆದುಕೊಂಡರು.
ಕ್ಲೇ ಮಾಡೆಲಿಂಗ್ ಸ್ಪರ್ಧೆ - (೫ ರಿಂದ ೭ನೇ ತರಗತಿ ವಿಭಾಗಃ ಅಸದ್ ಅಹಮ್ಮದ್, ಪ್ರಥಮ, ಆರುಫ್ ವಿ ದ್ವಿತೀಯ, ಸಾಗರಿ ತೃತೀಯ, ಪೂನಮ್ ಚತುರ್ಥ ಮತ್ತು ಡಿಂಪ ಎಂ.ಡಿ. ಸಮಾಧಾನಕರ ಬಹುಮಾನ ಗಳಿಸಿದರು.
೮ ರಿಂದ ೧೦ ನೇ ತರಗತಿ ವಿಭಾಗ ಶ್ರೀಯಾ ಕಿರಣ್ ಪ್ರಥಮ, ಉದಿತ್ ರಾಜ್ ದ್ವಿತೀಯ, ಚೈತನ್ಯ ತೃತೀಯ , ಭಾನ್ವಿ ಚತುರ್ಥ ಬಹುಮಾನ ಗಳಿಸಿದರು.
ಛದ್ಮವೇಷ ಸ್ಪರ್ಧೆ - ( ಎಲ್ಕೆಜಿ, ಯುಕೆಜಿ ವಿಭಾಗ) ಪ್ರಥಮ - ಶ್ರೇಷ್ಟ್ ಚನಿಷ್ಕ್, . ದ್ವಿತೀಯ - ಶ್ರೇಯಾಸ್ವಿ, ತೃತೀಯ - ಧೃತಿ, , ಚತುರ್ಥ- ಹಿಬಾ ಫಾತಿಮಾ ಸಮಾಧಾನಕರ - ಪ್ರಧ್ಯುಮ್ನ .
ಒಂದರಿAದ ನಾಲ್ಕನೇ ತರಗತಿ ವಿಭಾಗ - ಪ್ರಥಮ - ಹಶ್ಮಿತಾ ಟಿ.ಎಂ., ದ್ವಿತೀಯ - ಸ್ಮೃತಿ ಎಸ್.ಬಾರದ್ವಜ್, ತೃತೀಯ ಜಂಟಿ ವಿಜೇತರು. - ಗೌರವ್ ಎಂ.ಎ ಹಾಗೂ ಸಮೃದ್ದಿ, ಚತುರ್ಥ - ಯದ್ವಿತಾ, ಸಮಾಧಾನಕರ - ಲಯ ಕಾವೇರಮ್ಮ.
೫ ರಿಂದ ೭ ನೇ ತರಗತಿ ವಿಭಾಗ - ಪ್ರಥಮ - ಹಿತೈಶಿ ಕುಶಾಲಪ್ಪ, ದ್ವಿತೀಯ - ವರ್ಷಿತಾ, , ತೃತೀಯ - ದಿವಿನ್, ಚತುರ್ಥ - ಮೋಹಿತ್, ಸಮಾಧಾನಕರ - ಲೋಚನ.
ತೀರ್ಪುಗಾರರಾಗಿ - ಮಲ್ಲಿಕಾ, ಶಿರನ್, ಸೌಮ್ಯ ನಿರಂಜನ್, ಬಾಳೆಯಡ ಸವಿತಾ ಪೂವಯ್ಯ, ಸ್ವರ್ಣ, ರಶ್ಮಿ ಬಿ.ಸಿ., ನೇತ್ರಾವತಿ ಬಿ.ಎಂ., ಬಿಂದು ಹರೀಶ್, ಮಮತಾಶಾಸ್ತಿçÃ, ಸುಧಾ, ಶರತ್ ಶೆಟ್ಟಿ, ಪಿ.ಜಿ. ಮಂಜುನಾಥ್, ಉ.ರಾ.ನಾಗೇಶ್, ರಜತ್ ಶೇಟ್, ಸತೀಶ್ ಧರ್ಮಪ್ಪ, ಹೆಚ್.ಪಿ. ರಘುಪತಿ , ಕಾರ್ಯನಿರ್ವಹಿಸಿದ್ದರು.
ಈ ಬಾರಿ ಮಕ್ಕಳ ದಸರಾದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳ ಅಂಗಡಿಗೆ ೧೨೪, ಮಕ್ಕಳ ಸಂತೆಗೆ ೭೬, ಛದ್ನವೇಷಕ್ಕೆ ೯೬ , ಕ್ಲೇಮಾಡೆಲಿಂಗ್ ಗೆ ೧೫ ಮತ್ತು ಮಕ್ಕಳ ಮಂಟಪಕ್ಕೆ ೧೨ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದರು.
ಮಕ್ಕಳ ಮಂಟಪದ ತೀರ್ಪುಗಾರಿಕೆ ಸುಮಾರು ಮೂರೂವರೆ ಗಂಟೆಗಳ ಕಾಲ ಜರುಗಿತು. ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಪಿ.ಆರ್.ರಾಜೇಶ್, ಕಾರ್ಯದರ್ಶಿ ಡಾ. ಜಿ.ಡಿ. ಚೇತನ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್, ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರು ಬಹುಮಾನಗಳನ್ನು ವಿತರಿಸಿದರು.