ಗೋಣಿಕೊಪ್ಪಲು, ಅ. ೧೭: ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕಾಪ್ಸ್ ವಿದ್ಯಾಸಂಸ್ಥೆಯ ಪಬ್ಲಿಕ್ ರಿಲೇಷನ್ಸ್ ಮ್ಯಾನೇಜರ್ ಅಣ್ಣಳಮಾಡ ಮಾನಸ ತಿಮ್ಮಯ್ಯ ಕ್ರೀಡಾಪಟುಗಳಿಗೆ ಕರೆ ನೀಡಿದರು. ೪೮ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪ ಶಿವಾಜಿ ಸೇನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಒಕ್ಕೂಟ, ತಾಲೂಕು ಒಕ್ಕೂಟ ಪೊನ್ನಂಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರೋ ಕಬಡ್ಡಿ ಮಾದರಿಯ ಗ್ರಾಮೀಣ ಮ್ಯಾಟ್ ಕಬಡ್ಡಿ ಕ್ರೀಡೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಿಂದ ಕ್ರೀಡಾಪಟುಗಳ ಆರೋಗ್ಯಮಟ್ಟ ಸುಧಾರಣೆ ಆಗಲಿದೆ ಎಂದರು. ಶಿವಾಜಿ ಯುವಸೇನೆಯ ಅಧ್ಯಕ್ಷ ಎಲ್.ಎನ್. ಅಣ್ಣಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಗ್ರಾಮೀಣ ಕಬಡ್ಡಿ ಕ್ರೀಡಾಕೂಟದ ಉದ್ಘಾಟನಾ ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಶಿವಾಜಿ ಯುವಸೇನೆ, ಸಮಿತಿಯ ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಯುವ ಉದ್ಯಮಿಗಳಾದ ಚಂದನ್ ಕಾಮತ್, ದಿಲನ್ ಚಂಗಪ್ಪ, ರೋಟರಿ ಕ್ಲಬ್ ಅಧ್ಯಕ್ಷರಾದ ಪ್ರಮೋದ್ ಕಾಮತ್ ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ (ಮಂಜು), ದಸರಾ ಸಮಿತಿಯ ಸಹ ಖಜಾಂಚಿ ಶೋಬಿತ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಶಿವಾಜಿ ಯುವಸೇನೆಯ ಸಂಘಟನಾ ಕಾರ್ಯದರ್ಶಿ ವಿನೋದ್ ಸ್ವಾಗತಿಸಿ, ಎ.ಜಿ. ಸುರೇಶ್ ವಂದಿಸಿದರು. ಈ ವೇಳೆ ಸಮಿತಿಯ ಪದಾಧಿಕಾರಿಗಳಾದ ಖಜಾಚಿ ಜಿ.ಪಿ. ಸ್ವಾಮಿ, ರಾಜೇಶ್ರೈ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬ್ಲಾö್ಯಕ್ ಪ್ಯಾಂಥರ್ ವೀರಾಜಪೇಟೆ, ಎಂಟಿಎಫ್ಸಿ ಗೋಣಿಕೊಪ್ಪ, ಜೈಭೀಮ್ ಸಿದ್ದಾಪುರ, ಸೂಪರ್ ಈಗಲ್ ಭಜರಂಗಿ, ಮೈಸೂರು ವಾರಿರ್ಸ್, ದಕ್ಷ ವಾರಿರ್ಸ್ ಹಾಗೂ ಬ್ಲಾö್ಯಕ್ ಪ್ಯಾಂಥರ್ ಗೋಣಿಕೊಪ್ಪ ತಂಡಗಳು ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದೆ.