ವೀರಾಜಪೇಟೆ, ಅ. ೧೭: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಆಶ್ರಯದಲ್ಲಿ ೧೯ನೇ ವರ್ಷದ ಅದ್ಧೂರಿ ಆಯುಧ ಪೂಜಾ ಸಮಾರಂಭ, ಸಾಂಸ್ಕöÈತಿಕ ಕಾರ್ಯಕ್ರಮಗಳು, ಸಾಹಸ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭ ತಾ. ೨೦ ಮಂಗಳವಾರದAದು ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ವಿಜೃಂಭಣೆಯಿAದ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಜೂಡಿವಾಸ್ ತಿಳಿಸಿದರು.

ಈ ಕುರಿತು ಸಂಘದ ಕಚೇರಿಯಲ್ಲಿ ಮಾಹಿತಿ ನೀಡಿದ ಜೂಡಿವಾಸ್ ಅವರು, ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಲಿರುವ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿ, ಸಂಘವು ಪ್ರತಿವರ್ಷದಂತೆ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿ, ತಾ. ೨೦ರಂದು ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಘದ ಕಛೇರಿಯಲ್ಲಿ ಚಂಡೆಮೇಳದೊAದಿಗೆ ವಿಧ್ಯುಕ್ತವಾಗಿ ಆಯುಧ ಪೂಜೆ ನೆರವೇರಲಿದೆ. ಬಳಿಕ ಬಸ್ ನಿಲ್ದಾಣದಲ್ಲಿನ ವೇದಿಕೆಯಲ್ಲಿ ಸ್ಥಳೀಯ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ.

ಉದ್ಘಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿರಾಜಪೇಟೆ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಕುಂಬೆಯAಡ ಸುರೇಶ್ ದೇವಯ್ಯ ವಹಿಸಲಿದ್ದಾರೆ. ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜನಾರ್ದನ ಪ್ರಭು, ಶಾಂತಿನಿಕೇತನ, ಮಡಿಕೇರಿಯ ಅಧ್ಯಕ್ಷ ಚೇತನ್, ಜೈ ಜವಾನ್ ಡಿಫೆನ್ಸ್ ಅಕಾಡೆಮಿ (ಪೊನ್ನಂಪೇಟೆ) ನಿರ್ದೇಶಕರಾದ ಕುಪ್ಪಂಡ ಲವ ಮಾದಪ್ಪ, ಕೂರ್ಗ್ ಅವೆನ್ಯೂ (ವೀರಾಜಪೇಟೆ) ಮ್ಯಾನೇಜಿಂಗ್ ಡೈರೆಕ್ಟರ್ ಆದ ಮೊಹಮ್ಮದ್ ಹನೀಫ್ ಎಂ.ಎಸ್. ಮಡಿಕೇರಿಯ ಉದ್ಯಮಿ ಕೆ.ವಿ. ಮೋಹನ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಜಾನ್ಸನ್ ಪಿಂಟೊ, ಪ್ರಗತಿ ಶಾಲೆ ವ್ಯವಸ್ಥಾಪಕರು ಹಾಗೂ ಕಾಂಗ್ರೆಸ್ ಮುಖಂಡರಾದ ಮಾದಂಡ ತಿಮ್ಮಯ್ಯ, ಐಮಂಗಲದ ಉದ್ಯಮಿ ಹಾಗೂ ಕಾಫಿ ಬೆಳೆಗಾರರಾದ ದೇಯಡ ಜೆ. ಅಯ್ಯಪ್ಪ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಾಳಮಂಡ ನೈನಾ ಜಗತ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ ೧೨.೩೦ಗಂಟೆಗೆ ಸಂಘದ ವತಿಯಿಂದ ಆಗಮಿಸುವ ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಮತ್ತು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷರಾದ ಜೂಡಿವಾಸ್ ಅವರು ಮಾತನಾಡಿ, ಮಧ್ಯಾಹ್ನ ೩ ಗಂಟೆಗೆ ಪ್ರಖ್ಯಾತ ಬೈಕ್ ಸವಾರರಿಂದ ರೋಮಾಂಚಕ ಸಾಹಸ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ತದನಂತರ ಸಾಂಸ್ಕöÈತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಥಳೀಯ ಕಲಾ ಪ್ರತಿಭೆಗಳಿಗೆ ಬಹುಮಾನಗಳನ್ನು ವಿತರಿಸಲಾಗುವುದು.

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ (ವೀರಾಜಪೇಟೆ) ಉಪಾಧ್ಯಕ್ಷರಾದ ಅಲ್ಲಂಡ ಕಸ್ತೂರಿ ಚಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೂರ್ಗ್ ಹಾಕಿ ಪ್ರಧಾನ ಕಾರ್ಯದರ್ಶಿ ಅಮ್ಮಂಡೀರ ಚೇತನ್, ಕೆ.ಪಿ.ಟಿ ಟ್ರೇಡರ್ಸ್ (ವೀರಾಜಪೇಟೆ) ವ್ಯವಸ್ಥಾಪಕ ಇಬ್ರಾಹಿಂ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ (ಪೊನ್ನಂಪೇಟೆ ತಾಲೂಕು) - ತಾಲೂಕು ಅಧ್ಯಕ್ಷ ಸುಭಾಶ್ ಮ್ಯಾಥ್ಯೂ, ಎನ್.ಎಸ್. ಕ್ಯಾಟರಿಂಗ್ ಮಾಲೀಕ ಎನ್.ಎಸ್. ರವಿ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಕೋಶಾಧಿಕಾರಿ ವಿನಂತ್ ಬಿ.ಎ. ಭಾಗವಹಿಸಲಿದ್ದಾರೆ.

ಸಂಜೆ ೬ ಗಂಟೆಗೆ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಸಂಘದ ವತಿಯಿಂದ ನಿವೃತ್ತ ಹಿರಿಯ ಬಸ್ ಕಾರ್ಮಿಕರಿಗೆ ಹಾಗೂ ಸಮಾಜ ಸೇವಕರಿಗೆ ವಿಶೇಷ ಸನ್ಮಾನ ಹಾಗೂ ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಬಳಿಕ ಕ್ಯಾಲಿಕಟ್‌ನ ಪ್ರಸಿದ್ಧ ‘ಸಾರಂಗ್ ಮ್ಯೂಸಿಕಲ್’ ತಂಡದವರಿAದ ಮನೋರಂಜನಾ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಜೋಡಿವಾಸ್, ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾ ವಿಧಾನ ಪರಿಷತ್ ಸದಸ್ಯ ರಘು ಕೊಟ್ಯಾನ್, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್ (ಕೊಡಗು ಜಿಲ್ಲೆ)ಯ ಮೈನಾ ಲೋಕೇಶ್, ತ್ರಿವೇಣಿ ಮೋಟಾರ್ಸ್ ಮಾಲೀಕ ಗುಡ್ಡಮಾಡ ಅಪ್ಪಿ ಸುಬ್ರಮಣಿ, ಕಾಫಿ ಬೆಳೆಗಾರರ ಮಾಳೇಟಿರ ಚುಕ್ಕು ದೇವಯ್ಯ, ವಿನಾಯಕ ಟ್ರಾವೆಲ್ಸ್ ಮಾಲೀಕ ಹೇಮಂತ್ ಬಿ.ಎ., ಮಂಜುನಾಥ ಮೋಟಾರ್ಸ್ ಮಾಲೀಕ ಕೈಬುಲಿರ ಮನು ನಂಜಪ್ಪ, ಉದ್ಯಮಿ ಐ. ಜೀವನ್, ಬಿಲ್ಲವ ಸಮಾಜ ಅಧ್ಯಕ್ಷ ಬಿ.ಎಂ. ಗಣೇಶ್ ಉಪಸ್ಥಿತರಿರುತ್ತಾರೆ ಎಂದರು.

ನಾಡಿನ ಸಮಸ್ತ ಸಾರ್ವಜನಿಕ ಬಂಧುಗಳು, ಸಂಗೀತ ಕಲಾರಸಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸದಸ್ಯರು ಈ ಸಂದರ್ಭ ಕೋರಿದರು. ಈ ಸಂದರ್ಭ ಸಂಘದ ನಿರ್ದೇಶಕರಾದ ಕುಪ್ಪಂಡ ಪ್ರಸಾದ್ ದೇವಯ್ಯ, ಸದಸ್ಯರಾದ ಅಶೋಕ್ ಮತ್ತು ಲೋಕೇಶ್ ಪೂಜಾರಿ ಸೇರಿದಂತೆ ಇತರರು ಇದ್ದರು.