ಶ್ರೀಮಂಗಲ, ಅ.೧೭: ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಈ ನಾಡಿನ, ಈ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಉಳಿಸಿ ಬೆಳೆಸುವ ಉದ್ದೇಶದಿಂದ ೨೦೧೭ನೆ ಇಸವಿಯಲ್ಲಿ ಆರಂಭಿಸಿದ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮ ಯಶಸ್ವಿ ಒಂಭತ್ತು ವರ್ಷಗಳನ್ನು ಪೂರೈಸಿದ್ದು, ಪ್ರಸಕ್ತ ವರ್ಷ ಹತ್ತನೇ ವರ್ಷಾಚರಣೆಯನ್ನು ವಿಜ್ರಂಭಣೆಯಿAದ ಆಚರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪೂರ್ವಭಾವಿ ಸಭೆ ನಡೆಯಿತು.

ತಾ. ೧೮ರಂದು ಪೂರ್ವಾಹ್ನ ೧೦ ಗಂಟೆಗೆ ಕೊಡವ ಸಮಾಜದ ವೇದಿಕೆಯಲ್ಲಿ ಕಣಿಪೂಜೆ ಹಾಗೂ ಕಾವೇರಿ ತೀರ್ಥಪೂಜೆ ಮಾಡಿ ಭಕ್ತಾದಿಗಳಿಗೆ ಪವಿತ್ರ ಕಾವೇರಿ ತೀರ್ಥ ವಿತರಿಸಲಾಗುವುದು. ನಂತರ ಸಂಜೆ ೬ ಗಂಟೆಗೆ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ, ಕೊಡಗು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಅಜ್ಜಮಾಡ ಮನು ಮುತ್ತಪ್ಪ ಭಾಗವಹಿಸಲಿದ್ದಾರೆ. ಈ ಸಂದರ್ಭ ಸಂಭ್ರಮ ಪೊಮ್ಮಕ್ಕಡ ಕೂಟ ಹಾಗೂ ಟಿ.ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರಿಂದ “ಸ್ವಾತಂತ್ರ‍್ಯ ಮಾಪಡೆಲ್ ಕೊಡವ ಮೂಪಂಗ” ಶೀರ್ಷಿಕೆಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ತಾ. ೧೯ ರಂದು ಸಂಜೆ ೬ ಗಂಟೆಗೆ ಆಂಗೋಡ್ ಕೇರಿ ಪೊಮ್ಮಕ್ಕಡ ಕೂಟದ ಕಲಾವಿದರಿಂದ “ಆರೋಗ್ಯಕೊತ್ತ ತೀನಿ - ಬದ್‌ಕ್‌ಲಿಕ್ಕು ನೆಮ್ಮದಿ” ಎಂಬ ಶೀರ್ಷಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ತಾ. ೨೦ ರಂದು ಸಂಜೆ ೬ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದ ಕಲಾವಿದರಿಂದ “ಆರೋಡ ಮಣ್ಣ್ಲ್ ಗುರುಕಾರೋಣಂಡ ಬಲ” ಎಂಬ ಶೀರ್ಷಿಕೆಯ ನೃತ್ಯರೂಪಕ ಪ್ರದರ್ಶನ ನಡೆಯಲಿದೆ.

ತಾ. ೨೧ ರಂದು ಸಂಜೆ ೬ಗಂಟೆಗೆ ಬೆಕ್ಕೆಸೊಡ್ಲೂರ್ ಮಂದತವ್ವ ಸಾಂಸ್ಕೃತಿಕ ತಂಡದ ಕಲಾವಿದರಿಂದ “ಪುರಾಣತ್ರ ನಳತ್ ಕೊಡವಡ ಬಾಳ್” ಎಂಬ ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ತಾ. ೨೨ರಂದು ಸಂಜೆ ೫ ಗಂಟೆಗೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಪ್ರಥಮ, ದ್ವಿತೀಯ, ತ್ರತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಸಂಜೆ ೫.೩೦ ಗಂಟೆಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘ಪುಸ್ತಕ ಪತ್ತಾಯ ಹಾಗೂ ದುಡಿ ವಿತರಣೆ’ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ “ಕೊಡವ ಜಾನಪದ ಚಂಗ್ರಾAದಿರ ಬೋಜ” ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ತಾ. ೨೩ ರಂದು ಸಂಜೆ ೬ ಗಂಟೆಗೆ ಶ್ರೀಮಂಗಲ ಜೆ.ಸಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ “ಕೊಡವಡ ನಮ್ಮೆ ನಾಳ್ - ಬೀರ್ಯ ಬರ್ಕತ್” ಎಂಬ ಶೀರ್ಷಿಕೆಯ ವಿಶೇಷ ಪ್ರದರ್ಶನ ನಡೆಯಲಿದೆ.

ತಾ. ೨೪ ರಂದು ಸಂಜೆ ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರಿಂದ “ಕೊಡವಾಮೆಲ್ ಪಳೆಯಾಮೆರ ನಡ್ಪು” ಎಂಬ ಶೀರ್ಷಿಕೆಯ ಕೊಡವ ಮೂಲ ಸಂಸ್ಕೃತಿಯ ವೈಭವ ಸಾರುವ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. ತಾ. ೨೫ ರಂದು ಸಂಜೆ ೬ ಗಂಟೆಗೆ ಬಾಡಗರಕೇರಿ ಮಹಿಳಾ ಸಮಾಜದ ಸದಸ್ಯೆಯರಿಂದ “ಪ್ರಕೃತಿ-ಪರಿಸರಕೊತ್ತ ಎಂಗಡ ಬದ್‌ಕ್” ಎಂಬ ವಿಷಯಾಧಾರಿತ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.

ತಾ. ೨೬ ರಂದು ಸಂಜೆ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ “ಕೊಡವ ಪೊರಪಾಡ್- ಮಿನ್ನುವ ಪದೀಚ” ಎಂಬ ಕೊಡವ ಸಂಸ್ಕೃತಿಯ ಮೆರುಗಿನ ಉಡುಗೆ ಆಭರಣಗಳನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.

ತಾ. ೨೭ರಂದು ಸಂಜೆ ೬ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಲೋಕಸಭಾ ಸದಸ್ಯ ಯದುವೀರ್ ಒಡೆಯರ್, ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ದಾನಿಗಳಾದ ಕೈಬಿಲೀರ ಪ್ರಭು ಉತ್ತಯ್ಯರವರು ಭಾಗವಹಿಸಲಿದ್ದಾರೆ. ಈ ಸಂದರ್ಭ ಖ್ಯಾತ ಗಾಯಕರಾದ ಚೆಕ್ಕೇರ ಪಂಚಮ್ ತ್ಯಾಗರಾಜ್, ಬಟ್ಟಿಯಂಡ ಲಿಖಿತ ಪಳಂಗಪ್ಪ, ಮಾಳೇಟಿರ ಅಜಿತ್ ಪೂವಣ್ಣ ಸೇರಿದಂತೆ ವಿವಿಧ ಗಾಯಕರ ಕೊಡವ ಆರ್ಕೆಸ್ಟಾç ಹಾಗೂ ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕೂಟದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತೀ ದಿನ ಜನ ಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.