ಭಾಗಮಂಡಲ ಅ. ೧೫: ಭಾಗಮಂಡಲ - ತಲಕಾವೇರಿ ವ್ಯವಸ್ಥಾಪನಾ ಸಮಿತಿಯನ್ನು ಇತ್ತೀಚೆಗೆ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ರಚಿಸಿತ್ತು. ಇಂದು ಇಲ್ಲಿ ಸಮಿತಿ ಸಭೆ ನಡೆದು ಮಾಯಮುಡಿಯ ಬಾನಂಡ ಪ್ರಥ್ಯು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆೆ. ಉಳಿದಂತೆ ಸದಸ್ಯರಾಗಿ ಗೋಣಿಕೊಪ್ಪದ ಚೋಡುಮಾಡ ಎ. ರಾಜ ಅಯ್ಯಣ್ಣ, ಭಾಗಮಂಡಲದ ಕೆದಂಬಾಡಿ ಕಾಂಚನ, ತಣ್ಣಿಮಾನಿಯ ದೇವಂಗೋಡಿ ಎನ್. ಹರ್ಷ, ಹೆಬ್ಬೆಟ್ಟಗೇರಿಯ ಕೊಕ್ಕಲೆರ ಎ. ತಿಮ್ಮಯ್ಯ, ಕುಂದಚೇರಿಯ ಕೆದಂಬಾಡಿ ಜೆ. ರಘುನಾಥ್ ಹಾಗೂ ತಣ್ಣಿಮಾನಿಯ ಎಂ.ಸಿ. ಲಕ್ಷö್ಮಣ ಸದಸ್ಯರಾಗಿದ್ದು ಸಭೆಯಲ್ಲಿ ಹಾಜರಿದ್ದರು. ಅರ್ಚಕರ ಪರವಾಗಿ ಸುಧೀರ್ ಆಚಾರ್ ಉಪಸ್ಥಿತರಿದ್ದರು. ಅಲ್ಲದೆ, ದೇವಾಲಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ್ ಮತ್ತು ಭಾಗಮಂಡಲ ದೇವಾಲಯದ ಪಾರುಪತ್ತೇಗಾರರಾದ ಕೆ.ಪಿ. ಪೊನ್ನಣ್ಣ ಹಾಜರಿದ್ದರು. ಬಳಿಕ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಜಾತ್ರೆ ಸಂದರ್ಭ ಪಿಂಡ ಪ್ರದಾನಕ್ಕೆ ತೀವ್ರ ಒತ್ತಡವಿರುವುದರಿಂದ ಸ್ಥಳೀಯರಿಗಾಗಿ ಫಲಕ ಅಳವಡಿಸಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಅಯ್ಯಣ್ಣ ಸಲಹೆಯಿತ್ತರು.

ನಂತರ ಪತ್ರಿಕೆಯೊಂದಿಗೆ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಹಿರಿಯರ ಮಾರ್ಗದರ್ಶನದಿಂದ ಹಾಗೂ ಎಲ್ಲರ ಸಹಕಾರದಿಂದ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದು ನಮ್ಮ ಪವಿತ್ರ ಧಾರ್ಮಿಕ ಕ್ಷೇತ್ರ. ಇದಕ್ಕೆ ಯಾವುದೇ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಲಾಗುವುದು.

ಇಂದು ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆ ನಡೆದಿದೆ. ತಲಕಾವೇರಿ ಜಾತ್ರೆ ಸುಸೂತ್ರವಾಗಿ ನೆರವೇರುವಂತೆ ಪ್ರಾರ್ಥಿಸಿದ್ದು ಜಾತ್ರೆಯ ಬಳಿಕ ದೇವಾಲಯದ ಅವಶ್ಯಕತೆಗಳನ್ನು ಹಂತಹAತವಾಗಿ ಪೂರೈಸಲಾಗುವುದು. ಸದಸ್ಯರಾಗಿ ಅರ್ಚಕರೊಬ್ಬರ ಆಯ್ಕೆಯನ್ನು ಶುಕ್ರವಾರ ಸಂಜೆಯೊಳಗೆ ಮಾಡಲಾಗುವುದು ಹಾಗೂ ಇನ್ನೋರ್ವ ಸದಸ್ಯರನ್ನೂ ಸೇರ್ಪಡೆಗೊಳಿಸಲಾಗುವುದು ಎಂದರು.

೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)

ನಂದಾದೀಪ - ಅಕ್ಷಯಪಾತ್ರೆ

ಇಂದು ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ತಲಕಾವೇರಿ ಜಾತ್ರೆಗೆ ಸಂಬAಧಿಸಿದAತೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿ, ಇಲ್ಲಿನ ಭಗಂಡೇಶ್ವರ ದೇವಾಲಯದಲ್ಲಿ ಗುರುವಾರ ನಂದಾದೀಪವನ್ನು ಉರಿಸಲಾಯಿತು. ಸೆಪ್ಟೆಂಬರ್ ೨೭ ರಿಂದ ಆರಂಭಗೊAಡ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಜ್ಞಾ ಮುಹೂರ್ತ, ಪತ್ತಾಯಕ್ಕೆ ಅಕ್ಕಿ ಹಾಕುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದ್ದು ಇಂದು ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಕಾರ್ಯಕ್ರಮ ಜರುಗಿತು. ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿದ ಬಳಿಕ ಭಗಂಡೇಶ್ವರ ಕ್ಷೇತ್ರದ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ಆಡಳಿತಾಧಿಕಾರಿ ಚಂದ್ರಶೇಖರ್ ನಂದಾದೀಪವನ್ನು ಉರಿಸಿದರು. ಬೆಳಿಗ್ಗೆ ೧೨.೩೫ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅಕ್ಕಿಯನ್ನು ಸುರಿದು ಚಾಲನೆ ನೀಡಿದರು. ಇಂದಿನಿAದ ಒಂದು ತಿಂಗಳ ಕಾಲ ನವೆಂಬರ್ ೧೭ರ ಕಿರು ಸಂಕ್ರಮಣದವರೆಗೆ ನಂದಾದೀಪ ತುಪ್ಪದಿಂದ ಉರಿಯಲಿದೆ. ತುಲಾ ಮಾಸದಲ್ಲಿ ಜಾತ್ರೆಗೆ ಯಾವುದೇ ವಿಘ್ನ ಬಾರದಿರಲಿ ಎಂಬ ನಂಬಿಕೆಯಿAದ ನಂದಾ ದೀಪವನ್ನು ಉರಿಸಲಾಗುತ್ತಿದೆ. ಬಳಿಕ ಮಹಿಳೆಯರು ಭಕ್ತರು ಪಡಿಯಕ್ಕಿಯನ್ನು ಮನೆಗಳಿಗೆ ಕೊಂಡೊಯ್ದರು.

ದೇವಾಲಯದಲ್ಲಿ ನಂದಾದೀಪವು ನಿರಂತರವಾಗಿ ಒಂದು ತಿಂಗಳ ಕಾಲ ಉರಿಯಲಿದೆ. ಭಾಗಮಂಡಲ - ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದ್ದು, ಯಾವುದೇ ವಿಘ್ನಗಳು ಬಾರದಂತೆ ಪ್ರಾರ್ಥಿಸಿ, ನಂದಾದೀಪವನ್ನು ಉರಿಸಲಾಯಿತು. ಬಳಿಕ ದೇವಾಲಯದಲ್ಲಿ ಅಕ್ಷಯ ಪಾತ್ರೆಯನ್ನು ಇರಿಸಿ ಅಕ್ಷಯ ಪಾತ್ರೆಗೆ ಅಕ್ಕಿಯನ್ನು ಭಕ್ತರು ಸುರಿದರು. ಪಡಿಯಕ್ಕಿ ರೂಪದಲ್ಲಿ ಒಂದು ತಿಂಗಳ ಕಾಲ ಭಕ್ತರಿಗೆ ಇದನ್ನು ವಿತರಿಸಲಾಗುತ್ತದೆ. ಅಕ್ಷಯಪಾತ್ರೆಯಿಂದ ಕೊಂಡೊಯ್ದ ಅಕ್ಕಿಯಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು. ಸಂಜೆ ೬.೦೩ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಯನ್ನು ಇರಿಸಲಾಯಿತು. ಸಾಂಪ್ರದಾಯಿಕ ಆಚರಣೆಯಲ್ಲಿ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕುಶಾಲನಗರ ಗೌಡ ಒಕ್ಕೂಟದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಪ್ರಮುಖರಾದ ಪಟ್ಟಮಾಡ ಪೊನ್ನಪ್ಪ, ರವಿ ಹೆಬ್ಬಾರ್, ಕುದುಪಜೆ ಪ್ರಕಾಶ್, ಮಣವಟ್ಟಿರ ಮತ್ತು ಪಟ್ಟಮಾಡ ಕುಟುಂಬಸ್ಥರು, ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು.

(ವರದಿ: ಸುನಿಲ್ ಕುಯ್ಯಮುಡಿ)