ಮಡಿಕೇರಿ, ಅ. ೧೫: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಸಾಯಿ ಕ್ರೀಡಾ ತರಬೇತಿ ಕೇಂದ್ರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಅಕ್ಟೋಬರ್ ೩೦ ರಿಂದ ನವೆಂಬರ್ ೧ ರ ತನಕ ಎರಡನೇಯ ವರ್ಷದ ಫ್ಯಾಪ್ ಕಪ್ ಹಾಕಿ ಪಂದ್ಯಾವಳಿ ಆಯೋಜನೆಗೊಂಡಿದೆ.
ಕೂರ್ಗ್ ಹಾಕ್ಸ್ ಹಾಕಿ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್(ಯು.ಟಿ.ಎಸ್.ಸಿ)ನ ಸಹಭಾಗಿತ್ವದಲ್ಲಿ ಹಾಕಿ ಕೂರ್ಗ್ನ ಅಧೀನದಲ್ಲಿ ಈ ಪಂದ್ಯಾವಳಿ ಜರುಗಲಿದೆ. ೪೦+ ವರ್ಷ ಮೇಲ್ಪಟ್ಟ ಪುರುಷರ ತಂಡ ೩೫+ ವರ್ಷ ಮೇಲ್ಪಟ್ಟ ಮಹಿಳೆಯರ ತಂಡ ಒಳಗೊಂಡ ಮಾಸ್ಟರ್ಸ್ ಹಾಕಿ ತಂಡಗಳು ಹಾಗೂ ೧೬ ವರ್ಷ ವಯೋಮಿತಿಯ ಬಾಲಕ - ಬಾಲಕಿಯರ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಜಿಲ್ಲೆಯಲ್ಲಿ ವಿವಿಧ ಹಾಕಿ ಪಂದ್ಯಾವಳಿಗಳು ಅಲ್ಲಲ್ಲಿ ನಡೆಯುತ್ತವೆ. ಆದರೆ ಈ ಪಂದ್ಯಾವಳಿಯ ವಿಶೇಷತೆ ಎಂದರೆ ಹಿರಿಯರು, ಕಿರಿಯರಿಗೆ ಒಂದೇ ಮೈದಾನ ಒಂದೇ ಸಮಯದಲ್ಲಿ ಪ್ರತ್ಯೇಕ ಪಂದ್ಯಾವಳಿಯ ಮೂಲಕ ಹಿರಿಯರಲ್ಲಿ ಹಾಕಿ ಕ್ರೀಡೆಯನ್ನು ಜೀವಂತವಾಗಿಡುವದು ಹಾಗೂ ಕಿರಿಯರಿಗೆ ಉತ್ತೇಜನ ನೀಡುವ ಚಿಂತನೆಯೊAದಿಗೆ ನಡೆಸಲ್ಪಡುತ್ತದೆ. ಕಳೆದ ವರ್ಷ ಈ ಪಂದ್ಯಾವಳಿ ಪೊನ್ನಂಪೇಟೆಯಲ್ಲಿ ಜರುಗಿದ್ದು, ಇದೀಗ ಎರಡನೇ ವರ್ಷದ ಪಂದ್ಯಾಟ ಮಡಿಕೇರಿಯಲ್ಲಿ ನಿಗದಿಯಾಗಿದೆ. ಮೂಲತಃ ಹಾಲುಗುಂದದವರಾದ ಮೆಕೇರಿರ ಬೆಲ್ಲು ಕುಟ್ಟಪ್ಪ ಅವರು ಹಾಕಿಯ ಭಾರೀ ಅಭಿಮಾನಿಯಾಗಿದ್ದು ಅವರ ಉತ್ಸುಕತೆ, ಆಸಕ್ತಿಯ ಫಲವಾಗಿ ಈ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಇವರು ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮಸ್ಕತ್ನಲ್ಲೂ ವಿವಿಧ ಮಾದರಿಯ ಹಾಕಿ ಪಂದ್ಯಾವಳಿಯನ್ನು ಈ ಹಿಂದಿನಿAದಲೂ ನಡೆಸಿಕೊಂಡು ಬರುತ್ತಿದ್ದು, ಹಾಕಿ ಕ್ರೀಡೆಯ ಬೆಳವಣಿಗೆಗೆ ಶ್ರಮ ವಹಿಸುತ್ತಾ ಬರುತ್ತಿದ್ದಾರೆ. ಕೂರ್ಗ್ ಹಾಕ್ಸ್ ತಂಡದ ಉಸ್ತುವಾರಿಯೂ ಇವರಾಗಿದ್ದಾರೆ.
ಈ ಬಾರಿಯ ಪಂದ್ಯಾವಳಿ
ಅಕ್ಟೋಬರ್ ೩೦ ರಿಂದ ೩ ದಿನಗಳ ಕಾಲ ಮಾಸ್ಟರ್ಸ್ ಮೆನ್ ಆ್ಯಂಡ್ ವಿಮೆನ್ ಮತ್ತು ೧೬ರ ವಯೋಮಿತಿಯ ಬಾಲಕ - ಬಾಲಕಿಯರ ತಂಡಗಳು ಮಡಿಕೇರಿಯಲ್ಲಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.
ಫ್ಯಾಪ್ ಹಾಕಿ ಫ್ರೆಂಡ್ಶಿಪ್ ಕಪ್ ಹೆಸರಿನ ಪಂದ್ಯಾವಳಿ ಇದಾಗಿದೆ. ಮಾಸ್ಟರ್ಸ್ ವಿಭಾಗದಲ್ಲಿ ಪುರುಷರ ೪೦+ ತಂಡದ ವಿಜೇತರಿಗೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೫ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಿದೆ.
ಮಹಿಳೆಯರ ವಿಭಾಗದಲ್ಲಿ ವಿಜೇತರಿಗೆ ರೂ. ೧೦ ಸಾವಿರ ನಗದು, ಟ್ರೋಫಿ ಹಾಗೂ ರನ್ನರ್ಸ್ ತಂಡಕ್ಕೆ ರೂ. ೫ ಸಾವಿರ ನಗದು, ಟ್ರೋಫಿ ಬಹುಮಾನವಿದೆ.
೧೬ ವರ್ಷದ ಬಾಲಕರ ವಿಭಾಗದಲ್ಲಿ ವಿಜೇತರಿಗೆ ರೂ. ೨೫ ಸಾವಿರ ನಗದು, ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೧೫ ಸಾವಿರ ನಗದು, ಟ್ರೋಫಿ ಹಾಗೂ ಬಾಲಕಿಯರ ವಿಭಾಗದ ವಿಜೇತರಿಗೆ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಿದೆ.
ತಂಡಗಳು
ಪುರುಷರ ಮಾಸ್ಟರ್ಸ್ ವಿಭಾಗದಲ್ಲಿ ಕೇರಳ ಹಾಕಿ ಮಾಸ್ಟರ್ಸ್, ಕೊಡವ ಹಾಕಿ ಅಕಾಡೆಮಿ, ಟೈರ್ಸ್ ಬಾಳೆಲೆ, ಯಂಗ್ ಮಾಸ್ಟರ್ಸ್ ಬೆಂಗಳೂರು, ಕೂರ್ಗ್ ಡೈನಾಮಿಕ್ಸ್, ಭಗವತಿ ಇಲವೆನ್ ತಂಡ ಭಾಗವಹಿಸಲಿವೆ.
೧೬ರ ವಯೋಮಿತಿ ಬಾಲಕಿಯರು
ಈ ವಿಭಾಗದಲ್ಲಿ ಸ್ಪೋರ್ಟ್ಸ್ ಸ್ಕೂಲ್ ಪೊನ್ನಂಪೇಟೆ, ಸ್ಪೋರ್ಟ್ಸ್ ಸ್ಕೂಲ್ ಕೂಡಿಗೆ, ಸಾಯಿ ಮಡಿಕೇರಿ, ಸ್ಪೋರ್ಟ್ಸ್ ಸ್ಕೂಲ್ ಹಾಸನ್, ಕೊಡಗು ವಿದ್ಯಾಲಯ ಮಡಿಕೇರಿ ತಂಡಗಳು ಭಾಗವಹಿಸಲಿವೆ.
ಬಾಲಕರ ವಿಭಾಗ
ಡಾಲ್ಪಿನ್ಸ್ ಯಂಗ್ ಸ್ಟರ್ಸ್ ಸೋಮವಾರಪೇಟೆ, ಅಪ್ಪಚ್ಚಕವಿ ವಿದ್ಯಾಲಯ ಪೊನ್ನಂಪೇಟೆ, ಫೀ.ಮಾ. ಕಾರ್ಯಪ್ಪ ಶಾಲೆ ಅಕಾಡೆಮಿ ವೀರಾಜಪೇಟೆ, ರಾಮಟ್ರಸ್ಟ್ ನಾಪೋಕ್ಲು, ಸ್ಪೋಟ್ಸ್ ಸ್ಕೂಲ್ ಕೂಡಿಗೆ, ಸ್ಪೋರ್ಟ್ಸ್ ಸ್ಕೂಲ್ ಹಾಸನ, ರಿಪಬ್ಲಿಕನ್ಸ್ ಸ್ಪೋಟ್ಸ್ ಕ್ಲಬ್ ಮುಂಬೈ, ಮೂರ್ನಾಡು ರೂರಲ್ ಫ್ರೆಂಡ್ಸ್, ಯು.ಟಿ.ಎಸ್.ಸಿ ಪತ್ರಿಯಾಡ್ ಕೇರಳ, ಕೊಡಗು ವಿದ್ಯಾಲಯ ಮಡಿಕೇರಿ, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ (ಬಿ), ಕೊಡವ ಸಮಾಜ ವೀರಾಜಪೇಟೆ, ಲಯನ್ಸ್ ಸ್ಕೂಲ್ ಗೋಣಿಕೊಪ್ಪ.
ಮಹಿಳೆಯರ ವಿಭಾಗದಲ್ಲಿ ಮಾಸ್ಟರ್ಸ್ ವಿಮೆನ್ಸ್ ಟೀಮ್, ಕೇರಳ ಸ್ಪೆöÊಸ್ ಗರ್ಲ್ಸ್, ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು, ಕೂರ್ಗ್ ವಂಡರ್ ವಿಮೆನ್ ತಂಡಗಳು ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗೆ ಬೆಲ್ಲು ಕುಟ್ಟಪ್ಪ (೯೫೯೧೩೬೫೧೫೨) ಅವರನ್ನು ಸಂಪರ್ಕಿಸಬಹುದು.
- ಶಶಿ ಸೋಮಯ್ಯ