ಗೋಣಿಕೊಪ್ಪ, ಅ. ೧೪: ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯುಧ ಪೂಜಾ ಪ್ರಯುಕ್ತ ಅಕ್ಟೋಬರ್ ೨೦ ರಂದು ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ಆಯುಧ ಪೂಜೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾಪಂಡ ಕೆ. ಭೀಮಯ್ಯ ತಿಳಿಸಿದ್ದಾರೆ.

ಕಾವೇರಿ ಕಲಾ ವೇದಿಕೆಯಲ್ಲಿ ೪ ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಸ್ವರ ಸನ್ನಿಧಿ ಟ್ರಸ್ಟ್ ಈವೆಂಟ್ಸ್ ವತಿಯಿಂದ ಸಂಗೀತ ರಸ ಸಂಜೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಪ್ರಸಿದ್ದ ಹಿನ್ನೆಲೆ ಗಾಯಕ ಧ್ವಾಪರ ಚಿತ್ರದ ಜೇನ ದನಿಯೋಳೆ ಗೀತೆ ಖ್ಯಾತಿಯ ಜಸ್ ಕರಣ್ ಹಾಗೂ ಸರಿಗಮಪ ಖ್ಯಾತಿಯ ಅಂಕಿತ ಕುಂಡು, ಸುಪ್ರಿತ್ ಫಾಲ್ಗುಣ್, ರಮ್ಯ ಪ್ರಸನ್ನ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ. ಟೀಂ ಅಶೋಕ್ ತಮಟೆ ಮತ್ತು ನಗಾರಿ ಕಲಾ ತಂಡ ಜಾನಪದ ಪ್ರಕಾರಗಳ ಜುಗಲ್ ಬಂಧಿ ಇರಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಎಂ. ಎನ್. ಮೋಹನ್, ಕಾರ್ಯದರ್ಶಿ ಎಸ್. ಪ್ರಕಾಶ್, ಖಜಾಂಚಿಯಾಗಿ ಎ. ಚಾರ್ಲಿ, ಸಹ ಕಾಯದರ್ಶಿಯಾಗಿ ಅಭಿಷೇಕ್, ನಿರ್ದೇಶಕ ಎಂ. ಇ. ನಜೀರ್ ಅಹಮ್ಮದ್ ಇದ್ದರು.