ಶನಿವಾರಸಂತೆ, ಅ. ೧೪: ಸಮೀಪದ ಕೊಡ್ಲಿಪೇಟೆಯ ನೇಸರ ಉದ್ಯಾನ ನಂದಿಪುರ ಕೆರೆಗೆ ಕಾವೇರಿ ಆರತಿ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ ತಾ. ೧೭ ರಂದು ಮಧ್ಯಾಹ್ನ ೩ ಗಂಟೆಗೆ ಆರಂಭವಾಗಲಿದೆ. ಸಂಜೆ ೪ ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ನಾಟಕ ತಂಡ ಅಂತರAಗ - ಬಹಿರಂಗದ ಆಶ್ರಯದಲ್ಲಿ ಖ್ಯಾತ ರಂಗಕರ್ಮಿ ಭೀಷ್ಮರಾಮಯ್ಯ ಅವರ ನೇತೃತ್ವದಲ್ಲಿ “ಬಾಯಿ ಬಡಕಿ’ ಎಂಬ ಸಾಮಾಜಿಕ ಚಿಂತನೆಯ ನಾಟಕ ಪ್ರದರ್ಶನವಿದೆ.
ಸಂಜೆ ೬ ಗಂಟೆಗೆ ಕೊಡ್ಲಿಪೇಟೆ ಗಣಪತಿ ದೇವಸ್ಥಾನದಿಂದ ನೇಸರ ಉದ್ಯಾನದವರೆಗೆ ನಂದಿಧ್ವಜ, ಕಲಶ, ಪೂರ್ಣಕುಂಭ ಹೊತ್ತ ಮಹಿಳೆಯರ ಮೆರವಣಿಗೆ ನಡೆಯಲಿದೆ.
೬.೩೦ಕ್ಕೆ ಚಿಕ್ಕಮಗಳೂರಿನ ಶ್ರೀದೇವಿ ಗುರುಕುಲದ ಮಾತೆಯರಿಂದ ರುದ್ರಪಠಣ ಹಾಗೂ ಭಜನೆ ಮತ್ತು ಯಜುರ್ವೇದ ಶ್ರೀ ಶರತ್ ಶಾಸ್ತಿçಗಳ ತಂಡದವರಿAದ ಕಾವೇರಿ ಆರತಿ ೭.೫೫ ಕ್ಕೆ ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವ ಸಂದರ್ಭಕ್ಕೆ ಸರಿಯಾಗಿ ನಂದಿಪುರ ಕೆರೆಗೆ ಬಾಗಿನ ಅರ್ಪಣೆ ಮಾಡಲಾಗುವುದು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಹೆಚ್.ಎಸ್. ಚಂದ್ರಮೌಳಿ ತಿಳಿಸಿದ್ದಾರೆ.