ಗೋಣಿಕೊಪ್ಪಲು. ಅ. ೧೩: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪಲು ದಸರಾ ಅಂಗವಾಗಿ ನಡೆದ ೨ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾವೇರಿ ಕಲಾ ವೇದಿಕೆಯಲ್ಲಿ ಪ್ರತಿಭೆಯ ಅನಾವರಣದೊಂದಿಗೆ ಮನರಂಜನೆ ಉಣಬಡಿಸಿತು.

ಜಿಶಾ ಹರೀಶ್ ತಂಡ, ಚೈತನ್ಯ ತಂಡ, ಶ್ರೀ ಲಕ್ಷಿö್ಮÃ ಮಹಿಳಾ ವಿಭಾಗದಿಂದ ತಿರುವಾದಿರ ನೃತ್ಯ ಹಾಗೂ ನಾಟ್ಯ ಸಂಕಲ್ಪ ತಂಡದಿAದ ವೈವಿಧ್ಯಮಯ ನೃತ್ಯ ಹಾಗೂ ಉಡುಪಿಯ ಭಾರ್ಗವಿ ಇವೆಂಟ್ಸ್ ತಂಡದಿAದ ನೃತ್ಯ ಸೌರಭ ಹಾಗೂ ಗಾಯನ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು.