ಚೆನ್ನೆöÊ, ಅ. ೧೩: ಜಪಾನ್ನಲ್ಲಿ ನಡೆದ ೨೦೨೬ರ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ಅಂತರರಾಷ್ಟಿçÃಯ ಸ್ಕಾ÷್ವಷ್ ಆಟಗಾರ್ತಿ ಮೂಲತಃ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರಿಗೆ, ತಮಿಳುನಾಡು ವಿದ್ಯುತ್ ವಿತರಣಾ ನಿಗಮದಲ್ಲಿ (ಖಿಓPಆಅಐ) ಕ್ರೀಡಾ ವಿಭಾಗದ ಉಪ ನಿರ್ದೇಶಕ ಹುದ್ದೆಯಿಂದ ಕ್ರೀಡಾ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿನ ಅವರ ಸಾಧನೆಗಳನ್ನು ಪರಿಗಣಿಸಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸೂಚನೆಯ ಮೇರೆಗೆ ಈ ಬಡ್ತಿಯನ್ನು ನೀಡಲಾಗಿದೆ.
ಏಷ್ಯನ್ ಕ್ರೀಡಾಕೂಟದಲ್ಲಿನ ಅವರ ಸಾಧನೆಗಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇತ್ತೀಚೆಗೆ ಜೋಶ್ನಾ ಚಿಣ್ಣಪ್ಪ ಅವರಿಗೆ ೬೦ ಲಕ್ಷ ರೂಪಾಯಿಗಳ ಪ್ರೋತ್ಸಾಹಧನವನ್ನು ಘೋಷಿಸಿ, ಹಸ್ತಾಂತರಿಸಿದ್ದರು.
ಅವರು ೨೦೨೬ರ ಏಷ್ಯನ್ ಕ್ರೀಡಾಕೂಟದಲ್ಲಿ ಸಹ ಆಟಗಾರ ವೇಲವನ್ ಸೆಂಥಿಲ್ಕುಮಾರ್ ಅವರೊಂದಿಗೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮತ್ತು ಭಾರತೀಯ ಮಹಿಳಾ ತಂಡದ ಪರವಾಗಿ ಆಡಿ ಮತ್ತೊಂದು ಕಂಚಿನ ಪದಕವನ್ನು ಗೆದ್ದಿದ್ದರು.