ಮಡಿಕೇರಿ, ಅ. ೧೩; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಮಿತಿ, ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಮದೆನಾಡಿನ ನಟೇಶ ನೃತ್ಯ ಶಾಲೆಯ ಮಕ್ಕಳಿಂದ ಶಾಸ್ತಿçÃಯ ನೃತ್ಯ, ಕುಶಾಲನಗರದ ನಟರಾಜ ಸಂಗೀತ ನೃತ್ಯ ಕಲಾ ಕೇಂದ್ರದವರಿAದ ನೃತ್ಯ ವೈವಿಧ್ಯ, ಡಾ. ಕಾ. ರಾಮೇಶ್ವರಪ್ಪ ಮತ್ತು ತಂಡದವರಿAದ ಜಾನಪದೀಯ ಕಾರ್ಯಕ್ರಮ, ಕುಶಾಲನಗರದ ಕುಂದನ ನೃತ್ಯಾಲಯದವರಿಂದ ನೃತ್ಯ ವೈವಿಧ್ಯ ಹಾಗೂ ಮೈಸೂರಿನ ಆಕಾಶ್ ಮತ್ತು ತಂಡದವರಿAದ ರಸ ಸಂಜೆ ಕಾರ್ಯಕ್ರಮಗಳು ಮೂಡಿ ಬಂದವು.