ಬೆಂಗಳೂರು, ಅ. ೧೩: ರಾಜ್ಯದ ಎಲ್ಲಾ ವನ್ಯ ಜೀವಿ ಸಫಾರಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್ ಆದೇಶ ಹೊರಡಿಸಿ ದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ದನ್ವಯ ಓಖಿಅಂ ಕಾರ್ಯದರ್ಶಿಗಳ ಜೊತೆ ವೀಡಿಯೋ ಸಂವಾದ ಸಭೆ ನಡೆಸಿ ವನ್ಯಜೀವಿ ಸಫಾರಿಗಳಲ್ಲಿ ಪ್ರವಾಸಿಗರು, ಚಾಲಕರು ಮತ್ತು ಗೈಡ್‌ಗಳ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸಿ ಆದೇಶಿಸಲಾಗಿದೆ. ಜೊತೆಗೆ, ತುರ್ತು ಸಂವಹನಕ್ಕಾಗಿ ಎಲ್ಲಾ ಸಫಾರಿ ವಾಹನಗಳಿಗೂ ವಯರ್‌ಲೆಸ್ ವ್ಯವಸ್ಥೆ ಅಳವಡಿಸುವಂತೆ ಸೂಚಿಸಿದ್ದಾರೆ. ಇನ್ನು ಮುಂದೆ ಸಫಾರಿ ವೇಳೆ ಪ್ರವಾಸಿಗರು, ವಾಹನ ಚಾಲಕರು ಹಾಗೂ ಮಾರ್ಗದರ್ಶಕರು ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕುಮಾರ್ ಪುಷ್ಕರ್ ಅವರು ಅಕ್ಟೋಬರ್ ೯ ರಂದು ಹೊರಡಿಸಿರುವ ಆದೇಶದ ಪ್ರಕಾರ ಸುಪ್ರೀಂ ಕೋರ್ಟ್ನ ದಿನಾಂಕ ೧೭-೧೧-೨೦೨೫ರ ಆದೇಶದ ಪ್ಯಾರಾ ೪೮.೫ರ ಅನ್ವಯ, ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ಭಾಗಗಳ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ. ಪ್ರವಾಸಿಗರು, ವಾಹನ ಚಾಲಕರು ಹಾಗೂ ನೇಚರ್ ಗೈಡ್‌ಗಳು ಸಫಾರಿಗೆ ತೆರಳುವ ಮುನ್ನ ತಮ್ಮ ಮೊಬೈಲ್ ಫೋನ್‌ಗಳನ್ನು ಸೂಕ್ತ ಸ್ಥಳಗಳಲ್ಲಿ ಇಡಲು ಹಾಗೂ ಸಫಾರಿ ವಾಹನಗಳಲ್ಲಿ ಂiಡಿಠಿಟಚಿಟಿe moಜe ನಲ್ಲಿ ಬಳಸಲು ಅರಣ್ಯ ವಿಭಾಗಾಧಿಕಾರಿಗಳು (ಡಿಸಿಎಫ್) ಅಗತ್ಯ ಕ್ರಮಕೈಗೊಳ್ಳಬೇಕು. ಮೊಬೈಲ್ ಬಳಕೆ ನಿಷೇಧಿಸಿರುವ ಬಗ್ಗೆ ಎಲ್ಲಾ ಸಫಾರಿ ವಾಹನಗಳಲ್ಲಿ ಮತ್ತು ಆರಂಭಿಕ ಸ್ಥಳದಲ್ಲಿ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸಬೇಕು ಹಾಗೂ ಪ್ರವಾಸಿಗರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಪ್ರವಾಸಿಗರು ಮತ್ತು ಸಿಬ್ಬಂದಿಗಳ ಭದ್ರತೆಗಾಗಿ ಎಲ್ಲಾ ಸಫಾರಿ ವಾಹನಗಳಲ್ಲಿ ಮೊಬೈಲ್ ನಿಸ್ತಂತು ಸಂಪರ್ಕ ವ್ಯವಸ್ಥೆಯನ್ನು (ಒobiಟe Wiಡಿeಟess Seಣ) ಕಡ್ಡಾಯವಾಗಿ ಅಳವಡಿಸಿ ಕಾರ್ಯನಿರ್ವಹಿಸುವಂತೆ ಖಚಿತಪಡಿಸಿಕೊಳ್ಳಬೇಕು. ಮೊಬೈಲ್ ಬದಲಿಗೆ ನಿಯಮಾನುಸಾರ ಕ್ಯಾಮೆರಾಗಳನ್ನು ಬಳಸಬಹುದಾದ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸಲು ಟಿಕೆಟ್ ಬುಕಿಂಗ್ ತಂತ್ರಾAಶದ ಮೂಲಕ ಸೂಕ್ತ ಸೂಚನೆ ನೀಡಬೇಕು.

ಒಟ್ಟಾರೆಯಾಗಿ, ವನ್ಯಜೀವಿಗಳ ಸಂರಕ್ಷಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಫಾರಿ ವೇಳೆ ಮೊಬೈಲ್ ಬಳಕೆ ನಿಷೇಧಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಇದರ ಕಟ್ಟುನಿಟ್ಟಿನ ಪಾಲನೆಯಿಂದ ಪ್ರಾಣಿಗಳಿಗೆ ಉಂಟಾಗುವ ತೊಂದರೆ ತಪ್ಪಲಿದ್ದು, ಪ್ರವಾಸಿಗರು ಪ್ರಕೃತಿಯನ್ನು ಕ್ಯಾಮೆರಾ ಮೂಲಕ ಆನಂದಿಸಲು ಹೊಸ ಮಾರ್ಗಸೂಚಿ ಸಹಕಾರಿಯಾಗಲಿದೆ. ಈ ಹಿಂದೆ ಸಫಾರಿ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಏರೋಪ್ಲೇನ್ ಮೋಡ್‌ನಲ್ಲಿರಿಸಿ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶ ಕಲ್ಪಿಸಲಾಗಿತ್ತು.

ಹುಲಿ ಸಂರಕ್ಷಿತ ಪ್ರದೇಶದ ಕೋರ್ ಪ್ರದೇಶಗಳಲ್ಲಿ ಮೊಬೈಲ್ ಬಳಕೆಗೆ ಅನುಮತಿಸಬಾರದು ಎಂದು ಆದೇಶಿಸಿ ಮುಂದಿನ ಕ್ರಮ ವಹಿಸುವಂತೆ ಆದೇಶಿತ್ತು. ಅದರಂತೆ, ವನ್ಯಜೀವಿ ಸಫಾರಿಯಲ್ಲಿ ಚಾಲಕರು, ಪ್ರವಾಸಿಗರು ಮತ್ತು ಗೈಡ್‌ಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಏರೋಪ್ಲೇನ್ ಮೋಡ್‌ನಲ್ಲಿರಿಸಿ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶ ಕಲ್ಪಿಸಲಾಗಿತ್ತು. ಮುಂದುವರೆದು, ಕಳೆದ ಸೆಪ್ಟಂಬರ್ ೧೫ ರಂದು ಓಖಿಅಂ ಕಾರ್ಯದರ್ಶಿ ಜೊತೆ ಸಭೆ ನಡೆಸಿ ರಾಜ್ಯದ ಕೋರ್ ಭಾಗಗಳಲ್ಲಿನ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ವಾಗಿ ನಿರ್ಬಂಧಿಸಲಾಗಿದೆ ಎಂದು ಅಕ್ಟೋಬರ್ ೯ ರಂದು ಹೊರಡಿಸಿರುವ ಆದೇಶದಲ್ಲಿ ಪಿಸಿಸಿಎಫ್ ಕುಮಾರ್ ಪುಷ್ಕರ್ ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ದಿನ ನಡೆಯುವ ಸಫಾರಿಯಲ್ಲಿ ಪ್ರವಾಸಿಗರು ವನ್ಯ ಜೀವಿಗಳು ಸಿಕ್ಕ ಕೂಡಲೇ ಫೋಟೋ ತೆಗೆಯಲು ಹಾತೊರೆಯುತ್ತಿರುತ್ತಾರೆ. ಆದರೆ ಎಲ್ಲಾ ಸಫಾರಿ ವಾಹನಗಳ ಮಾರ್ಗದಲ್ಲಿ ವನ್ಯ ಜೀವಿಗಳು ಗೋಚರವಾಗುವುದಿಲ್ಲ. ಒಂದು ವೇಳೆ ಗೋಚರಿಸಿದ ಕೂಡಲೇ ಆ ಸಫಾರಿ ವಾಹನದ ಸಿಬ್ಬಂದಿ ಇತರ ವಾಹನಗಳಿಗೂ ಮಾಹಿತಿ ನೀಡುತ್ತಾರೆ. ಪ್ರವಾಸಿಗರ ಟಿಪ್ಸ್ ಆಸೆಗೆ ಇತರ ಸಫಾರಿ ಚಾಲಕರೂ ಕೂಡಲೇ ಆ ಪ್ರದೇಶಕ್ಕೆ ತೆರಳುತ್ತಾರೆ. ಇದರಿಂದ ಪ್ರಾಣಿಗಳಿಗೆ ತೀವ್ರ ಕಿರಿಕಿರಿ ಆಗುತಿತ್ತು. ಆದರೆ ಮೊಬೈಲ್ ಬಳಕೆಯ ನಿಷೇಧದಿಂದಾಗಿ ಪ್ರಾಣಿಗಳು ಸ್ವಚ್ಛಂದವಾಗಿ ಸಂಚಾರ ಹಾಗೂ ವಿಹರಿಸಬಹುದಾಗಿದೆ.