*ಗೋಣಿಕೊಪ್ಪ, ಅ. ೧೩: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅಕ್ಷರ ಅಭ್ಯಾಸ, ಪೂರಕ ಪೌಷ್ಟಿಕ ಆಹಾರದ ಬಗ್ಗೆ ಆರೋಗ್ಯ ಚುಚ್ಚು ಮದ್ದು ಯೋಜನೆಯ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಜಿ ಸದಸ್ಯ ಅಬ್ಜಲ್, ಆರೋಗ್ಯ ವೈದ್ಯಾಧಿಕಾರಿ ನಜ್ಲ, ಬಿಎಚ್‌ಓ ಶಿವಯ್ಯ, ಆರೋಗ್ಯ ಕಾರ್ಯಕರ್ತೆ ಶಿವಮ್ಮ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ, ಅಂಗನವಾಡಿ ಕಾರ್ಯಕರ್ತೆ ದೇವಕಿ, ಸುಮತಿ, ಲತಾ, ಸಂಧ್ಯಾ, ಸಹಾಯಕಿ ಯಮುನಾ, ಪುಷ್ಪವೇಣಿ ಹಾಗೂ ಇತರರು ಹಾಜರಿದ್ದರು.