ಸುಂಟಿಕೊಪ್ಪ, ಅ. ೧೨: ಕೊಡಗರಹಳ್ಳಿಯ ಶ್ರೀ ಭೈತೊರಪ್ಪ ಪೊವ್ವದಿ ಬಸವೇಶ್ವರ ದೇವಸ್ಥಾನದಲ್ಲಿ ತಾ.೧೯ ರವರೆಗೆ ನವರಾತ್ರಿ ಪೂಜೆ ನಡೆಯಲಿದೆ.

ನವರಾತ್ರಿ ಅಂಗವಾಗಿ ಪ್ರತಿದಿನ ಸಂಜೆ ಶ್ರೀ ರಂಗ ಪೂಜೆ, ಪುಷ್ಪಾರ್ಚನೆ, ಸಹಸ್ರನಾಮ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಶ್ರೀ ಸೂಕ್ತಭಿಷೇಕ ನಡೆಯಲಿದೆ.

ತಾ.೨೦ ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಾ.೧೩ ರಂದು(ಇAದು) ಚಾಮುಂಡೇಶ್ವರಿ ಭಜನಾ ಮಂಡಳಿ ಕೊಡಗರಹಳ್ಳಿ ತಂಡದಿAದ ಭಜನಾ ಕಾರ್ಯಕ್ರಮ ನಡೆಯಲಿದೆ. ತಾ.೧೫ ರಂದು ಓಂ ಶಕ್ತಿ ಭೂತನಕಾಡು ಭಜನಾ ಕಾರ್ಯಕ್ರಮ, ತಾ.೧೬ ರಂದು ದುರ್ಗಾಹೋಮ, ತಾ.೧೭ ರಂದು ಕಂಬಿಬಾಣೆಯ ಶ್ರೀ.ರಾಮ ಮತ್ತು ಚಾಮುಂಡೇಶ್ವರಿ ಮಹಿಳಾ ಭಜನಾ ಕಾರ್ಯಕ್ರಮ, ತಾ.೧೮ ರಂದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ತಾ.೧೯ ರಂದು ವಾಹನ ಪೂಜೆ, ತಾ.೨೦ ರಂದು ದೇವಿಯ ಶೋಭಾಯಾತ್ರೆಯೊಂದಿಗೆ ನವರಾತ್ರಿ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ೧೦ ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ ದೇವಿಗೆ ಪ್ರತಿದಿನ ವಿಶೇಷ ಅಲಂಕಾರ ಪೂಜೆಗಳು ನೆರವೇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ತಾ.೧೯ ರವರೆಗೆ ವಿವಿಧ ಅಲಂಕಾರ ವಿಶೇಷ ಪೂಜೆಗಳು ನಡೆಯಲಿವೆ. ತಾ.೧೩ ರಂದು ಗಂಧ ಅಲಂಕಾರ, ತಾ.೧೪ ರಂದು ಭಸ್ಮ ಅಲಂಕಾರ, ತಾ.೧೫ ರಂದು ಕಡ್ಲೆ, ತಾ.೧೬ ಬೆಣ್ಣೆ ಅಲಂಕಾರ, ತಾ.೧೭ ರಂದು ದ್ರಾಕ್ಷಿ ಮತ್ತು ಗೊಡಂಬಿ ಅಲಂಕಾರ, ತಾ.೧೮ ರಂದು ಅರಶಿನ ಕುಂಕುಮ ಅಲಂಕಾರ ಹಾಗೂ ತಾ.೧೯ ರಂದು ಆಭರಣ ಹೂವಿನ ಅಲಂಕಾರಗಳು ನಡೆಯಲಿವೆ. ತಾ.೧೮ ರಂದು ಸಂಜೆ ಆಯುಧ ಪೂಜೆ ಪ್ರಯುಕ್ತ ವಾಹನಗಳಿಗೆ ಪೂಜೆ ನೆರವೇರಿಸಲಾಗುವದೆಂದು ದೇವಸ್ಥಾನ ಸಮಿತಿ ತಿಳಿಸಿದೆ.